• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸೌಧದಲ್ಲಿ ಇಲಿ ಶಿಕಾರಿಗೆ ಮೂರುವರೆ ಲಕ್ಷ!

By Prasad
|

ಬೆಂಗಳೂರು, ಅ. 30 : ಸಿಕ್ಕಾಪಟ್ಟೆ ಉಪಟಳ ನೀಡುವ ಬೀದಿ ನಾಯಿಗಳನ್ನು, ಭಕ್ತಾದಿಗಳ ಮೇಲೆ ವಿನಾಕಾರಣ ದಾಳಿ ಮಾಡುವ ಮಂಗಗಳನ್ನು ಸರಕಾರದವರು ಹಿಡಿದಿರುವುದನ್ನು ನೀವು ಕೇಳಿದ್ದೀರಿ. ಆದರೆ, ತಮ್ಮ ಪಾಡಿಗೆ ತಾವಿದ್ದು, ಹಸಿವೆಯಾದಾದ ಸಿಕ್ಕಿದ್ದನ್ನು ತಿಂದು ತೇಗುವ ಇಲಿಗಳನ್ನು ಹಿಡಿಯಲು ಸರಕಾರ ವಿಶೇಷ ಸ್ಕೀಂ ಹಾಕಿಕೊಂಡಿರುವುದನ್ನು ನೀವು ಕೇಳಿದ್ದೀರಾ?

ಇಲ್ಲವಾದರೆ, ಇಲ್ಲಿದೆ ಓದಿ ಸ್ವಾರಸ್ಯಕರ ಸುದ್ದಿ. ಹಾಗೆಯೆ, ಓದುತ್ತ ಓದುತ್ತ, ಅಲಾ ಇಸ್ಕಿ 'ಹೀಗೂ ಉಂಟೇ' ಎಂದು ಬೆಕ್ಕಸಬೆರಗಾಗಲಿದ್ದೀರಿ. ಇದು ಯಾವುದೇ ಮನೆಯಾಗಲಿ, ಗೋಡೌನಾಗಲಿ ಹೊಕ್ಕು ಇಲಿ ಹಿಡಿಯುವಂಥ ಸುದ್ದಿಯಲ್ಲ. ವಿಧಾನಸೌಧ, ವಿಶ್ವೇಶ್ವರಯ್ಯ ಗೋಪುರ, ಎಂಎಸ್ ಬಿಲ್ಡಿಂಗ್‌ಗಳಲ್ಲಿ ಸ್ವಚ್ಛಂತವಾಗಿ ಅಡ್ಡಾಡುವ ಇಲಿಗಳನ್ನು ಹಿಡಿಯಲು ಹಾಕಿಕೊಂಡಿರುವ ಮಾಸ್ಟರ್ ಪ್ಲಾನ್ ಇದು.

ಈ ಯೋಜನೆಗಾಗಿ ಫಂಡ್ ಕೂಡ ರಿಲೀಸ್ ಆಗಿದೆ. ಅದೂ ಅಷ್ಟಿಷ್ಟಲ್ಲ. ಬರೋಬ್ಬರಿ ಮೂರುವರೆ ಲಕ್ಷಕ್ಕೆ ಫಿಕ್ಸ್ ಆಗಿದೆ. ಈ ಟೆಂಡರ್ ಯಾರಿಗೆ ಸಿಕ್ಕಿದೆ ಎಂಬುದು ಗೊತ್ತಾಗಿದೆ. ಆದರೆ, ಅವರು ಎಷ್ಟು ಇಲಿಗಳನ್ನು ಹಿಡಿಯುತ್ತಾರೆ, ಹಿಡಿದು ಏನು ಮಾಡುತ್ತಾರೆ, ಮತ್ತೆ ಎಲ್ಲಿ ಬಿಡುತ್ತಾರೆ ಎಂಬ ವಿವರಗಳನ್ನು ಮಾತ್ರ ಸದ್ಯಕ್ಕೆ ಕೇಳಬೇಡಿ. [ಬಿಬಿಎಂಪಿ ಹಿಡಿದದ್ದು 20 ಇಲಿ]

ರಾಜ್ಯೋತ್ಸವ ಪ್ರಶಸ್ತಿ ಕೊಡಿ : ಅದ್ಯಾವ ಮಹಾಶಯನಿಗೆ ಈ ಐಡಿಯಾ ಬಂದಿತೋ? ಆತನಿಗೆ ಸರಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸದಿದ್ದರೆ ಹೇಗೆ? ಒಟ್ಟಿನಲ್ಲಿ ಸಾರ್ವಜನಿಕರು ತೆರಿಗೆ ಕಟ್ಟಿದ ಲಕ್ಷಾಂತರ ದುಡ್ಡು ಬೇಕಾಬಿಟ್ಟಿಯಾಗಿ ಪೋಲಾಗುತ್ತಿದೆ. ಇದನ್ನು ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಖಂಡಿತ ಇಲ್ಲ. ಧೈರ್ಯವಿದ್ದರೆ ಸಿದ್ದರಾಮಯ್ಯನವರನ್ನು ಕೇಳಿ.

ಇಲಿಗಳ ಕಾಟ ಎಲ್ಲಿ ಇರುವುದಿಲ್ಲ ಹೇಳಿ? ಮನೆಯಲ್ಲಿ ಇಲ್ಲವಾ, ಕಿರಾಣಿ ಅಂಗಡಿಗಳಲ್ಲಿ ಇಲ್ಲವಾ, ಗೋದಾಮುಗಳಲ್ಲಿ ಇಲ್ಲವಾ, ಎಸಿ ಇರುವ ಸಾಫ್ಟ್ ವೇರ್ ಕಂಪನಿಯ ಕಚೇರಿಗಳಲ್ಲಿ ಇಲ್ಲವಾ? ಹಾಗೆಯೆ, ವಿಧಾನಸೌಧ, ವಿಶ್ವೇಶ್ವರಯ್ಯ ಗೋಪುರ ಮುಂತಾದವೆಡೆ ಇರುವುದು ಕೂಡ ಅಷ್ಟೇ ಸಹಜ. ಹಾಗಂತ ಇಲಿಗಳನ್ನು ಹಿಡೀಬಾರದಂತಲ್ಲ. ಆದರೆ, ಇಷ್ಟೊಂದು ವ್ಯವಯಿಸುವುದಾ?

ಒಂದೇ ಸಂಸ್ಥೆಗೆ ಟೆಂಡರ್! : ಒಂದು ವರ್ಷದ ಅವಧಿಯಲ್ಲಿ, ವಿಧಾನಸೌಧ, ವಿಕಾಸಸೌಧ, ವಿಶ್ವೇಶ್ವರಯ್ಯ ಗೋಪುರ, ಎಂಎಸ್ ಬಿಲ್ಡಿಂಗ್‌ನಲ್ಲಿರೋ ಸರ್ಕಾರಿ ಕಚೇರಿಗಳಲ್ಲಿ.. ಇಲಿ ಹೆಗ್ಗಣಗಳನ್ನ ಹೇಗಾದ್ರೂ ಮಾಡಿ ಹಿಡಿಯಬೇಕು ಅಂತ ಸರ್ಕಾರ ಈ ಟೆಂಡರ್ ಕರೆದಿತ್ತು. ವಿಶೇಷ ಅಂದ್ರೆ, ಈ ಬಾರಿ ಟೆಂಡರ್ ಮೊತ್ತಕ್ಕೆ ಸರ್ಕಾರಿ ಬಿಡ್ ಹರಾಜಾಗಿದ್ದು 3.50 ಲಕ್ಷಕ್ಕೆ. ಗಂಗಾ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಅನ್ನೋ ಖಾಸಗಿ ಸಂಸ್ಥೆಯೊಂದು ಟೆಂಡರ್‌ಬಿಡ್ ಗಿಟ್ಟಿಸಿದೆ. ತಮಾಷೆ ಅಂದ್ರೆ ಕಳೆದ 10 ವರ್ಷದಿಂದ ಇದೇ ಸಂಸ್ಥೆ ಟೆಂಡರ್ ಪಡೀತಿದೆ.

ಇಲಿ ಹಿಡಿಯಲು ಒಟ್ಟು ಕೋಟಿ ಖರ್ಚು : ಭಪ್ಪರೆ, ಇಷ್ಟು ವರ್ಷಗಳಲ್ಲಿ ಇಲಿ ಹಿಡಿಯಲು ಸುಮಾರು 1 ಕೋಟಿ ರುಪಾಯಿಗೂ ಹೆಚ್ಚು ಖರ್ಚಾಗಿದೆಯಂತೆ. ಒಂದು ಕೋಟಿ ದಾಟಿದ್ದಕ್ಕೆ ಬೇಕಿದ್ದರೆ ಒಂದು ಚಪ್ಪಾಳೆ ಹೊಡೆದುಬಿಡಿ. ಒಂದು ವರ್ಷದ ಅವಧಿಯಲ್ಲಿ ಟೆಂಡರ್ ತಗೊಂಡೋರು ಎಷ್ಟು ಇಲಿಗಳನ್ನ ಹಿಡೀತಾರೋ.. ಅದ್ಹೇಗೆ ಹಿಡೀತಾರೋ ಗೊತ್ತಿಲ್ಲ. ಅಥವಾ ಹಿಡಿದು ಮತ್ತೆ ಅಲ್ಲೇ ಬಿಡ್ತಾರೋ? ಗಾಡ್ ನೋಸ್!

ಇಲಿ ಹಿಡಿಯುವ ವಿಷಯದಲ್ಲಿ ಅದೆಷ್ಟು ದುಡ್ಡು ಯಾರ್ಯಾರ ಜೇಬು ತುಂಬಿದೆಯೋ ಬಲ್ಲವರಾರು? ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವಂತೆ ಜನರು ತೆರಿಗೆ ರೂಪದಲ್ಲಿ ನೀಡಿದ ದುಡ್ಡು ಸದ್ಬಳಕೆಯಾಗದೆ ದುರ್ವ್ಯಯವಾಗುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಇಲಿಗಳನ್ನು ಹಿಡಿಯುವ ಬದಲು, ಸರಕಾರಿ ಕಚೇರಿಗಳಲ್ಲಿ ಅವಿತುಕೊಂಡಿರುವ 'ಹೆಗ್ಗಣ'ಗಳನ್ನು ಹಿಡಿಯಲು ಮುಂದಾಗಬೇಕಿದೆ. ಆದರೆ, ಇಲಿಗಳನ್ನು ಹಿಡಿಯುವ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Believe it or not. Karnataka govt has called for a tender to catch rampaging rats in Vidhana Soudha, Vikasa Soudha, Vishweshwaraiah Tower, MS building etc for an amount of Rs. 3.5 lakhs. Do you have courage to protest this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more