ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರವನ್ನು ಜೆಡಿಎಸ್ ಕಾಂಗ್ರೆಸ್ಸಿಗೆ ನೀಡಿದಕ್ಕೆ ಅಸಲಿ ಕಾರಣವೇನು?

|
Google Oneindia Kannada News

Recommended Video

Lok Sabha Election 2019 : ಬೆಂಗಳೂರು ಉತ್ತರವನ್ನು ಜೆಡಿಎಸ್ ಕಾಂಗ್ರೆಸ್ಸಿಗೆ ನೀಡಿದಕ್ಕೆ ಅಸಲಿ ಕಾರಣವೇನು?

ಬೆಂಗಳೂರು, ಮಾರ್ಚ್ 25: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಗೂ ಮುನ್ನ ತನಗೆ 12 ಕ್ಷೇತ್ರಗಳನ್ನು ನೀಡುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದ ಜೆಡಿಎಸ್ ಕೊನೆಗೆ 8 ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿತ್ತು.

ಆದರೆ ಇದೀಗ ಬೆಂಗಳೂರು ಉತ್ತರ ಕ್ಷೇತ್ರವನ್ನೂ ಕಾಂಗ್ರೆಸ್ಸಿಗೇ ಬಿಟ್ಟುಕೊಡುವ ಮೂಲಕ ಸೋಮವಾರ ಮಧ್ಯರಾತ್ರಿ ಅಚ್ಚರಿಯ ನಿರ್ಧಾರಕ್ಕೆ ಬಂದಿತ್ತು.

ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ವಾಪಸ್ ಕೊಟ್ಟ ಜೆಡಿಎಸ್ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ವಾಪಸ್ ಕೊಟ್ಟ ಜೆಡಿಎಸ್

ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿದಿದ್ದರಿಂದ, ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಣಕ್ಕಳಿಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಅದಕ್ಕೆ ಪೂರಕ ಎಂಬಂತೆ ಈ ಕ್ಷೇತ್ರವನ್ನು ತಾನೇ ಇಟ್ಟುಕೊಳ್ಳುವುದಾಗಿ ಜೆಡಿಎಸ್ ಹೇಳಿತ್ತು.

ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ. ಈ ನಿರ್ಧಾರದ ಹಿಂದೇನಿದೆ? ಮೈತ್ರಿ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದಕ್ಕಾಗಿ ಈ ನಿರ್ಧಾರವೇ... ಖಂಡಿತ ಅಲ್ಲ! ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಕ್ಕೆ ಅಸಲಿ ಕಾರಣವನ್ನು ಟ್ವಿಟ್ಟಿಗರು ಬಿಚ್ಚಿಟ್ಟಿದ್ದಾರೆ!

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಬಿಜೆಪಿ ಈಗಾಗಲೇ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಆ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಬೆಂಗಳೂರು ಉತ್ತರ ಕೈಬಿಡಲು ಅಸಲಿ ಕಾರಣ

ಬೆಂಗಳೂರು ಉತ್ತರ ಕೈಬಿಡಲು ಅಸಲಿ ಕಾರಣ

ಬೆಂಗಳೂರು ಉತ್ತರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ ದೇವೇಗೌಡರನ್ನು ಹೊರತಾಗಿ ಬೇರೆ ಅಭ್ಯರ್ಥಿಯನ್ನು ಈ ಕ್ಷೇತ್ರದಿಂದ ನಿಲ್ಲಿಸಿದ್ದೇ ಆದಲ್ಲಿ ಜೆಡಿಎಸ್ ಸೋಲುವುದು ಖಚಿತ ಎಂಬುದು ಗೌಡರಿಗೆ ಗೊತ್ತಿತ್ತು. ಈ ಕ್ಷೇತ್ರದಿಂದ ಕಣಕ್ಕಿಳಿಸಿಲು ಅಭ್ಯರ್ಥಿಗಳೇ ಇಲ್ಲದ ಕಾರಣ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ ಎನ್ನಲಾಗುತ್ತಿದೆ.

ದೇವೇಗೌಡರಿಗೆ ಸೋಲುವ ಭಯ!

ದೇವೇಗೌಡರಿಗೆ ನಗರ ಪ್ರದೇಶದ ಜನ ತಮ್ಮನ್ನು ಸರಿಯಾಗಿ ಅಳೆದಿದ್ದಾರೆ ಎಂಬುದು ಅರ್ಥವಾಗಿದೆ. ಇಲ್ಲಿ ಜೆಡಿಎಸ್ ಅನ್ನು ಗೆಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಈ ಕ್ಷೇತ್ರವನ್ನು ಬಿಟ್ತುಕೊಟ್ಟಿದ್ದಾರೆ ಎಂದು ರಾಜೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರ

ಅಭ್ಯರ್ಥಿಗಳಿಲ್ಲ!

ಸಿದ್ದರಾಮಯ್ಯನವರೇ, ದೇವೇಗೌಡರು ಬೆಂಗಳೂರು ಉತ್ತರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದಾರೆ. ತಮ್ಮ ಬಳಿ ಕಣಕ್ಕಿಳಿಸಲು ಅಭ್ಯರ್ಥಿಗಲೇ ಇಲ್ಲದಿದ್ದರೂ 12 ಕ್ಷೇತ್ರಗಳನ್ನು ನೀಡುವಂತೆ ದೇವೇಗೌಡರ ಕಾಂಗ್ರೆಸ್ ಗೆ ಒತ್ತಾಯಿಸಿದ್ದರು. ಈಗ ಕಾಂಗ್ರೆಸ್ಸಿಗೆರು ಅವರು(ದೇವೇಗೌಡ) ಮತ್ತು ಅವರ ಮೊಮ್ಮಕ್ಕಳು ಗೆಲ್ಲುವಂತೆ ಮಾಡಬೇಕು, ಇಲ್ಲವೆಂದರೆ ಮುಂಬರುವ ದಿನಗಳಲ್ಲಿ ಗೌಡರು ಬೇರೆ ಕುತಂತ್ರ ಮಾಡಬಹುದು ಎಂದಿದ್ದಾರೆ ಮಹಾದೇವಪ್ಪ ಮಾರುಗುಂಡ್

ಟಿಕೆಟ್ ಯಾರಿಗೆ ನೀಡಬೇಕು?

ಬೆಂಗಳೂರು ಉತ್ತರ ಕ್ಷೇತ್ರದಿಂದ ರಾಹುಲ್ ಗಾಂಧಿ ಅವರನ್ನೇ ಕಣಕ್ಕಿಳಲಿಸಿ ಎಂದು ಒಬ್ಬರು ಮನವಿ ಮಾಡಿದ್ದರೆ, ಮತ್ತೆ ಕೆಲವರು ರೋಷನ್ ಬೇಗ್ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

English summary
Lok Sabha elections 2019: JDS gives back Bangalore(Bengaluru) North constituency to Congress. Since JDS has no candidates to field here, it gives it back to Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X