ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?

|
Google Oneindia Kannada News

ಬೆಂಗಳೂರು, ಮೇ 20: ನಗರದಲ್ಲಿ ಮೇ 19ರಿಂದಲೇ ಬಿಎಂಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಆದರೆ ಜನರು ಮಾತ್ರ ಬಸ್ ಹತ್ತಲು ಆಸಕ್ತಿ ತೋರುತ್ತಿಲ್ಲ.

ಹೌದು ಇಷ್ಟು ದಿನ ಲಾಕ್‌ಡೌನ್ ಎಂದು ಮನೆಯಲ್ಲಿಯೇ ಕುಳಿತಿದ್ದರು, ಯಾವಾಗ ಬಸ್ ಆರಂಭವಾಗುತ್ತೋ ಯಾವಾಗ ಮನೆಯಿಂದ ಹೊರಗೆ ಹೋಗ್ತೀವೋ ಎಂದು ಜನರು ಕಾಯುತ್ತಿದ್ದರು ಆದರೆ ಈಗ ಬಸ್ ಸಂಚಾರ ಆರಂಭಗೊಂಡರೂ ಬೆರಳೆಣಿಕೆಯಷ್ಟು ಜನರಿಲ್ಲ.

BMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿBMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿ

ಒಂದೊಡೆ ಕೊರೊನಾವೈರಸ್ ಭಯ ಇರುವುದು ನಿಜ, ಜನರು ಬಾರದಿರಲು ಅದೇ ಕಾರಣ ಎಂದು ಹೇಳಲಾಗುವುದಿಲ್ಲ. ಬಸ್‌ನಲ್ಲಿ ಟಿಕೆಟ್ ನೀಡುತ್ತಿಲ್ಲ ಬದಲಾಗಿ ದಿನದ ಪಾಸನ್ನು ಪಡೆಯಬೇಕು. ಅಥವಾ ಹತ್ತಿರದ ಡಿಪೋಗೆ ತೆರಳಿ ವಾರದ ಪಾಸನ್ನು ಪಡೆಯಬೇಕಿದೆ.

ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ 'ಈ' ಏರಿಯಾಗಳಿಗೆ BMTC ಬಸ್ ಬರಲ್ಲ.!ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ 'ಈ' ಏರಿಯಾಗಳಿಗೆ BMTC ಬಸ್ ಬರಲ್ಲ.!

ಕೇವಲ 10 ರೂ ಟಿಕೆಟ್ ಪಡೆಯುವಷ್ಟು ದೂರಕ್ಕೆ ಪ್ರಯಾಣಿಕರು ತೆರಳಬೇಕಿದ್ದರೂ ದಿನದ ಬಸ್‌ಪಾಸ್ ಪಡೆದು 70ರೂ. ಹಣವನ್ನು ಪಾವತಿ ಮಾಡಲೇಬೇಕಿದೆ. ಹಾಗಾಗಿ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಸಧ್ಯಕ್ಕೆ ಕಡಿಮೆ ಇದೆ.

ಮತ್ತೊಂದು ವಿಚಾರ ಅಂದ್ರೆ ಲಾಕ್ ಡೌನ್ ಸಮಯದಲ್ಲಿ ಬಹುತೇಕರು ಅನಿವಾರ್ಯವಾಗಿ ಸ್ವಂತ ವಾಹನಗಳು ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಿ ಕೊಂಡಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುವವರಲ್ಲಿ ಕೂಲಿ ಕಾರ್ಮಿಕರು ಕೂಡ ಇದ್ದರು, ಹಾಗೆಯೇ ಶಾಲಾ, ಕಾಲೇಜುಗಳು, ಕಚೇರಿಗಳು ಇನ್ನೂ ತೆರೆಯದ ಕಾರಣ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.

ಎರಡು ತಿಂಗಳ ಬಳಿಕ ಓಲಾ, ಆಟೋಗಳ ಸಂಚಾರ

ಎರಡು ತಿಂಗಳ ಬಳಿಕ ಓಲಾ, ಆಟೋಗಳ ಸಂಚಾರ

ಹೆಚ್ಚು ಕಡಿಮೆ ಎರಡು ತಿಂಗಳ ಲಾಕ್‌ಡೌನ್ ನಂತರ ರಾಜ್ಯ ಸರ್ಕಾರ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಆಟೋ, ಕ್ಯಾಬ್ ಓಲಾಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಜನ ಮಾತ್ರ ಸಾರ್ವಜನಿಕ ಸಾರಿಗೆ ಉಪಯೋಗಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ತಪ್ಪಾದ ಬಿಎಂಟಿಸಿ ಆಲೋಚನೆ

ತಪ್ಪಾದ ಬಿಎಂಟಿಸಿ ಆಲೋಚನೆ

ಸಾಮಾನ್ಯವಾಗಿ ಬಸ್ಸುಗಳಿಗಾಗಿ ಜನ ಕಾಯೋದನ್ನು ನೋಡಿದ್ದೇವೆ. ಒಂದರ ಹಿಂದೆ ಒಂದು ಬಸ್ ಬಂದರೂ ಕೂಡ ಜನರು ಬಸ್‌ ನಿಲ್ದಾಣದಲ್ಲಿಯೇ ಬಾಕಿಯಾಗುತ್ತಿದ್ದರು. ಅಷ್ಟು ರಷ್ ಇರುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಈ ಬಸ್ಸುಗಳೇ ಜನರಿಗೆ ಕಾಯ್ತಿರೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳ ಲಾಕ್‌ಡೌನ್ ನಿಂದ ಯಾವುದೇ ಸಾರಿಗೆ ಸೇವೆ ಇಲ್ಲದೇ ಜನ ಒದ್ದಾಡಿ ಹೋಗಿದ್ದರು.

ಕೊರೊನಾ ವೈರಸ್ ಮಧ್ಯೆಯೂ ಜನರ ಜೀವನ ಎಂದಿನಂತಾಗಲಿ ಅಂತ ರಾಜ್ಯ ಸರ್ಕಾರ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ, ಕ್ಯಾಬ್ ಓಲಾ ಸೇರಿದಂತೆ ಬಹುತೇಕ ಎಲ್ಲಾ ಸಾರಿಗೆಯನ್ನು ಆರಂಭ ಮಾಡಿತ್ತು. ಕುತೂಹಲದಿಂದ ಸಾರಿಗೆ ಆರಂಭ ಮಾಡಿದ ರಾಜ್ಯ ಸರ್ಕಾರಕ್ಕೆ ಜನರಿಂದ ಸಿಕ್ಕಿದ್ದು ಮಾತ್ರ ಭಾರೀ ನಿರಾಸೆ.

ಸೋಮವಾರ ಇಡೀ ದಿನ ಕ್ಯಾಬ್, ಆಟೋ, ಬಸ್‌ಗಳು ಖಾಲಿ ಖಾಲಿ

ಸೋಮವಾರ ಇಡೀ ದಿನ ಕ್ಯಾಬ್, ಆಟೋ, ಬಸ್‌ಗಳು ಖಾಲಿ ಖಾಲಿ

ಸೋಮವಾರ ಬೆಳಗ್ಗಿನ ಜಾವ ಒಂದಷ್ಟು ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಬಂದಿದ್ದು ಬಿಟ್ರೆ, ಸಂಜೆವರೆಗೆ ಆಟೋ, ಒಲಾ, ಊಬರ್, ಬಿಎಂಟಿಸಿ, ಕೆಎಸ್‍ಆರ್ ಟಿಸಿ ಖಾಲಿ ಖಾಲಿಯಾಗಿದ್ದವು.

ಬಸ್‌ನಲ್ಲಿ ಟಿಕೆಟ್ ಇಲ್ಲ ದಿನದ ಪಾಸ್ ಮಾತ್ರ ಲಭ್ಯ

ಬಸ್‌ನಲ್ಲಿ ಟಿಕೆಟ್ ಇಲ್ಲ ದಿನದ ಪಾಸ್ ಮಾತ್ರ ಲಭ್ಯ

ಬಸ್‌ನಲ್ಲಿ ಟಿಕೆಟ್ ವ್ಯವಸ್ಥೆ ಇಲ್ಲ, ದಿನದ ಪಾಸ್ ಮಾತ್ರ ಲಭ್ಯವಿದೆ. ಅದಕ್ಕೆ 70 ರೂ. ಪಾವತಿಸಬೇಕು. ಇಲ್ಲವಾದಲ್ಲಿ ಹತ್ತಿರದ ಡಿಪೋಗೆ ತೆರಳಿ 300 ರೂ. ನೀಡಿ ವಾರದ ಪಾಸ್ ಪಡೆದುಕೊಳ್ಳಬೇಕು.

English summary
After 2 Months The BMTC bus service has started from May 19 in Bengaluru. But people don't seem to be interested in boarding the buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X