ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2014 ರ ಆ ಟ್ವೀಟ್ ಅನ್ನು ತೇಜಸ್ವಿ ಸೂರ್ಯ ಈಗ ಡಿಲೀಟ್ ಮಾಡಿದ್ದೇಕೆ?

|
Google Oneindia Kannada News

Recommended Video

Lok Sabha Elections 2019 : 2014ರ ತನ್ನ ಟ್ವೀಟ್ ಅನ್ನ ತೇಜಸ್ವಿ ಸೂರ್ಯ ಡಿಲೀಟ್ ಮಾಡಿದ್ಯಾಕೆ? |Oneindia Kannada

ಬೆಂಗಳೂರು, ಮಾರ್ಚ್ 27: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ತೇಜಸ್ವಿ ಸೂರ್ಯ ಅವರು, 2014 ರಲ್ಲಿ ತಾವು ಮಾಡಿದ್ದ ಟ್ವೀಟ್ ವೊಂದನ್ನು ಡಿಲೀಟ್ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಹಿಳಾ ಮೀಸಲಾತಿ ವಿಧೇಯಕದ ಕುರಿತು ಅವರು ಮಾಡಿದ್ದ ಟ್ವೀಟ್ ಅನ್ನು ಅವರು ಡಿಲೀಟ್ ಮಾಡಿರುವುದು, ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣದ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದು ಎರಡನ್ನೂ ಲಿಂಕ್ ಮಾಡಿ, ಟ್ವಿಟ್ಟರ್ ನಲ್ಲಿ ತೇಜಸ್ವಿ ಸೂರ್ಯ ಅವರನ್ನು ಕೆಲವರು ಟೀಕಿಸಿದ್ದಾರೆ.

ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?

ತೇಜಸ್ವಿ ಸೂರ್ಯ ಅವರ ಟ್ವೀಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. "ಮಹಿಳಾ ಮೀಸಲಾತಿ ವಿಧೇಯಕವೊಂದನ್ನು ಬಿಟ್ಟರೆ ಮೋದಿ ಸರ್ಕಾರದ ಧ್ಯೇಯ ಸ್ಫೂರ್ತಿದಾಯಕವಾಗಿದೆ. ಮಹಳಾ ಮೀಸಲಾತಿ ವಾಸ್ತವಕ್ಕೆ ಬಂದ ದಿನ ನಿಜಕ್ಕೂ ಭಯದ ದಿನ" ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಅವರೀಗ ಡಿಲೇಟ್ ಮಾಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಮಹಿಳೆಯರ ಬೆಲೆ ಈಗ ಅರ್ಥವಾಯ್ತಾ?

ತೇಜಸ್ವಿ ಸೂರ್ಯ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇಕೆ? 50 % ಮಹಿಳಾ ಮತದಾರರ ಬೆಲೆ ಏನು ಎಂಬುದು ಈಗ ಅರ್ಥವಾಯಿತೆ? ಎಂದು ಲಾವಣ್ಯ ಬಲ್ಲಾಳ್ ಟ್ವೀಟ್ ಮಾಡಿದ್ದಾರೆ.

Array

ಟಿಕೆಟ್ ಪಡೆಯೋಕೆ ಇದೇ ಅರ್ಹತೆ!

ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ಸಿಗೋಕೆ ಇದೇ ಅರ್ಹತೆ ಎಂದು ಅರ್ನಜ್ ಹಥಿರಾಮ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರ

ಮನುಸ್ಮೃತಿಯಿಂದ ಸ್ಫೂರ್ತಿ!

ತೇಜಸ್ವಿ ಸೂರ್ಯ ಅವರ ಈ ಟ್ವೀಟ್ ಅವರು ಹೇಗೆ ಮೋದಿ ಅವರ ಥರವೇ ಯೋಚಿಸುತ್ತಾರೆ ಮತ್ತು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

ತೇಜಸ್ವಿನಿ ಬದಲು ತೇಜಸ್ವಿ

ತೇಜಸ್ವಿನಿ ಬದಲು ತೇಜಸ್ವಿ

ಕೇಂದ್ರ ಸಚಿವರಾಗಿದ್ದ ದಿ.ಅನಂತ್ ಕುಮಾರ್ ಅವರ ನಿಧನದ ನಂತರ ಈ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಅವರು ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ಸೋಮವಾರ ತಡರಾತ್ರಿಯವರೆಗೂ ನಡೆದ ರಾಜಕೀಯ ಬೆಳವಣಿಗೆಯ ನಂತರ 28 ವರ್ಷ ವಯಸ್ಸಿನ ಯುವ ವಕೀಲ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು.

English summary
Lok Sabha elections 2019: Why BJP Bangalore south constituency BJP candidate Tejasvi Surya deleted his 2014 tweet on women reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X