ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡೆದ ಹುಳಿಮಾವು ಕರೆ; ಮೂವರಲ್ಲಿ ಯಾರು ಜವಾಬ್ದಾರಿ?

|
Google Oneindia Kannada News

ಬೆಂಗಳೂರು, ನವೆಂಬರ್ 25 : ಹುಳಿಮಾವು ಕೆರೆ ದಂಡೆ ಒಡೆದು ವಿವಿಧ ಬಡಾವಣೆಗಳಿಗೆ ಭಾನುವಾರ ನೀರು ನುಗ್ಗಿತ್ತು. ಕಲ್ಯಾಣ ಮಂಟಪ, ಶಾಲೆಯಲ್ಲಿ ಜನರು ರಾತ್ರಿ ಕಳೆದಿದ್ದಾರೆ. ಆದರೆ, ಕೆರೆ ದಂಡೆ ಒಡೆದಿದ್ದು ಯಾರು? ಎಂಬುದು ಪ್ರಶ್ನೆಯಾಗಿದೆ.

ಭಾನುವಾರ ಮಧ್ಯಾಹ್ನ ಹುಳಿಮಾವು ಕೆರೆ ಒಡೆದು ನೀರು ಬಡಾವಣೆಗಳಿಗೆ ನುಗ್ಗಿತ್ತು. ಈ ಘಟನೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೆ, 250ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಕೆರೆ ನೀರಿನಿಂದ ವಿವಿಧ ಬಡಾವಣೆಗಳು ಜಲಾವೃತವಾಗಿತ್ತು.

11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ

ಕೆರೆ ದಂಡೆಯನ್ನು ಒಡೆದಿದ್ದು ಯಾರು? ಎಂಬ ವಿಚಾರದ ಕುರಿತು ಯಾರಿಗೂ ಸ್ಪಷ್ಟತೆ ಇಲ್ಲ. ಸ್ಥಳೀಯರ ಕೈವಾಡ ಎಂದು ಬಿಬಿಎಂಪಿ ಆರೋಪ ಮಾಡುತ್ತಿದೆ. ಬಿಬಿಎಂಪಿ, ಬಿಡಿಎ ಮೇಲೆಯೂ ಅನುಮಾನ ವ್ಯಕ್ತವಾಗುತ್ತಿದೆ.

ಹುಳಿಮಾವು ಕೆರೆ ಕಟ್ಟೆ ಒಡೆದು, ಲೇಔಟಿಗೆ ನೀರು, ಆತಂಕದಲ್ಲಿ ಜನತೆ ಹುಳಿಮಾವು ಕೆರೆ ಕಟ್ಟೆ ಒಡೆದು, ಲೇಔಟಿಗೆ ನೀರು, ಆತಂಕದಲ್ಲಿ ಜನತೆ

ಕೆರೆ ನೀರಿನಿಂದ ಮನೆಗಳು ಜಲಾವೃತವಾಗಿವೆ. ಬಿಬಿಎಂಪಿ ಕಲ್ಯಾಣ ಮಂಟಪ, ಶಾಲೆಯಲ್ಲಿ ಜನರಿಗೆ ರಾತ್ರಿ ಊಟ, ವಸತಿ ವ್ಯವಸ್ಥೆ ಮಾಡಿತ್ತು. ಎರಡು ಜೆಸಿಪಿ, 10 ಟಿಪ್ಪರ್ ಬಳಸಿ ಮಣ್ಣನ್ನು ತುಂಬಿ ಕೆರೆ ದಂಡೆಯನ್ನು ಭದ್ರಪಡಿಸಲಾಗಿದೆ.

ಕಣ್ಮರೆಯಾದ ಬೆಂಗಳೂರಿನ ಭೋಗನಹಳ್ಳಿ ಕೆರೆ ಕಣ್ಮರೆಯಾದ ಬೆಂಗಳೂರಿನ ಭೋಗನಹಳ್ಳಿ ಕೆರೆ

ಸ್ಥಳೀಯರ ಕೈವಾಡ ಶಂಕೆ

ಸ್ಥಳೀಯರ ಕೈವಾಡ ಶಂಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೆರೆ ದಂಡೆ ಒಡೆದಿರುವ ಹಿಂದೆ ಸ್ಥಳೀಯರ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಯಾವುದೇ ಕಾಮಗಾರಿ ಕೈಗೊಂಡಿರಲಿಲ್ಲ ಎಂಬುದು ಪಾಲಿಕೆಯ ಸ್ಪಷ್ಟನೆ. ಆದರೆ, ಇಲ್ಲಿ ಪೈಪ್ ಲೈನ್ ಹಾಕುವ ಕಾಮಗಾರಿ ಸಲುವಾಗಿ ಜೆಸಿಬಿ ತರಿಸಿ ಕೆರೆದಂಡೆಯನ್ನು ಅಗೆದಿದ್ದರು. ಇದರಿಂದಾಗಿ ರಭಸವಾಗಿ ನೀರು ನುಗ್ಗಿದೆ ಎಂದು ಆರೋಪಿಸುತ್ತಿದ್ದಾರೆ.

ಕೆರೆ ಅಭಿವೃದ್ಧಿಗೆ ಅನುದಾನ ಮಂಜೂರು

ಕೆರೆ ಅಭಿವೃದ್ಧಿಗೆ ಅನುದಾನ ಮಂಜೂರು

ಹುಳಿಮಾವು ಕೆರೆ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 10 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇದಕ್ಕೆ ಟೆಂಡರ್ ಸಹ ಕರೆಯಲಾಗಿತ್ತು. ಟೆಂಡರ್‌ಗೆ ಮಂಜೂರಾತಿ ಸಿಗಬೇಕಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡ ಕಾರಣ ಹಳೆಯ ಟೆಂಡರ್ ಪ್ರಕ್ರಿಯೆ ರದ್ದಾಯಿತು ಎಂಬುದು ಬಿಬಿಎಂಪಿ ಅಧಿಕಾರಿಗಳ ಹೇಳಿಕೆ.

ಚಿತ್ರಗಳು : ಹುಳಿಮಾವು ಕೆರೆ ಒಡೆದು ಹಾನಿ

ಟೆಂಡರ್ ಅಂತಿಮಗೊಂಡಿಲ್ಲ

ಟೆಂಡರ್ ಅಂತಿಮಗೊಂಡಿಲ್ಲ

"ಕೆರೆ ಅಭಿವೃದ್ಧಿ ಕಾಮಗಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ. ಅಂತಹದ್ದರಲ್ಲಿ ಕೆರೆ ಅಭಿವೃದ್ಧಿಯನ್ನು ಮಾಡಲು ಕಾಮಗಾರಿಯನ್ನು ಎಲ್ಲಿಂದ ಆರಂಭ ಮಾಡೋಣ?" ಎಂದು ಬಿಬಿಎಂಪಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.

6 ಕೋಟಿಗೆ ಇಳಿಕೆ

6 ಕೋಟಿಗೆ ಇಳಿಕೆ

ಹುಳಿಮಾವು ಕೆರೆ ಅಭಿವೃದ್ಧಿಗೆ ನಿಗದಿಯಾದ ಅನುದಾನವನ್ನು 10 ರಿಂದ 6 ಕೋಟಿಗೆ ಇಳಿಸಲಾಗಿದೆ. ಕೆರೆ ಸುತ್ತ ವಾಯುವಿಹಾರ ಮಾಡಲು ಪಥ, ವಿದ್ಯುದೀಪ ಅಳವಡಿಕೆ, ಬೇಲಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಬೇಕಿದೆ. ಆದರೆ, ಇದಕ್ಕೆ ಇನ್ನೂ ಟೆಂಡರ್ ಪೂರ್ಣಗೊಂಡಿಲ್ಲ.

800 ಮನೆಗಳು ಜಲಾವೃತ

800 ಮನೆಗಳು ಜಲಾವೃತ

ಹುಳಿಮಾವು ಕೆರೆ ಸುಮಾರು 140 ಎಕರೆಯಷ್ಟಯ ವಿಸ್ತೀರ್ಣವನ್ನು ಹೊಂದಿದ್ದು ಈಗ ಬಹುತೇಕ ಒತ್ತುವರಿಯಾಗಿದೆ. ಭಾನುವಾರ ಕೆರೆ ದಕ್ಷಿಣ ಭಾಗದಲ್ಲಿ ದಂಡೆ ಒಡೆದಿತ್ತು ಸುಮಾರು 800 ಮನೆಗಳು ಜಲಾವೃತವಾಗಿದ್ದವು. ಕೃಷ್ಣ ಬಡಾವಣೆ, ಅವನಿ ಶೃಂಗೇರಿ ನಗರ ಬಡಾವಣೆ, ಆರ್. ಆರ್. ಬಡಾವಣೆ, ನ್ಯಾನಪ್ಪನಹಳ್ಳಿ ಸೇರಿದಂತೆ ಕೆರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.

English summary
Thousands of people affected in Bengaluru after Hulimavu lake water flooded the area on Sunday, November 25, 2019. Who is responsible for the incident?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X