ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥ್ ರಾಜೀನಾಮೆ: ಜೆಡಿಎಸ್ ನ ಮುಂದಿನ ರಾಜ್ಯಾಧ್ಯಕ್ಷ ಯಾರಾಗಬಹುದು?

|
Google Oneindia Kannada News

Recommended Video

ಎಚ್ ವಿಶ್ವನಾಥ್ ರಾಜೀನಾಮೆ ಹಿನ್ನೆಲೆ ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷರು ಯಾರು? | Oneindia Kannada

ಬೆಂಗಳೂರು, ಜೂನ್ 04: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಮಂಗಳವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್ ನ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ಇದೀಗ ಕುತೂಹಲ ಸೃಷ್ಟಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಬೆಂಗಳೂರಿನಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ ವಿಶ್ವನಾಥ್ ಹೇಳಿದರು.

ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಮುನಿಸು ಮತ್ತು ಸಮನ್ವಯ ಸಮಿತಿಯಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು. ಜೆಡಿಎಸ್ ನಲ್ಲಿ ತಮಗೆ ಗೌರವಯುತ ಸ್ಥಾನ ನೀಡಲಾಗಿದೆ ಎಂದ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಇನ್ನಿತರ ನಾಯಕರನ್ನು ಸ್ಮರಿಸಿದರು.

ಇದೀಗ ಎದ್ದಿರುವ ಪ್ರಶ್ನೆ ಜೆಡಿಎಸ್ ನ ಮುಂದಿನ ರಾಜ್ಯಾಧ್ಯಕ್ಷರು ಯಾರಾಗಬಹುದು ಎಂಬುದು. ಅದಕ್ಕೆ ಉತ್ತರವಾಗಿ ಸಂಭಾವ್ಯ ಮುಖಂಡರ ಪಟ್ಟಿ ಇಲ್ಲಿದೆ... ಈ ಪಟ್ಟಿಯಲ್ಲಿರುವುದು ಕೇವಲ ಸಂಭಾವ್ಯರ ಪಟ್ಟಿಯಾಗಿದ್ದು, ಈ ಬಗ್ಗೆ ಪಕ್ಷದ ಅಥವಾ ಈ ಎಲ್ಲ ಮುಖಂಡರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಸೋಲನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ. ಯುವ ನಾಯಕರಿಗೆ ಒತ್ತು ನೀಡುವ ಉದ್ದೇಶದಿಂದ ಅವರನ್ನು ಆಯ್ಕೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ.

ಮಂಡ್ಯ ಚುನಾವಣೆ ಸೋತ ನಿಖಿಲ್‌ಗೆ ಕುಮಾರಸ್ವಾಮಿಯಿಂದ ಉಡುಗೊರೆ!ಮಂಡ್ಯ ಚುನಾವಣೆ ಸೋತ ನಿಖಿಲ್‌ಗೆ ಕುಮಾರಸ್ವಾಮಿಯಿಂದ ಉಡುಗೊರೆ!

ವೈಎಸ್ ವಿ ದತ್ತ

ವೈಎಸ್ ವಿ ದತ್ತ

ಜೆಡಿಎಸ್ ನ ನಿಷ್ಠಾವಂತ ಮುಖಂಡ ವೈ ಎಸ್ ವಿ ದತ್ತ ಅವರ ಹೆಸರೂ ಕೇಳಿಬರುತ್ತಿದ್ದು, ಅವರಿಗಿರುವ ವರ್ಚಸ್ಸು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕೆ ಲಾಭವನ್ನು ನೀಡಬಹುದು ಎಂಬ ಲೆಕ್ಕಾಚಾರವೂ ಇದೆ. ಚಿಕ್ಕಮಗಳೂರಿನ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ವೈಎಸ್ ವಿ ದತ್ತ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಸೋಲು ಕಂಡಿದ್ದರು.

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

ಕೆಲವು ವರದಿಗಳು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಅಧ್ಯಕ್ಷ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಬಹುದು ಎಂದೂ ಹೇಳಿವೆ. ಆದರೆ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಸಾಕಷ್ಟು ಒತ್ತಡದ ಕಾರ್ಯವಾದ್ದರಿಂದ ಇದಕ್ಕೆ ಕುಮಾರಸ್ವಾಮಿ ಅವರ ಕುಟುಂಬದಿಂದಲೇ ವಿರೋಧ ವ್ಯಕ್ತವಾದರೂ ಅಚ್ಚರಿಯಿಲ್ಲ.

ರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡುರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡು

ಎಚ್ ಡಿ ರೇವಣ್ಣ

ಎಚ್ ಡಿ ರೇವಣ್ಣ

ಪಿಡಬ್ಲ್ಯು ಡಿ ಸಚಿವ ಎಚ್ ಡಿ ರೇವಣ್ಣ ಅವರೂ ಅಧ್ಯಕ್ಷರ ಪಟ್ಟಿಯಲ್ಲಿದ್ದಾರೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಆದರೆ ಈ ಯಾವುದೇ ವಂದಂತಿಯ ಬಗ್ಗೆ ಜೆಡಿಎಸ್ ಮುಖಂಡರ್ಯಾರೂ ಪ್ರತಿಕ್ರಿಯೆಯನ್ನಾಗಲೀ, ಸ್ಪಷ್ಟನೆಯನ್ನಾಗಲೀ ಇದುವರೆಗೂ ನೀಡಿಲ್ಲ.

ಮಧು ಬಂಗಾರಪ್ಪ

ಮಧು ಬಂಗಾರಪ್ಪ

ಜೆಡಿಎಸ್ ನ ಪ್ರಮುಖ ಮುಖಂಡರಲ್ಲೊಬ್ಬರಾದ ಮಧುಬಂಗಾರಪ್ಪ ಅವರನ್ನೂ ಅಧ್ಯಕ್ಷ ಹುದ್ದೆಗೆ ಜೆಡಿಎಸ್ ಸೂಚಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮಧುಬಂಗಾರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.

English summary
Hunsur MLA H Vishwanath resigned to his JDS president post. Now the question is who will be the next president of JDS. Here is the probable leaders' list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X