ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಸಿಬ್ಬಂದಿ ಜೀವದ ಜೊತೆ ಸರ್ಕಾರದ ಚೆಲ್ಲಾಟ: ಎಎಪಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 6: ಕೊರೋನಾ (ಕೋವಿಡ್ 19) ಪರಿಣಾಮ ಇಡೀ ದೇಶ ಲಾಕ್ ಡೌನ್ ಆಗಿದೆ. ರಾಜ್ಯದಲ್ಲಿ ತಡವಾಗಿಯಾದರೂ ಒಂದಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜನರ ಆತಂಕವನ್ನು ದೂರ ಮಾಡಲು ಒಂದಷ್ಟು ಕ್ರಮ ತೆಗೆದುಕೊಳ್ಳಲಾಗಿದೆ ಇದು ನಿಜಕ್ಕೂ ಶ್ಲಾಘನೀಯ ವಿಚಾರ.

ಇಷ್ಟೆಲ್ಲ ಉತ್ತಮ ಕೆಲಸಗಳ ನಡುವೆಯೂ ಸರ್ಕಾರ ಸರಿಯಾದ ಯೋಜನೆ ರೂಪಿಸದೆ ಎಡವುತ್ತಿದೆ. ಕೊರೋನಾ ಸೋಂಕು ಕರ್ನಾಟಕದಲ್ಲಿ ಕಾಣಿಸಿಕೊಂಡು ತಿಂಗಳು ಕಳೆಯುತ್ತಾ ಬಂದರೂ ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿರುವುದು ಅದಕ್ಷತೆಯ ಪರಮಾವಧಿ ಎಂದೇ ಹೇಳಬಹುದು.

ಈಗ ಬೆಂಗಳೂರಿನಲ್ಲಿ ಸರವಣ ಎನ್ನುವ ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಆಮ್ ಆದ್ಮಿ ಪಕ್ಷ ಸಂತಾಪ ಸೂಚಿಸುತ್ತದೆ.
ಈ ಸಾವಿನಿಂದ ವೈದ್ಯ ಲೋಕದಲ್ಲಿ ಆತಂಕ ಹೆಚ್ಚಾಗಿದೆ. ಉದಾಹರಣೆಗೆ ಅಗತ್ಯ ಸುರಕ್ಷಾ ಸಾಧನಗಳು ಇಲ್ಲದ ಕಾರಣ ಮುಂಬೈನ ವಾಕರ್ಡ್ ಆಸ್ಪತ್ರೆಯ 3 ಜನ ವೈದ್ಯರು, 26 ಜನ ಶುಶ್ರೂಷಕಿಯರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ರಾಜ್ಯ ಸರ್ಕಾರ ಪಿಪಿಇ ಕಿಟ್‌ಗಳನ್ನು ಶೀಘ್ರವಾಗಿ ವಿತರಿಸಬೇಕು. ದೆಹಲಿ ಆಮ್ ಆದ್ಮಿ ಸರ್ಕಾರದ ರೀತಿಯಲ್ಲಿ ವೈದ್ಯಕೀಯ ಸಿಬ್ಬಂದಿ ಸಾವನ್ನಪಿದರೆ 1 ಕೋಟಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ವೈದ್ಯಕೀಯ ಸೇವೆಯಲ್ಲಿ ಹಿಂದೆ ಬಿದ್ದ ಕರ್ನಾಟಕ

ವೈದ್ಯಕೀಯ ಸೇವೆಯಲ್ಲಿ ಹಿಂದೆ ಬಿದ್ದ ಕರ್ನಾಟಕ

ಅತ್ಯಂತ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಹಾಗೂ ಹೆಚ್ಚು ವೈದ್ಯರನ್ನು ಸೃಷ್ಟಿಸುತ್ತಿರುವ ಕರ್ನಾಟಕ ರಾಜ್ಯ ತನ್ನ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ತೀರ ಹಿಂದೆ ಬಿದ್ದಿದ್ದು 8 ನೇ ಸ್ಥಾನದಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎಚ್ಚೆತ್ತುಕೊಳ್ಳದ ನಮ್ಮ ರಾಜ್ಯದ ಆರೋಗ್ಯ ಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮಕ್ಕಳಂತೆ ಮುನಿಸಿಕೊಂಡು ಕುಳಿತ್ತಿದ್ದಾರೆ. ಇಲಾಖೆಗಳ ನಡುವೆ ಸಮನ್ವಯವನ್ನು ಸಾಧಿಸದೆ ಪರಿಸ್ಥಿತಿಯ ಲಾಭವನ್ನು ಪಡೆದು ವೈಯುಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿರುವುದು ದುರದೃಷ್ಟಕರ.

ವೆಂಟಿಲೇಟರ್ ಖರೀದಿ ಬಗ್ಗೆ ಸ್ಪಷ್ಟಣೆ ಇಲ್ಲ

ವೆಂಟಿಲೇಟರ್ ಖರೀದಿ ಬಗ್ಗೆ ಸ್ಪಷ್ಟಣೆ ಇಲ್ಲ

ಕೊರೊನಾ ಕರ್ನಾಟಕದಲ್ಲಿ ಕಾಣಿಸಿಕೊಂಡಾಗ ರೋಗಿಗಳ ಚಿಕಿತ್ಸೆಗಾಗಿ 1ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸುವುದಾಗಿ ಹೇಳಲಾಗಿತ್ತು, ಇದನ್ನು ಸರ್ಕಾರ ಆನಂತರ ಕೇವಲ 100 ಕ್ಕೆ ಇಳಿಸಿತ್ತು. ವಿಪರ್ಯಾಸ ಎಂದರೆ ಈಗ ಕೇವಲ 30 ವೆಂಟಿಲೇಟರ್‌ಗಳು ಮಾತ್ರ ಸರ್ಕಾರದ ಕೈ ಸೇರಿವೆ.

ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸಲು ಕನಿಷ್ಠ 1 ತಿಂಗಳಾದರೂ ಬೇಕಾಗಬಹುದು ಎನ್ನುವುದು ಅಧಿಕಾರಿಗಳ ಮಾತು. ಹೀಗಾದರೆ ಕೊರೊನಾ ನಿಯಂತ್ರಣ ಶೀಘ್ರದಲ್ಲೆ ಸಾಧ್ಯವೇ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಸೊಂಕು ಪೀಡಿತರಿಗೆ ಮುಖ್ಯವಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ಆ ಸಮಯದಲ್ಲಿ ಈ ಉಪಕರಣ ಇದ್ದರೆ ಮಾತ್ರ ಮುಂದಿನ ಚಿಕಿತ್ಸೆ ಸಾಧ್ಯ.

ಸಾವಿರ ವೆಂಟಿಲೇಟರ್ ಎಲ್ಲಿದೆ?

ಸಾವಿರ ವೆಂಟಿಲೇಟರ್ ಎಲ್ಲಿದೆ?

ಪ್ರಾಥಮಿಕ ಆರೋಗ್ಯ ಸೇವೆ ಸಲ್ಲಿಸಲು ರಾಜ್ಯದಲ್ಲಿ ಒಟ್ಟು 8871 ಉಪ ಕೇಂದ್ರಗಳು, 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 207 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 146 ತಾಲ್ಲೂಕು ಆಸ್ಪತ್ರೆಗಳು ಇದ್ದರೂ ಆರೋಗ್ಯ ಇಲಾಖೆಯ ಬಳಿ ಇರುವುದು ಕೇವಲ ಏಳು ನೂರು ಚಿಲ್ಲರೆಯಷ್ಟು ವೆಂಟಿಲೇಟರ್‌ಗಳು ಮಾತ್ರ.

ಈ ಮೇಲಿನ ಕಾರಣದಿಂದ ಕೊರೊನಾ ಸೋಂಕಿತರಿಗೆ ಅತ್ಯವಶ್ಯವಾದ ಈ ವ್ಯವಸ್ಥೆಯನ್ನು ಒದಗಿಸುವಂತೆ ಖಾಸಗಿ ಆಸ್ಪತ್ರೆಗಳ ಬಳಿ ಗೋಗರೆಯುವಂತಾ ಪರಿಸ್ಥಿತಿ ಸರ್ಕಾರಕ್ಕೆ ಬಂದೊದಗಿದೆ. ಅನೇಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿವೆ ಆದರೆ ಸೂಕ್ತ ಕೊಠಡಿಗಳಿಲ್ಲ, ಐಸಿಯು ಇಲ್ಲ. ಇವುಗಳನ್ನು ನಿರ್ವಹಣೆ ಮಾಡುವ ಸಿಬ್ಬಂದಿಗಳಿಲ್ಲ.

ಸರಿಯಾದ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ

ಸರಿಯಾದ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ

ಗಮನಿಸ ಬೇಕಾದ ಇನ್ನೊಂದು ಅಂಶವೆಂದರೆ ವೆಂಟಿಲೇಟರ್ ವ್ಯವಸ್ಥೆ ಇರುವ ಆಂಬುಲೆನ್ಸ್ ಎಷ್ಟಿದೆ ಎನ್ನುವ ಮಾಹಿತಿಯೂ ಲಭ್ಯವಿಲ್ಲ.

ಖಾಸಗಿಯವರ ಬಳಿ 1,500 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಇದೆ ಎಂದು ಹೇಳಲಾಗುತ್ತಿದ್ದರೂ ಎಷ್ಟು ಪ್ರಮಾಣದಲ್ಲಿ ದೊರೆಯುತ್ತದೆ ಎನ್ನುವ ಲೆಕ್ಕಾಚಾರ ಸರ್ಕಾರದ ಬಳಿ ಆಗಲಿ ಅಧಿಕಾರಿಗಳ ಬಳಿ ಆಗಲಿ ಇಲ್ಲ.

ರಾಜ್ಯ ಹೈಕೋರ್ಟ್ ಕೊರೊನಾ (ಕೋವಿಡ್ 19) ನಿಯಂತ್ರಣಕ್ಕೆ ಏನು ಮಾಡಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು ಹಾಗೂ ಏಪ್ರಿಲ್ 3 ನೇ ತಾರೀಕಿನ ಒಳಗೆ ಸಮಗ್ರ ಯೋಜನೆಯೊಂದಿಗೆ ಬನ್ನಿ ಎಂದು ಚೀಮಾರಿ ಹಾಕಿದ ನಂತರ ಸಚಿವ ಸುರೇಶ್ ಕುಮಾರ್ ಅವರಿಗೆ ದಿನನಿತ್ಯದ ಮಾಹಿತಿ ನೀಡುವ ಜವಾಬ್ದಾರಿ ನೀಡಲಾಯಿತು ಬಿಟ್ಟರೆ ಇನ್ನೂ ಸರ್ಕಾರ ಅಧಿಕಾರಿಗಳ ಜತೆ ಸೇರಿ ಯೋಜನೆ ರೂಪಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ.

ವ್ಯವಸ್ಥೆ ಕಲ್ಪಿಸಿ ನಂತರ ದೇಣಿಗೆ ಕೇಳಿ

ವ್ಯವಸ್ಥೆ ಕಲ್ಪಿಸಿ ನಂತರ ದೇಣಿಗೆ ಕೇಳಿ

ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಕ್ರಮೇಣ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಮಿಕ ಖಾಯಿಲೆಗಳು ವ್ಯಾಪಕವಾದಾಗ ನಿಭಾಯಿಸುವುದು ಕಷ್ಟವಾಗುತ್ತದೆ. ಈಗಲಾದರೂ ಜನಪ್ರತಿನಿಧಿಗಳ, ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಗ್ರ ಸಾಮಾಜಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.

ಕಳೆದ ವರ್ಷ ಭೀಕರ ನೆರೆ ಬಂದಾಗ ಜನರೇ ಮುಂದೆ ನಿಂತು ಲಕ್ಷಾಂತರ ರೂಪಾಯಿಗಳನ್ನು, ಆಹಾರಧಾನ್ಯಗಳನ್ನು ದಿನಬಳಕೆಯ ವಸ್ತುಗಳನ್ನು ನೀಡಿದ್ದಾರೆ ಈಗ ಮತ್ತೆ ಜನರ ಬಳಿ ದೇಣಿಗೆ ಕೇಳುತ್ತಿರುವುದನ್ನು ನೋಡಿದರೆ, ಇಂತಹ ಕಷ್ಟ ಕಾಲದಲ್ಲೂ ಜನಸಾಮಾನ್ಯರ ಜೇಬಿಗೆ ಕೈ ಹಾಕುತ್ತಿರುವುದು ರಾಜ್ಯ ಬಿಜೆಪಿ ಅವರ ಅಸಹಾಯಕತೆ ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

English summary
AAP Karnataka has questioned Karnataka government's slow paced work in providing PPE kit to Medical staff, govt also not sure about number of Ventillators required.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X