ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾಗೆ ಬಾರದವರಿಗೆ ಟಿಕೆಟ್ ಹಣ ಮರುಪಾವತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಯಲಹಂಕದ ವಾಯುನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾಗೆ ಬಾರದಿರುವವರ ಹಣವನ್ನು ಹಿಂದಿರುಗಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಫೆಬ್ರವರಿ 20-24ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆದಿತ್ತು. ಆದರೆ ಫೆಬ್ರವರಿ 23ರಂದು ಗೇಟ್ ನಂಬರ್ 5ರ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು 300ಕ್ಕೂ ಹೆಚ್ಚು ಕಾರುಗಳು ಅಗ್ನಿಗೆ ಆಹುತಿಯಾಗಿತ್ತು.

ಆ ಸಂದರ್ಭದಲ್ಲಿ ತಮ್ಮ ಕಾರು ಉಳಿಸಿಕೊಳ್ಳಲು ಪ್ರೇಕ್ಷಕರು ತೆರಳಿದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ, ಅಂದು ಕೊನೆಯ ಶೋವನ್ನು ರದ್ದುಪಡಿಸಲಾಗಿತ್ತು ಹಾಗೆಯೇ ಮಧ್ಯಾಹ್ 2 ಗಂಟೆಗೆ ಮತ್ತೊಂದು ಶೋ ಇತ್ತು ಆದರೆ ಆ ಪ್ರದರ್ಶನಕ್ಕೆ ಸಾಕಷ್ಟು ಜನ ಪ್ರೇಕ್ಷಕರು ಬರಲು ಸಾಧ್ಯವಾಗಿಲ್ಲ ಹೀಗಾಗಿ ಆ ಹಣವನ್ನು ಹಿಂದಿರುಗಿಸಲು ಆಯೋಜಕರು ಮುಂದಾಗಿದ್ದಾರೆ.

Who missed the Aero india will get money back

ಪ್ರದರ್ಶನಕ್ಕೆ ಬಾರದವರು ಏರೋ ಇಂಡಿಯಾ ಪ್ರದರ್ಶನದ ಆಯೋಜಕರನ್ನು ಸಂಪರ್ಕಿಸಿ ಹಣ ವಾಪಸ್ ನೀಡುವಂತೆ ಕೋರಿದ್ದಾರೆ. ಈ ಕೋರಿಕೆ ಮೇರೆಗೆ ಹಣ ಮರು ಪಾವತಿಸುವುದಾಗಿ ಆಯೋಜಕರು ತಿಳಿಸಿದ್ದಾರೆ.

ಬಳಸದ ಟಿಕೆಟ್ ಅನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಎಚ್‌ಎಎಲ್ ಕಾರ್ಪೊರೇಟ್ ಕಚೇರಿಯಲ್ಲಿ ನೀಡಿದರೆ ಆನ್‌ಲೈನ್‌ನಲ್ಲೇ ಖಾತೆಗೆ ಹಣ ಮರುಪಾವತಿ ಮಾಡಲಾಗುತ್ತದೆ.

English summary
After fire incident road was jammed, So Aero India event management decided to give money back those who missed the show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X