ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಬಂದ್‌‌: ಕರವೇ ನಾರಾಯಣ ಗೌಡ ಏಕಿಲ್ಲ?

By Ashwath
|
Google Oneindia Kannada News

ಬೆಂಗಳೂರು, ಜು.31:ವಿವಿಧ ಕನ್ನಡ ಸಂಘಟನೆಗಳು ಅತ್ಯಾಚಾರ ಮತ್ತು ಎಂಇಎಸ್‌ ಪುಂಡಾಟ ಖಂಡಿಸಿ ಕರೆ ನೀಡಿದ ಬೆಂಗಳೂರು ಬಂದ್‌ ಗುರುವಾರ ಭಾಗಶಃ ಯಶಸ್ವಿಯಾಗಿದೆ.

ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ನೀಡಿದರೂ, ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಣ ಈ ಬಂದ್‌ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಹಳಷ್ಟು ಓದುಗರು, ಕನ್ನಡ ಹೋರಾಟಗಳು ಬಂದಾಗ ಮುಂಚೂಣಿಯಲ್ಲಿರುವ ನಾರಾಯಣ ಗೌಡರ ಬಣ ಈ ಬಂದ್‌ಗೆ ಬೆಂಬಲ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.[ಶಾಂತಿಯುವಾಗಿ ಮುಕ್ತಾಯಗೊಂಡ ಬೆಂಗಳೂರು ಬಂದ್]

ಈ ಕಾರಣಕ್ಕಾಗಿ ಒನ್‌ ಇಂಡಿಯಾ ಕನ್ನಡ ನಾರಾಯಣ ಗೌಡರನ್ನು ಮಾತನಾಡಿಸಿದ್ದು, ನಮ್ಮ ಬಣ ಯಾಕೆ ಈ ಬೆಂಗಳೂರು ಬಂದ್‌ಗೆ ಬೆಂಬಲ ನೀಡಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಮುಂದಿನ ಪುಟದಲ್ಲಿ ಅವರ ಹೇಳಿಕೆಯನ್ನು ನೀಡಲಾಗಿದೆ.[ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು. ಬಾಲಕಿಯ ಸ್ಲೇಟ್‌ನಲ್ಲಿದ್ದ ವರ್ಣಮಾಲೆ]

 ಬಂದ್‌ ಒಂದೇ ಉತ್ತರವಲ್ಲ:

ಬಂದ್‌ ಒಂದೇ ಉತ್ತರವಲ್ಲ:

ಯಾವುದೇ ಸಮಸ್ಯೆಯನ್ನು ಬಂದ್‌ ಮೂಲಕ ನಿವಾರಿಸಲು ಸಾಧ್ಯವಿಲ್ಲ. ಒಂದು ವೇಳೆ ಬಂದ್‌ ಮೂಲಕವೇ ಸಮಸ್ಯೆ ನಿವಾರಣೆಯಾದಲ್ಲಿ ಎಲ್ಲ ಸಮಸ್ಯೆಗಳಿಗೆ ಬಂದ್‌ ಮಾಡಬೇಕಾಗುತ್ತದೆ.

 ಸರ್ಕಾರ ಕ್ರಮ ಕೈಗೊಂಡಿದೆ:

ಸರ್ಕಾರ ಕ್ರಮ ಕೈಗೊಂಡಿದೆ:

ಎಂಇಎಸ್‌ ಪುಂಡಾಟದ ನಾವು ಪ್ರತಿಭಟನೆ ಮಾಡುತ್ತಲೇ ಬಂದಿದ್ದೇವೆ. ಎರಡು ದಿನಗಳ ಹಿಂದೆಯಷ್ಟೇ ಸಹ ಪ್ರತಿಭಟನೆ ನಡೆಸಿದ್ದೇವೆ. ಇನ್ನು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಇವುಗಳಿಗೆಲ್ಲ ಬಂದ್‌ ನಡೆಸುವ ಅಗತ್ಯವಿಲ್ಲ.

ಬಂದ್‌ಗೂ ನಮಗೂ ದೂರ:

ಬಂದ್‌ಗೂ ನಮಗೂ ದೂರ:

ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಆದಲ್ಲಿ ನಾವು ಹೋರಾಟ ಮಾಡಿಕೊಂಡೆ ಬಂದಿದ್ದೇವೆ. ಬಂದ್‌‌ನಿಂದಾಗಿ ಕೆಲ ಜನರಿಗೆ ಭಯವಾದರೆ, ಮತ್ತೆ ಕೆಲವರು ರಜೆ ಸಿಗುತ್ತದೆ. ಒಂದು ದಿನದ ಬಂದ್‌ನಿಂದಾಗಿ ಕೋಟ್ಯಂತರ ರೂ. ನಷ್ಟವಾಗುತ್ತದೆ. ಹೀಗಾಗಿ ಬಂದ್‌ಗೆ ಕರೆ ನೀಡಿ ಸಾರ್ವ‌ಜನಿಕರಿಗೆ ದಿನ ನಿತ್ಯ ಬದುಕಿಗೆ ತೊಂದರೆಯಾಗುವುಂತಹ ಯಾವುದೇ ಕೆಲಸಕ್ಕೆ ಕರವೇ ಮುಂದಾಗುವುದಿಲ್ಲ. ಕರವೇ ಯಾವಾಗಲೂ ಬಂದ್‌ನಿಂದ ದೂರ ಉಳಿಯುತ್ತದೆ.

ಜನರಿಗೆ ಸಮಸ್ಯೆ ನೀಡಿ ಹೋರಾಟ ಮಾಡುವುದಿಲ್ಲ:

ಜನರಿಗೆ ಸಮಸ್ಯೆ ನೀಡಿ ಹೋರಾಟ ಮಾಡುವುದಿಲ್ಲ:

ಸರ್ಕಾರದ ಕಿವಿ ಹಿಂಡುವ ಸಂದರ್ಭದಲ್ಲಿ ನಾವು ಸರಿಯಾಗಿ ಹಿಂಡಿಕೊಂಡೆ ಬಂದಿದ್ದೇವೆ. ಬಂದ್‌ ಮೂಲಕವೇ ನಾವು ಆಕ್ರೋಶವನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ. ಎಂಇಎಸ್‌ ಮತ್ತು ಶಿವಸೇನೆ ನಿಷೇಧಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕರವೇ ಯಾವತ್ತೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತದೆ ವಿನಾಃ ಜನರಿಗೆ ಸಮಸ್ಯೆ ನೀಡಿ ಹೋರಾಟ ಮಾಡುವುದಿಲ್ಲ.

English summary
Kannada activist and Karnataka Rakshana Vedike president T.A. Narayana Gowda did not take part in 31 July Bangalore Bandh, Why? Among other reasons Gowda argues Bandh is sheer waste of public time and money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X