ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಕಟ್ಟಡಗಳ ತೆರವಿಗೆ ಬಿಬಿಎಂಪಿ ಯಾಕೆ ಮುಂದಾಗ್ತಿಲ್ಲ?

|
Google Oneindia Kannada News

ಬೆಂಗಳೂರು, ನವೆಂಬರ್ 13: ಬೆಂಗಳೂರಿನಲ್ಲಿ ಒಟ್ಟು 980 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದ್ದು, ತೆರವು ಮಾಡಲು ಬಿಬಿಎಂಪಿ ಬಳಿ ಹಣವಿಲ್ಲವೆಂಬ ಸತ್ಯ ಬಹಿರಂಗವಾಗಿದೆ.

ಕಳೆದ ವರ್ಷ ಸ್ವಲ್ಪ ದಿನಗಳ ಕಾಲ ರಾಜಕಾಲುವೆ ಒತ್ತುವರಿಗೆ ಮಾಡಿದ್ದ ಮನೆಗಳನ್ನು ತೆರವುಗೊಳಿಸುವ ಕೆಲಸ ಬಿಬಿಎಂಪಿ ಮಾಡಿತ್ತು. ಆದರೆ ಸ್ವಲ್ಪ ತಿಂಗಳಲ್ಲೇ ಆ ವಿಚಾರವನ್ನು ಕೈಬಿಟ್ಟಿತ್ತು.

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅಧಿಕಾರಿಗಳಿಗೆ ಜೈಲು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅಧಿಕಾರಿಗಳಿಗೆ ಜೈಲು

ಆದರೆ ಬಂದಿರುವ ಮಾಹಿತಿ ಪ್ರಕಾರ ನಗರದಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕಟಣಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಕಳೆದ ಸೆಪ್ಟೆಂಬರ್‌ನಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿತ್ತು. ಆದರೆ ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಈ ಅಚ್ಚರಿಯ ಮಾಹಿತಿಯನ್ನು ನೀಡಿದ್ದರು.

ಅಕ್ರಮ ಕಟ್ಟಡಗಳು ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ

ಅಕ್ರಮ ಕಟ್ಟಡಗಳು ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ

ಬಿಬಿಎಂಪಿ ಹೈಕೋರ್ಟ್‌ಗೆ ಸಿಲ್ಲಿಕೆ ಮಾಡಿರುವ ಮಾಹಿತಿ ಪ್ರಕಾರ ಬಿಬಿಎಂಪಿ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 274 ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿದ ಕಟ್ಟಡಗಳಿವೆ ಎಂದು ತಿಳಿಸಿವೆ.

ಅಕ್ರಮ ಕಟ್ಟಡಗಳ ಕುರಿತು ಮಾಹಿತಿ

ಅಕ್ರಮ ಕಟ್ಟಡಗಳ ಕುರಿತು ಮಾಹಿತಿ

ಉಳಿದಂತೆ ಮಹದೇವಪುರದಲ್ಲಿ 176, ಯಲಹಂಕದಲ್ಲಿ 136, ಪೂರ್ವದಲ್ಲಿ 108, ಆರ್‌ಆರ್‌ನಗರದಲ್ಲಿ 103, ಬೊಮ್ಮನಹಳ್ಳಿ 92, ಪಶ್ಚಿಮದಲ್ಲಿ 88 ಕಟ್ಡಗಳಿವೆ. ಅತಿ ಕಡಿಮೆ ದಾಸರಹಳ್ಳಿ ವಲಯದಲ್ಲಿ ಕೇವಲ ಎರಡು ಕಟ್ಟಡಗಳಿವೆ ಎಂದು ಹೇಳಲಾಗಿದೆ.

ಒಟ್ಟು 980 ಕಾನೂನು ಬಾಹಿರ ಕಟ್ಟಡಗಳು

ಒಟ್ಟು 980 ಕಾನೂನು ಬಾಹಿರ ಕಟ್ಟಡಗಳು

ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಕುರಿತು ಸರ್ವೆ ನಡೆಸಿದ್ದರು. ಹೈಕೋರ್ಟ್‌ಗೆ ಸಲ್ಲಿರುವ ಮಾಹಿತಿಯನ್ನು ಬಿಡುಗಡೆ ಮಾಡಲಾಗಿತ್ತು. 980 ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳಿವೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಬಳಿ ಇದೆ 50 ಕೋಟಿ ರೂ ಹಣವಿದೆ

ಬಿಬಿಎಂಪಿ ಬಳಿ ಇದೆ 50 ಕೋಟಿ ರೂ ಹಣವಿದೆ

ಬಿಬಿಎಂಪಿ ಬಳಿ ಕೇವಲ 50 ಕೋಟಿ ರೂ ಹಣವಿದೆ. ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಹಣದ ಕೊರತೆ ಇಲ್ಲ. ಸುಮಾರು 50 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಎರಡು ತಿಂಗಳಿನಲ್ಲಿ ಸುಮಾರು 30 ಕಟ್ಟಡಗಳ ತೆರವಿಗೆ ಆದೇಶಿಸಿದ್ದೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

English summary
A total of 980 illegal buildings have been identified in Bengaluru.Why Is The BBMP Not Advocating For The Evacuation Of Illegal Buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X