ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಷಯ ತೃತೀಯ ಬಗ್ಗೆ ಜನ ಏನಂತಾರೆ?

By Ashwath
|
Google Oneindia Kannada News

ಆಭರಣ ಖರೀದಿಗೆ ಯಾವುದೇ ಸೀಸನ್‌ ಇಲ್ಲ.ಯಾವ ದಿನಗಳಲ್ಲೂ ಖರೀದಿಸಬಹುದು. ಹಬ್ಬದ ಸಂದರ್ಭದಲ್ಲಿ ಖರೀದಿ ಹೆಚ್ಚಾಗಿರುತ್ತದೆ. ಅದರಲ್ಲೂ ಅಕ್ಷಯ ತೃತೀಯದಂದು ಕೇಳುವುದೇ ಬೇಡ.ಯಾವಾಗಲೂ ಇಲ್ಲದ ಬೇಡಿಕೆ ಆ ದಿನ ಚಿನ್ನಕ್ಕೆ ಬಂದಿರುತ್ತದೆ. ಆಭರಣದ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತದೆ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ]

ಅಕ್ಷಯ ತೃತೀಯದಂದು ಆಭರಣ ಅಂಗಡಿಗಳು ವಿಶೇಷ ಆಫರ್‌ಗಳನ್ನು ಪ್ರಕಟಿಸುವ ಮೂಲಕ ಗ್ರಾಹಕರನ್ನು ಸೆಳೆದರೂ, ಗ್ರಾಹಕರು ಆಭರಣ ಖರೀದಿಸಲು ಪ್ರತ್ಯೇಕ ಕಾರಣಗಳಿವೆ. ಯಾವೆಲ್ಲಾ ಕಾರಣಕ್ಕೆ ಗ್ರಾಹಕರು ಆಭರಣ ಖರೀದಿಸುತ್ತಿದ್ದಾರೆ ಎನ್ನುವುದಕ್ಕೆ ಒನ್‌ ಇಂಡಿಯಾ ಕೆಲ ಗ್ರಾಹಕರನ್ನು ಮಾತನಾಡಿಸಿದ್ದು ಅವರ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.

ತಾಯಿಗೆ ಉಡುಗೊರೆ :

ತಾಯಿಗೆ ಉಡುಗೊರೆ :


"ಕಳೆದ ತಿಂಗಳಷ್ಟೇ ನನಗೆ ಪ್ರೊಮೋಷನ್ ಆಗಿದ್ದು ಅಮ್ಮನಿಗೆ ಸರ ತೆಗೆದುಕೊಡಬೇಕು ಎಂದು ಯೋಚಿಸಿದ್ದೇನೆ. ಆದರೆ ಯಾವ ದಿನ ಖರೀದಿ ಮಾಡಬೇಕು ಎಂದು ನಿರ್ಧರಿಸಿರಲಿಲ್ಲ.ಮೊನ್ನೆ ಸ್ನೇಹಿತರು ಅಕ್ಷಯ ತೃತೀಯ ಮೇ ಮೊದಲ ವಾರದಲ್ಲಿ ಬರಲಿದೆ ಎಂದು ಹೇಳಿದ್ದರು. ಹಾಗಾಗಿ ಇದೇ ದಿನದಂದು ಚಿನ್ನವನ್ನು ಖರೀದಿ ಮಾಡಲಿದ್ದೇನೆ" -ರಾಜೇಶ್‌‌, ಮ್ಯಾನೇಜರ್‌‌

 ಹಿಂದಿನಿಂದಲೂ ಬಂದ ಸಂಪ್ರದಾಯ:

ಹಿಂದಿನಿಂದಲೂ ಬಂದ ಸಂಪ್ರದಾಯ:


''ನಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವ ಸಂಪ್ರದಾಯವಿದೆ. ನಾನು ಸಣ್ಣವಳಿದ್ದಾಗಲೂ ಚಿನ್ನವನ್ನು ತಂದೆ, ತಾಯಿ ಖರೀದಿಸುತ್ತಿದ್ದರು.ಈಗ ಮದುವೆಯಾದ ಬಳಿಕವೂ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದು ಚಿನ್ನ ಖರೀದಿಸುತ್ತಿದ್ದೇವೆ''- ಸಂಧ್ಯಾ,ಗೃಹಿಣಿ

ಲಾಭವಾಗುತ್ತಂತೆ ಹಾಗೇ ಖರೀದಿ:

ಲಾಭವಾಗುತ್ತಂತೆ ಹಾಗೇ ಖರೀದಿ:


"ನಾನು ಚಿನ್ನವನ್ನು ಖರೀದಿಸಿದ್ದರೂ ಅಕ್ಷಯ ತೃತೀಯದಂದು ಖರೀದಿಸಿಲ್ಲ.ಆದರೆ ನನ್ನ ಕೆಲ ಸ್ನೇಹಿತರು ಈ ದಿನದಂದೇ ಚಿನ್ನವನ್ನು ಖರೀದಿಸುತ್ತಿದ್ದು ಒಳ್ಳೇದಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ವರ್ಷ‌ ಪ್ರಥಮ ಬಾರಿಗೆ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುತ್ತಿದ್ದೇನೆ" - ಮಾನಸಿ,ಸಾಫ್ಟ್‌ವೇರ್‍ ಉದ್ಯೋಗಿ

ಪುರಾಣ ಕಥೆ ಗೊತ್ತಿಲ್ಲ

ಪುರಾಣ ಕಥೆ ಗೊತ್ತಿಲ್ಲ


"ಅಕ್ಷಯ ತೃತೀಯದ ಬಗ್ಗೆ ಪುರಾಣ ಕಥೆ ಗೊತ್ತಿಲ್ಲ. ಆದರೆ ಆ ದಿನ ಏನೇ ಖರೀದಿಸಿದ್ದರೂ ಅದು ನಾಶವಾಗುದಿಲ್ಲವಂತೆ. ಹಾಗಾಗಿ ಈ ಬಾರಿ ಚಿನ್ನ ಖರೀದಿಸಲು ಮುಂದಾಗಿದ್ದೇನೆ" - ವಿನುತಾ, ಬ್ಯಾಂಕ್‌‌ ಉದ್ಯೋಗಿ

 ಪತ್ನಿಗೆ ಉಡುಗೊರೆ

ಪತ್ನಿಗೆ ಉಡುಗೊರೆ


"ನಾನು ಹೊಸದಾಗಿ ಮದುವೆಯಾಗಿದ್ದೇನೆ. ಪತ್ನಿಗೆ ಉಡುಗೊರೆ ನೀಡಲು ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಲಿದ್ದು ಈಗಾಗಲೇ ಆರ್ಡರ್‌ ಮಾಡಿದ್ದೇನೆ" -ರಮೇಶ್‌, ಗುತ್ತಿಗೆದಾರರು

ಪ್ರತಿ ವರ್ಷ ಖರೀದಿ:

ಪ್ರತಿ ವರ್ಷ ಖರೀದಿ:


"ನಾವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವ ಪರಿಪಾಠವನ್ನು ಇಟ್ಟುಕೊಂಡಿಲ್ಲ. ಪ್ರತಿ ವರ್ಷ‌ ಈ ದಿನ ಒಂದೊಂದು ವಸ್ತುವನ್ನು ಖರೀದಿಸುತ್ತಿದ್ದು ಕಳೆದ ವರ್ಷ‌ ಕಾರು ಖರೀದಿಸಿದ್ದೇವು. ಈ ವರ್ಷ ಮಗಳಿಗೆ ಮದುವೆ ಇರುವುದರಿಂದ ಬಂಗಾರ ಖರೀದಿ ಮಾಡುತ್ತಿದ್ದೇವೆ"- ಪದ್ಮನಾಭ ರಾವ್‌, ಕೃಷಿಕರು

ಕಾಕತಾಳಿಯವೋ ಗೊತ್ತಿಲ್ಲ ಒಳ್ಳೆಯದಾಗುತ್ತಿದೆ

ಕಾಕತಾಳಿಯವೋ ಗೊತ್ತಿಲ್ಲ ಒಳ್ಳೆಯದಾಗುತ್ತಿದೆ


"ನಾವು ಕಳೆದ ಆರು ವರ್ಷ‌ಗಳಿಂದ ಬಂಗಾರ ಖರೀದಿ ಮಾಡುತ್ತಿದ್ದೇವೆ. ಕಾಕತಾಳಿಯವೋ ಏನೋ ಗೊತ್ತಿಲ್ಲ. ನಮಗೆ ಒಳ್ಳೆಯದಾಗುತ್ತಿದೆ. ಹೀಗಾಗಿ ಈ ವರ್ಷ‌‌ವು ಮಿಸ್‌ ಮಾಡದೇ ಬಂಗಾರ ಖರೀದಿಸುತ್ತಿದ್ದೇವೆ"- ಲಾವಣ್ಯ, ಗೃಹಿಣಿ

English summary
Gold and silver sales shoot up every year on Akshaya Tritiya, that usually falls in late April or early May. Many Hindus believe that this day is auspicious to buy gold and silver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X