ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಣ್ಣ ಅವರಿಗೆ ರಾಜಕೀಯ ಇಂಟರೆಸ್ಟ್ ಇಲ್ಲವೇ?

By Rajendra
|
Google Oneindia Kannada News

ತಮ್ಮ ಪತ್ನಿ ಗೀತಾ ಅವರ ಬೆಂಬಲಕ್ಕೆ ನಿಂತಿರುವ ಶಿವಣ್ಣ ಅವರೇ ಸ್ವತಃ ರಾಜಕೀಯಕ್ಕೆ ಅಡಿ ಇಡಬಹುದಿತ್ತಲ್ಲವೇ? ಅವರೇಕೆ ರಾಜಕೀಯಕ್ಕೆ ಬರಲಿಲ್ಲ. ಅವರು ಕಿಂಗ್ ಅಲ್ಲ ಕಿಂಗ್ ಮೇಕರ್ ಆಗಬಹುದೇ? ಈ ಬಗ್ಗೆ ಶಿವಣ್ಣ ಏನು ಹೇಳುತ್ತಾರೆ? ರಾಜಕೀಯದ ಬಗ್ಗೆ ಅವರ ನಿಲುವೇನು? ಈ ಬಗ್ಗೆ ಶಿವಣ್ಣ ಅವರನ್ನು ಮಾತಿಗೆಳೆದಾಗ ಏನೆಂದರು...

ಶಿವಣ್ಣ ಅವರಿಗೆ ಎಲ್ಲಾ ಪಕ್ಷಗಳ ಅಭಿಮಾನಿಗಳಿರುತ್ತಾರೆ? ಈ ಸಂದರ್ಭದಲ್ಲಿ ನಿಮ್ಮ ಅಭಿಮಾನಿಗಳನ್ನು ಹೇಗೆ ಸಮಾಧಾನಪಡಿಸುತ್ತೀರಿ?
ನಾನು ಯಾವುದೇ ಅಭಿಮಾನಿಗಳನ್ನೂ ಆ ಪಕ್ಷ ಬಿಟ್ಟು ಬನ್ನಿ, ನನ್ನ ಹೆಂಡ್ತಿಯನ್ನು ಸಪೋರ್ಟ್ ಮಾಡಿ ಎಂದು ಕೇಳಿಕೊಂಡಿಲ್ಲ. ಎಲ್ಲರಿಗೂ ಅವರದೇ ಅದಂತಹ ನಿಲುವಿರುತ್ತದೆ. ನನ್ನ ಅಭಿಮಾನಿಗಳು ನನ್ನ ಸಿನಿಮಾ ನೋಡ್ಬೇಕು ಬೇರೆಯವರ ಸಿನಿಮಾ ನೋಡಬೇಡಿ ಎಂದು ಒತ್ತಡ ಹಾಕಿಲ್ಲ. ಅದೇ ರೀತಿ ಇಲ್ಲೂ ಅಷ್ಟೆನೆ. ನಾನು ಪ್ರಚಾರಕ್ಕೆ ಹೋದರೂನು ಕೇವಲ ನನ್ನ ಹೆಂಡತಿಗಾಗಿ. ಏಕೆಂದರೆ, ನನಗಾಗಿ ಅವಳು ಸಾಕಷ್ಟು ಕೊಟ್ಟಿದ್ದಾಳೆ. ನಾನು ಅದೇ ರೀತಿ ಅವಳಿಗೆ ಸಪೋರ್ಟ್ ಮಾಡಬೇಕು ಎಂದು ಬಯಸುತ್ತೇನೆ. ಯಾವುದೇ ಅಭಿಮಾನಿಗಳಿಗಳಿಗೂ ನಾನು ಆ ಪಕ್ಷ ಬಿಟ್ಟು ಬಂದುಬಿಡಿ ಎಂದು ಹೇಳಲ್ಲ. ಅವರದೇ ಆದಂತಹ ಪಕ್ಷ, ನೀತಿ ಆಲೋಚನೆಗಳಿರುತ್ತದೆ. ಅದನ್ನೆಲ್ಲ ಬಿಟ್ಟು ಬನ್ನಿ ಎಂದು ಹೇಳಲಿಕ್ಕೆ ನಾನ್ಯಾರು. ಮಹಿಳೆಯರು ರಾಜಕೀಯಕ್ಕೆ ಬರಬೇಕು. ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದಷ್ಟೇ ನಾನು ಕೇಳಿಕೊಳ್ಳುತ್ತೇನೆ.

ಹಾಗಿದ್ದರೆ ಓಟ್ ಹಾಕಿ ಎಂದು ನಿಮ್ಮ ಅಭಿಮಾನಿಗಳನ್ನು ಹೇಗೆ ಕೇಳ್ತೀರಾ?
ಅದು ಅವರವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು. ಅವರು ಅವರದೇ ಆದಂತಹ ಫೀಲ್ಡ್ ನಲ್ಲಿ ತೊಡಗಿಕೊಂಡಿರುತ್ತಾರೆ. ಇತ್ತೀಚೆಗೆ ಕೆಲವು ಅಭಿಮಾನಿಗಳು ಮನೆಗೆ ಬಂದಿದ್ದರು. ಕೆಲವರು ಬೇಡ ಅಣ್ಣಾ ಬೇಡ ಅತ್ತಿಗೆ ಅಂದ್ರು. ಯಾಕಪ್ಪಾ ಹಂಗತೀಯಾ ನಾವೇನಾದರೂ ಕ್ರೈಮ್ ಮಾಡ್ತಿದ್ದೀವಾ? ತಪ್ಪು ಮಾಡ್ತೀದ್ದೀವಾ. ಶಿವಣ್ಣ ತಪ್ಪು ಮಾಡಿದ್ರೆ ಬೇಕಾದರೆ ಹೊಡೀರಿ ಹೊಡೆಸಿಕೊಳ್ಳುತ್ತೇನೆ. ಕೆಲವರು ತುಂಬಾ ಅಭಿಮಾನದಿಂದ ನಮ್ಮ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಯಾವತ್ತೂ ನನ್ನ ಅಭಿಮಾನಿಗಳು ನನಗೆ ಕೈಬಿಡಲ್ಲ. ಈಗಲೂ ಅದೇ ವಿಶ್ವಾಸವಿದೆ. ಆದರೆ ನಾನಂತೂ ನನ್ನ ಅಭಿಮಾನಿಗಳ ಮೇಲೆ ಒತ್ತಡ ಹೇರಲ್ಲ.

ಬೇರೆ ಕ್ಷೇತ್ರಗಳಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲು ಹೋಗ್ತೀರಾ?
ಇಲ್ಲ ಸಾಧ್ಯವೇ ಇಲ್ಲ. ಕೇವಲ ನನ್ನ ಪತ್ನಿಗಾಗಿ ಅಷ್ಟೇ ನಾನು ಪ್ರಚಾರಕ್ಕೆ ಹೋಗ್ತೇನೆ. ಇತ್ತೀಚೆಗೆ ಮಾದೇಶ್ವರ ಬೆಟ್ಟದಲ್ಲಿ ಪೂಜೆಗೆ ಹೋಗಿರಬೇಕಾದರೆ ಯಾರೋ ಬಂದು ಪ್ರಚಾರಕ್ಕಾಗಿ ಕೇಳಿಕೊಂಡರು. ಅಯ್ಯೋ ಆ ರೀತಿ ಎಲ್ಲಾ ನಾನು ಮಾಡಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.

ಗೀತಾ ಅವರ ಪರವಾಗಿ ರಾಘಣ್ಣ, ಪುನೀತ್ ಪ್ರಚಾರ ಮಾಡ್ತಾರಾ?
ಅದು ನಮ್ಮ ತಮ್ಮಂದಿರಿಗೆ ಬಿಟ್ಟ ವಿಚಾರ. ಎಲ್ಲರಿಗೂ ಅವರದೇ ಆದಂತಂತಹ ಸ್ಪೇಸ್ ಇರುತ್ತದೆ. ಅದಕ್ಕೆ ನಾವು ಬೆಲೆ ಕೊಡಬೇಕು. ಅದು ಅವರ ವೈಯಕ್ತಿಕ ವಿಚಾರ.

ರಾಜಕೀಯಕ್ಕೆ ಬರಬೇಕಾದರೆ ಯಾರು ಪ್ರೇರಣೆ? ಯಾವ ಉದ್ದೇಶ?
ರಾಜಕೀಯಕ್ಕೆ ನಾನು ಬಂದಿಲ್ಲ. ನನ್ನ ಹೆಂಡ್ತಿ ಬಂದಿದ್ದಾಳೆ. ನಿನಗೆ ಇಂಟರೆಸ್ಟ್ ಇದೆಯಾ ಎಂದು ಕೇಳಿದೆ. ಹಾಗಾಗಿ ಅವಳು ರಾಜಕೀಯಕ್ಕೆ ಬಂದಿದ್ದಾಳೆ.

Elections 2014: Why Shivrajkumar not entered politics

ಶಿವಣ್ಣ ಅವರಿಗೆ ರಾಜಕೀಯ ಇಂಟರೆಸ್ಟ್ ಇಲ್ಲವೇ?
ನಾನು ತುಂಬ ಕೋಪಿಸ್ಟ. ಯಾಕೆಂದರೆ ಹೆಡ್ ಲೈನ್ಸ್ ನೀವೆಲ್ಲಾ ನೋಡಿರುತ್ತೀರಾ...ಗರಂ ಆದ ಶಿವರಾಜ್ ಕುಮಾರ್, ಮೂರನೇ ಕಣ್ಣುಬಿಟ್ಟು ಶಿವರಾಜ್ ಕುಮಾರ್. ಈ ರೀತಿ ಕೋಪ ಇರುವ ನನ್ನಂತಹವರು ರಾಜಕೀಯಕ್ಕೆ ಲಾಯಕ್ಕಲ್ಲ.

ಇನ್ನು ಮುಂದೆ ನಿಮ್ಮ ಕುಟುಂಬವನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಬಹುದುದಲ್ಲಾ?
ರಾಜಕೀಯ ಅಂದ್ರೆ ಬರೀ ಕುತಂತ್ರವಷ್ಟೇ ಅಲ್ಲವಲ್ಲಾ. ಒಂದು ಒಳ್ಳೇದು ನಡೀಬೇಕಾದರೆ ಒಂದು ಕೆಟ್ಟದ್ದು ಆಗಲೇಬೇಕಲ್ಲವೇ? ಅಣ್ಣಾ ಹಜಾರೆ ಅವರಂತಹವರು ಧ್ವನಿ ಎತ್ತಿದ್ದಕ್ಕೇ ಅಲ್ಲವೇ ಬದಲಾವಣೆಯ ಗಾಳಿ ಬೀಸಿದ್ದು. ಇದೂ ಅಷ್ಟೇ ನಮ್ಮ ಪ್ರಯತ್ನ ನಾವು ಮಾಡ್ತೀವಿ.

ರಾಜಕೀಯ ಅಂದ್ರೆ ನಿಮ್ಮ ಕೈಲಿ ತಪ್ಪು ಮಾಡಿಸಲು ಪ್ರಯತ್ನಿಸುತ್ತಾರೆ?
ಆದರೆ ತಪ್ಪು ಮಾಡಲು ನಾನು ಬಿಡಲ್ಲ. ಹಂಡ್ರಡ್ ಪರ್ಸೆಂಟ್ ಇದು ಸತ್ಯ. ಜನರಿಗಾಗಿ ನಾವು ದುಡಿಯುತ್ತೇವೆ.

ಒಂದು ವೇಳೆ ಗೀತಾ ಸೋತರೆ ಮುಂದೇನು?
ಯಾಕೆ ನಕರಾತ್ಮಕವಾಗಿ ಮಾತನಾಡುತ್ತೀರಾ? ಪಾಸಿಟೀವ್ ಆಗಿ ಮಾತನಾಡಿ. ಗೆಲ್ಲಲಿ ಎಂದು ನೀವೇ ಆಶೀರ್ವಾದ ಮಾಡಿ ಎಂದು ಶಿವಣ್ಣನವರೇ ಹೇಳಿದರು ಮೊದಲು ವಿಶ್ ಮಾಡಿ. ಸೋಲು ಗೆಲುವು ಆಮೇಲೆ ನೋಡಿಕೊಳ್ಳೋಣ.

English summary
Shimoga Lok Sabha constituency, Elections 2014: Late legend Dr Rajkumar daughter-in-law Geetha Shivrajkumar (Former CM late Bangarappa's daughter) contesting from JD(S). But why Geetha husband Shivrajkumar not entered politics. Here is the chit chat with Shivrajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X