ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತದಾನ ಮತ್ತೆ ಅಧಃಪತನ: ಇದಾ ನಿಜವಾದ ಕಾರಣ?

|
Google Oneindia Kannada News

Recommended Video

Lok Sabha Elections 2019 : ಬೆಂಗಳೂರಿನಲ್ಲಿ ಪ್ರತಿ ಬಾರಿ ಮತದಾನದ ಪ್ರಮಾಣ ಕಡಿಮೆಯಾಗುವುದಕ್ಕೆ ನಿಜವಾದ ಕಾರಣ?

ಮತ್ತೆ ಮಗುದೊಮ್ಮೆ ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಬಿಬಿಎಂಪಿ ಚುನಾವಣೆಯೇ ಇರಲಿ, ಲೋಕಸಭಾ ಚುನಾವಣೆಯೇ ಇರಲಿ, ಬೆಂಗಳೂರಿಗರು ಸೋಂಬೇರಿಗಳು ಎಂದು ಅಣಕವಾಡಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಕ್ಕೆ ನಿಜವಾದ ಕಾರಣ ಏನಿರಬಹುದು? ನಿಜವಾಗಲೂ ಬೆಂಗಳೂರಿಗರು ಸಾಮಾಜಿಕ ತಾಣದಲ್ಲಿ ಮಾತ್ರ ಹೀರೋಗಳಾ, ಅಥವಾ ರಜೆಸಿಕ್ಕರೆ ಸಾಕು ಊರುಬಿಡುವವರಾ, ಜವಾಬ್ದಾರಿಯಿಲ್ಲದ ಭಾರತೀಯರಾ, ಅದೂ ಅಲ್ಲದಿದ್ದರೆ ಮತ್ತಿನ್ನೇನಾದರೂ ವ್ಯಾಲಿಡ್ ಕಾರಣ ಇರಬಹುದಾ?

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

ಬೆಂಗಳೂರಿನಲ್ಲಿ ಕನ್ನಡಿಗರೇ ಪರಭಾಷಿಗರು ಎನ್ನುವ ಕೂಗು ಇಂದು ನಿನ್ನೆಯದಲ್ಲ. ಇದು ರಾಜಧಾನಿಯಲ್ಲಿ ಆಡಳಿತಾತ್ಮಕವಾಗಿ ಕನ್ನಡವನ್ನು ಜಾರಿಗೊಳಿಸುವುದಕ್ಕಾಗಲಿ, ಕನ್ನಡ ಸಿನಿಮಾಗಳಿಗೆ ಬೇರೆ ಭಾಷೆಯ ಹಾವಳಿಯಿಂದ ತಪ್ಪಿಸುವ ವಿಚಾರದಲ್ಲಾಗಲಿ.. ಹೀಗೆ ಹಲವು ವಿಷಯಗಳಲ್ಲಿ ಹಿನ್ನಡೆಯಾಗುತ್ತಲೇ ಬರುತ್ತಿದೆ.

ನಾಳೆ ರಾಜ್ಯದ ಮೊದಲ ಹಂತದ ಚುನಾವಣೆ: ಇಂದು 'ಕತ್ತಲೆ ರಾತ್ರಿ'ನಾಳೆ ರಾಜ್ಯದ ಮೊದಲ ಹಂತದ ಚುನಾವಣೆ: ಇಂದು 'ಕತ್ತಲೆ ರಾತ್ರಿ'

ಬೆಂಗಳೂರಿನಲ್ಲಿ ಕನ್ನಡಿಗರು ಒಂದು ಕಡೆ, ಇತರ ಭಾಷಿಗರು ಇನ್ನೊಂದು ಕಡೆಯೆಂದು ತುಲನೆ ಮಾಡಿದಾಗ, ತಕ್ಕಡಿ ಜಗ್ಗುವುದು ಇತರ ಭಾಷಿಗರ ಕಡೆಗೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಮೂಲದವರು ನಮ್ಮ ರಾಜಧಾನಿಯನ್ನು ಆವರಿಸಿಕೊಂಡಿರುವಾಗ, ಬೆಂಗಳೂರಿನಲ್ಲಿ ವೋಟಿಂಗ್ ಶೇಕಡಾವಾರು ಹೆಚ್ಚಾಗಲು ಹೇಗೆ ಸಾಧ್ಯ? ಒಂದು ಲೆಕ್ಕಾಚಾರ ಹೀಗೂ ಇರಬಹುದು ನೋಡಿ..

ಮತದಾನದಿಂದ ದೂರವುಳಿದವರ ಹೆಸರನ್ನು ಪಟ್ಟಿಮಾಡಿ, ಅವರಿಗೆ ಕೊಡಲಾದ ವೋಟರ್ಸ್ ಐಡಿಯನ್ನು ಹಿಂದಕ್ಕೆ ಪಡೆಯಬೇಕು. ಜೊತೆಗೆ, ಇಂತವರ ಹೆಸರನ್ನು ಚುನಾವಣಾ ಆಯೊಗದ ವೆಬ್ಸೈಟಿನಲ್ಲೂ ಪ್ರಕಟಿಸಬೇಕು ಎನ್ನುವ ಒತ್ತಾಯವೂ ಸಾಮಾಜಿಕ ತಾಣದಲ್ಲಿ ಕೇಳಿಬರುತ್ತಿದೆ.

ಕೊನೆಯ ಸ್ಥಾನದಲ್ಲಿ ನಿಲ್ಲುವುದು ಬೆಂಗಳೂರಿನ ಮೂರು ಕ್ಷೇತ್ರಗಳು

ಕೊನೆಯ ಸ್ಥಾನದಲ್ಲಿ ನಿಲ್ಲುವುದು ಬೆಂಗಳೂರಿನ ಮೂರು ಕ್ಷೇತ್ರಗಳು

ರಾಜ್ಯದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಏ.18ರಂದು ನಡೆದ ಚುನಾವಣೆಯಲ್ಲಿ ಅತಿಹೆಚ್ಚು ಮತದಾನವಾದ ಕ್ಷೇತ್ರಗಳು ಯಾವುದು ಎಂದಾಗ, ಕೊನೆಯ ಸ್ಥಾನದಲ್ಲಿ ನಿಲ್ಲುವುದು ಮೂರು ಕ್ಷೇತ್ರಗಳು. ಅವು, ಬೆಂಗಳೂರು ಸೆಂಟ್ರಲ್ (ಶೇ. 50.84 ). ಬೆಂಗಳೂರು ಉತ್ತರ (ಶೇ. 51.26 ) ಮತ್ತು ಬೆಂಗಳೂರು ದಕ್ಷಿಣ (ಶೇ. 54.20). ಬುದ್ದಿಯಿಲ್ಲದ ಜಿಲ್ಲೆಗಳಾದ ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಅತಿಹೆಚ್ಚು ಮತದಾನವಾಗಿದೆ ಎನ್ನುವುದು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ. ಅದನ್ನು ಈ ಎರಡು ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳು ಬೇರೆ ಮೊನ್ನೆ ರುಜುವಾತು ಪಡಿಸಿದ್ದಾರೆ.

ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?

ಕನ್ನಡಿಗರ ಸಂಖ್ಯೆ ಶೇ. 38. ಮಿಕ್ಕ ಶೇ. 62 ಇತರ ಭಾಷಿಗರು

ಕನ್ನಡಿಗರ ಸಂಖ್ಯೆ ಶೇ. 38. ಮಿಕ್ಕ ಶೇ. 62 ಇತರ ಭಾಷಿಗರು

2017ರ ಇಸವಿಯಲ್ಲಿ ಸಂಸ್ಥೆಯೊಂದು ನಡೆಸಿದ ಸರ್ವೇ ಪ್ರಕಾರ ಬೆಂಗಳೂರು ನಗರದ (ಗ್ರಾಮೀಣ ಲೋಕಸಭಾ ವ್ಯಾಪ್ತಿ ಹೊರತು ಪಡಿಸಿ) ಜನಸಂಖ್ಯೆ ಅಂದಾಜು 1. 2 ಕೋಟಿ. ಅದರಲ್ಲಿ ಕನ್ನಡಿಗರ ಸಂಖ್ಯೆ ಶೇ. 38. ಮಿಕ್ಕ ಶೇ. 62 ಇತರ ಭಾಷಿಗರು. ಜೀವನಕ್ಕೆ ದಾರಿಹುಡುಕಿಕೊಂಡು ಬಂದ ಇವರುಗಳೆಲ್ಲಾ, ಬೆಂಗಳೂರನ್ನೇ ತಮ್ಮ 'ಸ್ವಂತಕ್ಕೆ' ಸ್ವಂತ ಊರನ್ನಾಗಿ ಮಾಡಿಕೊಂಡಿದ್ದಾರೆಯೇ ಹೊರತು, ತಮಗೆ ಊಟ ಕೊಡುತ್ತಿರುವ ನಗರದ ಅಭಿವೃದ್ದಿ ಆಗಬೇಕು ಎನ್ನುವ ಬಯಕೆ ಇವರಿಗೆ ಇರಬಹುದಾ ಎನ್ನುವುದು ಇಲ್ಲಿ ಕಾಡುವ ಪ್ರಶ್ನೆ.

ಕರ್ನಾಟಕದಲ್ಲಿ ಅಂದಾಜು 67.67%, ಮಂಡ್ಯ 79.98% ಲೋಕಸಭೆ ಮತದಾನ ಕರ್ನಾಟಕದಲ್ಲಿ ಅಂದಾಜು 67.67%, ಮಂಡ್ಯ 79.98% ಲೋಕಸಭೆ ಮತದಾನ

ಮೂರು ಕ್ಷೇತ್ರಗಳಲ್ಲಿನ ಒಟ್ಟು ಮತದಾರರ ಸಂಖ್ಯೆ 90,83,554

ಮೂರು ಕ್ಷೇತ್ರಗಳಲ್ಲಿನ ಒಟ್ಟು ಮತದಾರರ ಸಂಖ್ಯೆ 90,83,554

ಬಿಬಿಎಂಪಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಒಂದು ಕೋಟಿ ಮೇಲೆ ದಾಟಿದ್ದರೂ, ಬಿಬಿಎಂಪಿ ಆಯುಕ್ತರ ಪ್ರಕಾರ ಮೂರು ಕ್ಷೇತ್ರಗಳಲ್ಲಿನ ಒಟ್ಟು ಮತದಾರರ ಸಂಖ್ಯೆ 90,83,554. ಇದರಲ್ಲಿ ಪುರುಷರು 47,33,562 ಮತ್ತು ಮಹಿಳೆಯರು 43,48,452. ಇದರಲ್ಲಿ ಶೇ. 60ರ ಮೇಲೆ ಪರಭಾಷಿಗರು. ಇವರಲ್ಲಿ ಅದೆಷ್ಟೋ ಜನರು ತಮಿಳುನಾಡು, ಆಂಧ್ರ, ಉತ್ತರಭಾರತದ ವೋಟರ್ ಐಡಿಯನ್ನು ಹೊಂದಿರುತ್ತಾರೆ. ಇವರೆಲ್ಲಾ ಬೆಂಗಳೂರಿಗೆ ತಮ್ಮ ವೋಟರ್ ಐಡಿಯನ್ನು ಬದಲಾಯಿಸಿಕೊಂಡಿರುವುದಿಲ್ಲ. ಇನ್ನು ಕೆಲವರು ನಮ್ಮ ರಾಜ್ಯದ ಸೌಲಭ್ಯಗಳನ್ನು ಪಡೆಯಲು ಮಾತ್ರ ಐಡಿ ಹೊಂದಿರುತ್ತಾರೆಯೇ ಹೊರತು, ಇಲ್ಲಿನ ಚುನಾವಣೆಯ ಬಗ್ಗೆ ಇವರಿಗೆ ಆಸಕ್ತಿ ಇರುವುದಿಲ್ಲ.

ಕಾಸ್ಮೋಪಾಲಿಟನ್ ನಗರ, ಸಿಲಿಕಾನ್ ಸಿಟಿಯಾಗಿರುವುದರಿಂದ ವಲಸಿಗರ ಕಾಟ ಇಲ್ಲಿ ಜಾಸ್ತಿ

ಕಾಸ್ಮೋಪಾಲಿಟನ್ ನಗರ, ಸಿಲಿಕಾನ್ ಸಿಟಿಯಾಗಿರುವುದರಿಂದ ವಲಸಿಗರ ಕಾಟ ಇಲ್ಲಿ ಜಾಸ್ತಿ

ಇನ್ನು ಬೆಂಗಳೂರಿನಲ್ಲೇ ವಾಸವಾಗಿರುವ ಕರ್ನಾಟಕದ ಇತರ ಭಾಗದ ಜನರು, ಮತದಾನಕ್ಕೆ ತಮ್ಮತಮ್ಮ ಊರಿಗೆ ಹೋಗುವ ಪರಿಪಾಠವನ್ನು ಇಟ್ಟುಕೊಂಡಿರುತ್ತಾರೆ. ಆಗ ರಾಜಧಾನಿಯಲ್ಲಿರುವ ಅಂದಾಜು ಶೇ. 40ರಷ್ಟು ಕನ್ನಡಿಗರ ಮತಪ್ರಮಾಣವೂ ಕಮ್ಮಿಯಾಗುವುದು ಸ್ವಾಭಾವಿಕ. ಬೆಂಗಳೂರು ಕಾಸ್ಮೋಪಾಲಿಟನ್ ನಗರ, ಸಿಲಿಕಾನ್ ಸಿಟಿಯಾಗಿರುವುದರಿಂದ ವಲಸಿಗರ ಕಾಟ ಇಲ್ಲಿ ಜಾಸ್ತಿಯೇ ಇರುತ್ತದೆ. ಹಾಗಾಗಿ, ಇದು ಕೂಡಾ, ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಮ್ಮಿಯಾಗುತ್ತಿರುವುದಕ್ಕೆ ಕಾರಣವಾಗಿರಬಹುದು.

ಬೆಂಗಳೂರಲ್ಲಿ ಮತದಾನ ಅಧಃಪತನ: ಇದಾ ನಿಜವಾದ ಕಾರಣ?

ಬೆಂಗಳೂರಲ್ಲಿ ಮತದಾನ ಅಧಃಪತನ: ಇದಾ ನಿಜವಾದ ಕಾರಣ?

ಬೆಂಗಳೂರಿನಲ್ಲಿ ವಾಸವಾಗಿರುವ ಎಲ್ಲಾ ಭಾಷಿಗರ ವೋಟರ್ ಐಡಿಗಳನ್ನು ಆಧಾರ್ ಲಿಂಕ್ ಮಾಡಿದರೆ ಬೆಂಗಳೂರು ಮತದಾರರು ಸುಮಾರು 25-30% ಕಡಿಮೆಯಾಗುತ್ತಾರೆ ಮತದಾನ 80%ಪ್ರಮಾಣ ಅಗುತ್ತದೆ ಎನ್ನುವ ಮಾತು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಬೆಂಗಳೂರು ಬೇಕು, ಇಲ್ಲಿನ ಸೌಲಭ್ಯಗಳು ಬೇಕು, ಆದರೆ ಇಲ್ಲಿನ ಚುನಾವಣೆಗೆ ನಿರಾಶಕ್ತಿ ತೋರುವವರಿಗೆ ಕಾನೂನಿನಲ್ಲೇ ಏನಾದರೂ ತಿದ್ದುಪಡಿಯಾಗಬೇಕು. ಅದು ಆಗಲ್ಲಾ... ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಏರಲ್ಲಾ..

ನಾನು ಹಣ್ಣೆಲೆ ಹೌದು, ಆದ್ರೂ ನನ್ನೊಂದು ಮತವೇ ದೇಶದ ಭವಿಷ್ಯವಾಗಬಹುದು!ನಾನು ಹಣ್ಣೆಲೆ ಹೌದು, ಆದ್ರೂ ನನ್ನೊಂದು ಮತವೇ ದೇಶದ ಭವಿಷ್ಯವಾಗಬಹುದು!

English summary
Why percentage of voting falling in Bengaluru limit every time, is it because if immigrants? In the 2019 loksabha elections, the percentage votes fallen compare to 2014 general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X