ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇರೆ ಕಾರ್ಯಕ್ರಮಗಳಿಗೆ ನೀಡಿರುವ ಅನುಮತಿ 'ಸನ್ನಿ ನೈಟ್ಸ್‌'ಗೆ ಏಕಿಲ್ಲ?: ಹೈಕೋರ್ಟ್

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಡಿಸೆಂಬರ್ 31ರ ರಾತ್ರಿ ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಆಯೋಜಿಸಲು ಯೋಜಿಸಿದ್ದ ಮಾಜಿ ನೀಲಿ ಚಿತ್ರ ತಾರೆ, ಪ್ರಸ್ತುತ ಬಾಲಿವುಡ್ ನಟಿ ಸನ್ನಿ ಲಿಯೋನ್‌ಳ 'ಸನ್ನಿ ನೈಟ್ಸ್' ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ ಹಾಕಿದೆ.

ಬೆಂಗಳೂರಿನಲ್ಲಿ 'ಸನ್ನಿ ನೈಟ್' ಹಾಟೆಸ್ಟ್ ಪಾರ್ಟಿ ರದ್ದುಬೆಂಗಳೂರಿನಲ್ಲಿ 'ಸನ್ನಿ ನೈಟ್' ಹಾಟೆಸ್ಟ್ ಪಾರ್ಟಿ ರದ್ದು

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಏಕೆ ಅಡ್ಡಿ ಮಾಡುತ್ತಿದ್ದೀರಿ ಕಾರಣ ಕೊಡಿ ಎಂದು ಪ್ರಶ್ನಿಸಿರುವ ಹೈಕೋರ್ಟ್ ಡಿಸೆಂಬರ್ 31ರ ರಾತ್ರಿ ಕಾನೂನು ಸುವ್ಯವಸ್ಥೆ ಪಾಲನೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

Why permission denied for Sunny Leone program: High Court

"ಯಾರೊ ಕೆಲವು 10 ಜನ ಪ್ರತಿಭಟನೆ ಮಾಡಿದರು ಎಂಬ ಒಂದೇ ಕಾರಣಕ್ಕೆ ಪೊಲೀಸರು ಮೌಖಿಕವಾಗಿ ಅನುಮತಿ ನಿರಾಕರಿಸಿದ್ದಾರೆ" ಎಂದು ಕಾರ್ಯಕ್ರಮ ಆಯೋಜಕರ ಪರ ಹಾಜರಾಗಿದ್ದ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದರು.

ನಗರದಲ್ಲಿ ಇಂತಹ ಬೇರೆ ಕಾರ್ಯಕ್ರಮಗಳಿಗೆ ಹೊಸ ವರ್ಷದ ವೇಳೆ ನಡೆಯಲು ಅನುಮತಿ ಕೊಟ್ಟಿದ್ದರೆ ಅವುಗಳ ವಿವರ ಕೊಡಿ ಎಂದು ಕೇಳಿದ ಹೈಕೋರ್ಟ್ ಬೇರೆ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವಾಗ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿತು.

ಸನ್ನಿ ಅಂದ್ರೆ ಫನ್ನಿ ಅಲ್ಲ, ಟ್ವಿಟ್ಟರಲ್ಲಿ ಗುಡುಗಿದ ಫ್ಯಾನ್ಸ್ಸನ್ನಿ ಅಂದ್ರೆ ಫನ್ನಿ ಅಲ್ಲ, ಟ್ವಿಟ್ಟರಲ್ಲಿ ಗುಡುಗಿದ ಫ್ಯಾನ್ಸ್

ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡಿ ಭದ್ರತೆ ನೆಪದಲ್ಲಿ ಒಂದು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಸರ್ಕಾರದ ತಾರತಮ್ಯ ಸರಿಯಿಲ್ಲ ಎಂದ ನ್ಯಾಯಮೂರ್ತಿ ಬಿ.ವೀರಪ್ಪ ಬೇರೆ ಕಾರ್ಯಕ್ರಮ ಗಳಿಗೆ ನೀಡಿರುವ ಅನುಮತಿ ರದ್ದುಪಡಿಸಲೇ ಎಂದು ಗುಡುಗಿದರು.

ಹೈಕೋರ್ಟ್ ಮಂಗಳಾರತಿ ಮಾಡಿರುವ ಕಾರಣ ರಾಜ್ಯ ಸರ್ಕಾರ ಎಚ್ಚೆತ್ತು ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ಕೊಡುತ್ತದೆಯೊ ಕಾದು ನೋಡಬೇಕು.

English summary
High Court today questioned state govt about denying permission to Sunny Leone's 'Sunny night' program. Court Asks 'when permitting other programs Why Sunny Leone program permission denied'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X