ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಮರೆಯಾದ ಬೆಂಗಳೂರಿನ ಭೋಗನಹಳ್ಳಿ ಕೆರೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನಲ್ಲಿ ಅಳಿವಿನಂಚಿನ ಪಟ್ಟಿ ಸೇರುತ್ತಿರುವ ಕೆರೆಗಳಿಗೆ ಹೊಸ ಸೇರ್ಪಡೆ ಭೋಗನಹಳ್ಳಿ ಕೆರೆ. ಒಂದು ಕಾಲದಲ್ಲಿ ಭೋಗನಹಳ್ಳಿ ಸುತ್ತ ಮುತ್ತಲ ಕೃಷಿ ಭೂಮಿ, ಜಾನುವಾರುಗಳಗೆ ನೀರೊದಗಿಸುತ್ತಿದ್ದ ಕೆರೆ ಇದೀಗ ಸಂಪೂರ್ಣ ಬತ್ತಿದೆ. ಕೆರೆ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ 1.92 ಅನುದಾನ ಬಳಕೆಯಾಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ! ಆದರೆ ಕೆರೆಯಂತೂ ಕಣ್ಮರೆಯಾಗಿದೆ.

ನರಸಿಂಹ ಶಾಸ್ತ್ರಿ ಎಂಬ ದಾನಿಯೊಬ್ಬರು ದಾನ ಮಾಡಿದ್ದ ಐದು ಎಕರೆ ಜಾಗದಲ್ಲಿದ್ದ ಕೆರೆಯಿಂದ ಹಸು ಮತ್ತು ಕುರಿಗಳಿಗೆ ಕುಡಿಯುವ ನೀರು ದೊರಕಬೇಕು ಎಂಬುದು ಶಾಸ್ತ್ರಿಯವರ ಅಸೆಯಾಗಿತ್ತು. ಆದರೆ 2012 ರ ನಂತರ ಈ ಕೆರೆ ಬತ್ತುತ್ತ ಬಂದು, ಕ್ರಮೇಣ ಸುತ್ತಲೂ ಇದ್ದ ಕಟ್ಟೆಯನ್ನು ಬಿಟ್ಟರೆ ಕೆರೆಯಲ್ಲಿ ಹನಿ ನೀರೂ ಉಳಿಯದಂತಾಗಿದೆ.

ಸಂಸತ್ತಿನಲ್ಲಿ ಬೆಂಗಳೂರು ಕೆರೆ ಒತ್ತುವರಿ ಬಗ್ಗೆ ಧ್ವನಿ ಎತ್ತಿದ ಸಂಸದ ರಾಜೀವ್ಸಂಸತ್ತಿನಲ್ಲಿ ಬೆಂಗಳೂರು ಕೆರೆ ಒತ್ತುವರಿ ಬಗ್ಗೆ ಧ್ವನಿ ಎತ್ತಿದ ಸಂಸದ ರಾಜೀವ್

ಈ ಕುರಿತು ಎ. ಜಿ. ಲಕ್ಷ್ಮಣನ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, "ನಮ್ಮ ಮನೆಯ ಎದುರು ಇರುವ ಭೋಗನಹಳ್ಳಿ ಕೆರೆ ಒಂದು ವರ್ಷದಲ್ಲಿ ಹೇಗೆ ನಾಶವಾಗಿದೆ ನೋಡಿ. ಅಭಿವೃದ್ಧಿಗಾಗಿ ಕೆರೆಯಲ್ಲಿದ್ದ ನೀರನ್ನು ತೆಗೆದಿದ್ದು, ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಸದ್ಯಕ್ಕೆ ಇಲ್ಲಿ ಹನಿ ನೀರಿಲ್ಲ, ಈ ಒಣ ಮರಗಳನ್ನು ಕತ್ತರಿಸಲು ಉಪಯೋಗಿಸಲಾಗುತ್ತಿದೆ" ಎಂದಿದ್ದಾರೆ.

Why The Situation At Bhoganahalli Reeks Of Apathy

2012 ರಲ್ಲಿ ಕೆರ ಅಭಿವೃದ್ಧಿಗಾಗಿ 1.29 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದ್ರೆ ಎಂದಿಗೂ ಈ ಪ್ರದೇಶಕ್ಕೆ ಆಗಮಿಸಿ, ಕೆರೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಗಂಭೀರವಾಗಿ ಅಧಿಕಾರಿಗಳು ಯೋಚಿಸಲೇ ಇಲ್ಲ ಎನ್ನುತ್ತಾರೆ ಭೋಗನಹಳ್ಳಿಯ ಜನ. ಕೆರೆ ಇದ್ದ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಿದ್ದ ಹಸುಗಳು ಮತ್ತು ಸುತ್ತ ಮುತ್ತ ಇದ್ದ ಹಸಿರು ಈಗಿಲ್ಲ!

ಬೆಂಗಳೂರಿನ 19 ಕೆರೆಗಳನ್ನು ಉಳಿಸಲು ಸಮಗ್ರ ಯೋಜನೆಗಳನ್ನು ರೂಪಿಸುವಂತೆ ಈಗಾಗಲೇ ಕರ್ನಾಟಕ ಹೈಕೋರ್ಟ್, ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದೆ.

ನುಂಗಣ್ಣರ ಪಾಲಾಗಿದೆ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆನುಂಗಣ್ಣರ ಪಾಲಾಗಿದೆ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ

ಕೆರೆಗಳಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಕೂಡಲೇ ಕೆರ ಇರುವ ಜಾಗಗಳನ್ನು ಸರ್ಕಾರ ವಶಕ್ಕೆ ಪಡೆದು, ಅದರ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದಿದೆ. ಅಕಸ್ಮಾತ್ ಅದು ಸಾಧ್ಯವಾಗದೆ ಇದ್ದರೆ, ಕೃತಕ ಕೆರೆಗಳ ನಿರ್ಮಾಣವನ್ನು ಮಾಡಿ ಈಗ ಆಗಿರುವ ನಷ್ಟವನ್ನು ಭರಿಸಬೇಕು ಎಂದು ಹೈಕೋರ್ಟ್ ಹೇಳಿದೆ.

English summary
Why The Situation At Bhoganahalli Reeks Of Apathy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X