ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಆರ್‌ನಗರ ಚುನಾವಣೆ: ಹುಚ್ಚವೆಂಕಟ್‌ ಸೋಲಿಗೆ 5 ಕಾರಣಗಳು

By Nayana
|
Google Oneindia Kannada News

Recommended Video

Karnataka Elections 2018 : ಆರ್ ಆರ್ ನಗರದಲ್ಲಿ ಹುಚ್ಚ ವೆಂಕಟ್ ಸೋಲಲು 5 ಕಾರಣಗಳು | Oneindia Kannada

ಬೆಂಗಳೂರು, ಮೇ 31: ರಾಜರಾಜೇಶ್ವರಿ ನಗರದ ವಿಧಾನಸಭೆ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್ ಸೋಲಿಗೆ ಕಾರಣಗಳೇನು ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದ್ದ ಅಭ್ಯರ್ಥಿ ಹುಚ್ಚ ವೆಂಕಟ್. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಚುನಾವಣಾ ಪ್ರಚಾರವನ್ನು ಮಾಡಿರಲಿಲ್ಲ ಇದೇ ಅವರ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?

ಕ್ಷೇತ್ರದಲ್ಲಿ ಏನು ಮಾಡಬೇಕು, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ಯೋಚಿಸಿದ್ದೇನೆ. ನನಗೆ ಮತ ನೀಡಿ. ಮನೆ-ಮನೆಗೆ ಬಂದು ನಾನು ಮತ ಕೇಳುವುದಿಲ್ಲ' ಎಂದು ಹುಚ್ಚ ವೆಂಕಟ್ ಘೋಷಣೆ ಮಾಡಿದ್ದರು.

ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!

ಗುರುವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. 14ನೇ ಸುತ್ತಿನ ಎಣಿಕೆ ವೇಳೆ ನಟ, ನಿರ್ದೇಶಕ ಹುಚ್ಚ ವೆಂಕಟ್ 562ಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ 900ಕ್ಕೂ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿವೆ.

ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?

ಅದಕ್ಕೆ ಹುಚ್ಚ ವೆಂಕಟ್ ಪ್ರತಿಕ್ರಯಿಸಿದ್ದು, ಹುಚ್ಚ ವೆಂಕಟ್ ಸೋತಿಲ್ಲ ಜನರುಉ ಸೋತಿದ್ದಾರೆ, ಮಂಡ್ಯದಲ್ಲಿ ಎಂಪಿ ಚುನಾವಣೆಗೆ ನಿಲ್ಲುತ್ತೇನೆ, ಪ್ರಧಾನಮಂತ್ರಿಯಾಗುವವರೆಗೂ ರಾಜಕೀಯವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳ ಬಗ್ಗೆ ನನಗೆ ಗೌರವವಿದೆ ಆದರೆ ಹೆಣ್ಣು ಮಕ್ಕಳು ಸಮಾಜವನ್ನು ಕ್ಲೀನ್ ಮಾಡಲು ಬರುವ ಅಗತ್ಯವಿಲ್ಲ ಅದಕ್ಕೆ ಪುರುಷರಿದ್ದಾರೆ ಎಂದು ಕಠೋರವಾಗಿ ನುಡಿದಿದ್ದಾರೆ.

ಹುಚ್ಚ ವೆಂಕಟ್‌ಗೆ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಬೆಂಬಲವಿರಲಿಲ್ಲ

ಹುಚ್ಚ ವೆಂಕಟ್‌ಗೆ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಬೆಂಬಲವಿರಲಿಲ್ಲ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ. ಹುಚ್ಚ ವೆಂಕಟ್ ಆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಿಣಕ್ಕಿಳಿದಿದ್ದರು. ಆದರೆ ಅವರಿಗೆ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳ ಬೆಂಬಲ ಇಲ್ಲದಿರುವುದು ಕೂಡ ಅವರ ಸೋಲಿಗೆ ಕಾರಣವಾಗಿದೆ.

ಹುಚ್ಚ ವೆಂಕಟ್ ಚುನಾವಣಾ ಪ್ರಚಾರ ಮಾಡಿರಲಿಲ್ಲ

ಹುಚ್ಚ ವೆಂಕಟ್ ಚುನಾವಣಾ ಪ್ರಚಾರ ಮಾಡಿರಲಿಲ್ಲ

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕುತೂಹಲ ಕೆರಳಿಸಿದ್ದ ಅಭ್ಯರ್ಥಿ ಹುಚ್ಚ ವೆಂಕಟ್. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಚುನಾವಣಾ ಪ್ರಚಾರವನ್ನು ಮಾಡಿರಲಿಲ್ಲ. ಇಂದು ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ನಾನು ಮನೆ-ಮನೆಗೆ ಬಂದು ಮತ ಕೇಳುವುದಿಲ್ಲ. ಯಾರು ದುಡ್ಡಿಗೆ ವೋಟು ಮಾರಿಕೊಳ್ಳವರೋ ಅವರು ನನ್ನ ಎಕ್ಕಡ ಸಮಾನ ಎಂದಿದ್ದಾರೆ. ಚುನಾವಣಾ ಪ್ರಚಾರ ಮಾಡದೆ ಇರುವುದು ಕೂಡ ಅವರ ಸೋಲಿಗೆ ಒಂದು ಕಾರಣವಾಗಿದೆ.

ಹುಚ್ಚ ವೆಂಕಟ್ ನಡವಳಿಕೆಯಿಂದ ಜನ ತಿರಸ್ಕರಿಸಬಹುದು

ಹುಚ್ಚ ವೆಂಕಟ್ ನಡವಳಿಕೆಯಿಂದ ಜನ ತಿರಸ್ಕರಿಸಬಹುದು

ಹುಚ್ಚ ವೆಂಕಟ್ ಅವರ ಮನಸ್ಸಿನಲ್ಲಿ ಎಷ್ಟೇ ಉತ್ತಮ ವಿಚಾರಗಳನ್ನು ಇಟ್ಟುಕೊಂಡಿದ್ದರೂ ಕೂಡ ಅವರು ಹೇಳುವ ರೀತಿಯು ಕೆಲವು ಜನರಿಗೆ ಇಷ್ಟವಾಗದ ಕಾರಣಕ್ಕೆ ಜನರು ಅವರನ್ನು ತಿರಸ್ಕರಿಸಿರಬಹುದು ಎಂದು ಅಂದಾಜಿಸಬಹುದು.

ಮುನಿರತ್ನರಿಗೆ ಸರಿಸಮನಾದ ಅಭ್ಯರ್ಥಿ ಹುಚ್ಚ ವೆಂಕಟ್ ಅಲ್ಲ

ಮುನಿರತ್ನರಿಗೆ ಸರಿಸಮನಾದ ಅಭ್ಯರ್ಥಿ ಹುಚ್ಚ ವೆಂಕಟ್ ಅಲ್ಲ

ರಾಜರಾಜೇಶ್ವರಿನಗರದ ಜನತೆ ಮುನಿರತ್ನ ಹಾಗೂ ಅವರ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದೆ. ಅವರ ಕೆಲಸಗಳನ್ನು ಮೆಚ್ಚಿಕೊಂಡಿದೆ. ಆದರೆ ಹುಚ್ಚ ವೆಂಕಟ್ ಮಾತುಗಳಷ್ಟನ್ನೇ ಇಟ್ಟುಕೊಂಡು ಮತ ಹಾಕಲು ಹಿಂದೇಟು ಹಾಕಿದ್ದಾರೆ. ಹಾಗೂ ಮುನಿರತ್ನ ರಾಜಕೀಯದಲ್ಲಿ ಪಳಗಿದವರಾಗಿದ್ದು ಪಕ್ಷದ ಸಂಪೂರ್ಣ ಬೆಂಬಲ ಅವರಿಗಿತ್ತು.

ಕೇವಲ ಸೆಲೆಬ್ರಿಟಿ ಆದ ಕಾರಣಕ್ಕೆ ಮತ ಹಾಕಲು ಜನರ ಹಿಂದೇಟು

ಕೇವಲ ಸೆಲೆಬ್ರಿಟಿ ಆದ ಕಾರಣಕ್ಕೆ ಮತ ಹಾಕಲು ಜನರ ಹಿಂದೇಟು

ಹುಚ್ಚ ವೆಂಕಟ್ ಕೇವಲ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಅವರಿಗೆ ಮತ ಹಾಕಲು ರಾಜರಾಜೇಶ್ವರಿ ನಗರದ ಜನತೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹುಚ್ಚ ವೆಂಕಟ್ ರಾಜರಾಜೇಶ್ವರಿನಗರದಲ್ಲಿ ಮನೆಮನೆಗೆ ತೆರಳಿ ಪ್ರಚಾರ ಮಾಡಿಲ್ಲ, ಅವರು ನಾಮಪತ್ರ ಸಲ್ಲಿಸಿದ ಮೇಲೆ ಯಾರಿಗೂ ಕಾಣಿಸಿಕೊಂಡಿಲ್ಲ, ಹೀಗಿರುವಾಗ ಅವರು ಜನಪ್ರತಿನಿಧಿಯಾಗಿ ಹುಚ್ಚವೆಂಕಟ್ ಅವರನ್ನು ಆಯ್ಕೆ ಮಾಡಲು ಹಿಂದೇಟು ಹಾಕಿದ್ದಾರೆ.

English summary
Bigg boss TV show celebrity and film actor Huchcha Venkat defeated badly in RR Nagar assembly constituency on Thursday. Why did people defeated Venkat? Reasons are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X