ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭರವಸೆ ಪೂರೈಸದ ಕಾಂಗ್ರೆಸ್ ಪ್ರಣಾಳಿಕೆ ಏಕೆ ಬಿಡುಗಡೆ ಮಾಡುತ್ತದೆ?'

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಏಪ್ರಿಲ್ 2: ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಿಂದ ನಮ್ಮ ಆರ್ಥಿಕತೆ ನಾಶವಾಗುತ್ತದೆ. ತೆರಿಗೆ ಹೆಚ್ಚಾಗುತ್ತದೆ. ವಿತ್ತೀಯ ಕೊರತೆ ಹೆಚ್ಚಾಗುತ್ತದೆ. ಯುಪಿಎ ಅವಧಿಯಲ್ಲಿ ಇದ್ದಂತೆ ವಿಪರೀತ ಹಣದುಬ್ಬರ ಆಗುತ್ತದೆ. ನಮ್ಮ ಸಶಸ್ತ್ರ ಪಡೆಯನ್ನು ಕೀಳು ಮಾಡುತ್ತದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಆಡಳಿತ ನಡೆಸುತ್ತಿದ್ದ ಕಾಲಕ್ಕೆ ಕರೆದೊಯ್ಯುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

-ಹೀಗೆ ಆರೋಪಿಸಿದ್ದಾರೆ ರಾಜ್ಯಸಭಾ ಸದಸ್ಯ ರಾಕೀವ್ ಚಂದ್ರಶೇಖರ್. ಈ ದಿನ ರಾಹುಲ್ ಗಾಂಧಿ ಅವರು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ತನ್ನ ಭರವಸೆಗಳನ್ನು ಎಂದಿಗೂ ಪೂರೈಸದ ಕಾಂಗ್ರೆಸ್ ಏಕೆ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ ಮತ್ತು ಈ ದಿನ ಬಿಡುಗಡೆಯಾದದ್ದು ಜಾರಿಗೆ ಬಂದರೆ ದೇಶಕ್ಕೆ ಮಾರಕವಾದುದಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

ಅವರು ಉತ್ತರ ಹೇಳಲು ಮುಂದೆ ಬರಬಹುದು ಅಥವಾ ಬಾರದಿರಬಹುದು. ಇದಕ್ಕೆ ನಿಜವಾದ ಉತ್ತರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹತಾಶರಾಗಿದ್ದಾರೆ ಮತ್ತು ಈ ಚುನಾವಣೆಯಲ್ಲಿ ಅತಿ ಮುಖ್ಯ ಚರ್ಚೆಯ ವಿಷಯ ಆಗಿರುವುದರಿಂದ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Why is Rahul Gandhi releasing a Congress Manifesto when it never fulfills promises?

ಹತ್ತು ವರ್ಷದ ಯುಪಿಎ ಆಡಳಿತ ಹಾಗೂ ನರೇಂದ್ರ ಮೋದಿ ಅವರು ಐದು ವರ್ಷದ ಆಡಳಿತಕ್ಕೆ ಹೋಲಿಸಿ, ಪರಿಶುದ್ಧ ಆಡಳಿತ ಹಾಗೂ ಆರ್ಥಿಕತೆ ಪುನರುಜ್ಜೀವನ ಮಾಡಿದ್ದು ಮೋದಿ ಅವರ ಸರಕಾರ ಎಂದಿದ್ದಾರೆ. ಕರ್ನಾಟಕವೇ ಇರಲಿ, ದೇಶದಲ್ಲೇ ಆಗಿರಲಿ ಕಾಂಗ್ರೆಸ್ ನ ಭ್ರಷ್ಟಾಚಾರದ ದಾಖಲೆ ಗಮನಿಸಿ ಎಂದಿದ್ದಾರೆ.

ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳುನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು

ಕಳೆದ ಅರವತ್ತೈದು ವರ್ಷಗಳಿಂದ ಕಾಂಗ್ರೆಸ್ ಭರವಸೆ ನೀಡುತ್ತಲೇ ಇದೆ. ಆದರೆ ಅದರಲ್ಲಿ ಭರವಸೆ ಪೂರೈಸಿದ ದಾಖಲೆ ಎಷ್ಟು? ಇದು ಪ್ರತಿಯೊಬ್ಬರಿಗೂ ನೋಡಲು ಸಿಗುತ್ತದೆ: ಬಿಜೆಪಿಯು ತೊಂಬತ್ತೆಂಟು ಪ್ರತಿ ಶತ ಭರವಸೆ ಈಡೇರಿಸಿದೆ. ಈ ಹಿಂದೆ ಕೂಡ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಕಂಡಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಗಳಲ್ಲಿ ಭಾರತ ಛಿದ್ರವಾಗುವ ಅಪಾಯ: ಜೇಟ್ಲಿಕಾಂಗ್ರೆಸ್ ಪ್ರಣಾಳಿಕೆ ಘೋಷಣೆಗಳಲ್ಲಿ ಭಾರತ ಛಿದ್ರವಾಗುವ ಅಪಾಯ: ಜೇಟ್ಲಿ

ಇವುಗಳು ನಿಜವಾದ ವಿಚಾರಗಳು. ಜನರು ಆ ಬಗ್ಗೆ ಚರ್ಚೆ ಮಾಡಲು ಬಯಸುತ್ತಾರೆ. ಆದರೆ ಅವರಿಗೆ ಜನರು ಚರ್ಚೆ ಹಾಗೂ ಸಂವಾದ ನಡೆಸುವುದು ಬೇಕಿಲ್ಲ. ಆದ್ದರಿಂದ ಬೇರೆ ಬೇರೆ ವಿಚಾರವನ್ನು ಎಳೆದು ತರುತ್ತಾರೆ. ಅವುಗಳೇ ಪ್ರಣಾಳಿಕೆಯಲ್ಲಿ ಕೂಡ ಇವೆ ಎಂದು ರಾಜೀವ್ ಚಂದ್ರಶೇಖರ್ ಲೇವಡಿ ಮಾಡಿದ್ದಾರೆ.

English summary
The Question today that Rahul Gandhi must be asked is, why is he releasing a Congress Manifesto when it never fulfills promises and why the one released today, if ever implemented is bad for country?, asks BJP Rajya Sabha member Rajeev Chaandrasekhar in the press statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X