ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಗತ ದೊರೆ ರವಿ ಪೂಜಾರಿ ಜಾತಕ ಬಿಚ್ಚಿಟ್ಟ ಎಡಿಜಿಪಿ ಅಮರ್

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಭೂಗತ ದೊರೆ ರವಿ ಪೂಜಾರಿ ಬಂಧನವಾಗಿದೆ. ಆತನನ್ನು ಇಂದು ಬೆಂಗಳೂರಿಗೆ ಕರೆತರಲಾಗಿದೆ. ಆತನನ್ನು ಬಂಧಿಸಿ ಕರೆತಂದ ತಂಡದ ನೇತೃತ್ವ ವಹಿಸಿದ್ದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ರವಿ ಪೂಜಾರಿ ಬಗ್ಗೆ ಹಲವು ಮಾಹಿತಿಗಳನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ರವಿ ಪೂಜಾರಿ ಯಾರು? ಆತ ವಿದೇಶದಲ್ಲಿ ಇಷ್ಟು ವರ್ಷ ಏನು ಮಾಡುತ್ತಿದ್ದ? ಆತ ಹೇಗೆ ಅಲ್ಲಿದ್ದುಕೊಂಡು ಹಣ ಸಂಪಾದನೆ ಮಾಡುತ್ತಿದ್ದ? ಆತನನ್ನು ಬಂಧಿಸಿದ್ದು ಹೇಗೆ? ಆತನನ್ನು ಭಾರತಕ್ಕೆ ಕರೆತಂದಿದ್ದು ಹೇಗೆ? ಎಂಬಿತ್ಯಾದಿ ಮಾಹಿತಿಗಳನ್ನು ಅಮರ್ ಕುಮಾರ್ ಪಾಂಡೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ ವಾಪಸ್ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ ವಾಪಸ್

ಉಡುಪಿಯಲ್ಲಿ ಹುಟ್ಟಿದ ರವಿ ಪೂಜಾರಿ ಮುಂಬೈ ಭೂಗತ ಜಗತ್ತಿಗೆ ಆತನ ಗುರು ಛೋಟಾ ಶಕೀಲ್ ಮೂಲಕ ಎಂಟ್ರಿಯಾದ. ಅಲ್ಲಿಂದ ದುಬೈಗೆ ಹಾರಿದ ರವಿ ಪೂಜಾರಿ, ಅಲ್ಲಿಂದ ಹಲವು ದೇಶಗಳು ಸುತ್ತಿ ಕೊನೆಗೆ ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಸೆರೆ ಸಿಕ್ಕಿದ್ದಾನೆ.

ಬುರ್ಕಿನೊ ಪಾಸೋ ಎಂಬ ದೇಶದಲ್ಲಿ ವಾಸವಾಗಿದ್ದ ರವಿ ಪೂಜಾರಿಯನ್ನು ಎಡಿಜಿಪಿ ಅಮರ್, ಸಿಸಿಬಿ ಸಂದೀಪ್ ಪಾಟೀಲ್ ನೇತೃತ್ವದ ತಂಡ ಬಂಧಿಸಿ ಕೊನೆಗೂ ಭಾರತಕ್ಕೆ ಕರೆತಂದಿದ್ದಾರೆ.

1994 ರಲ್ಲಿ ಭಾರತ ಬಿಟ್ಟಿದ್ದ ರವಿ ಪೂಜಾರಿ

1994 ರಲ್ಲಿ ಭಾರತ ಬಿಟ್ಟಿದ್ದ ರವಿ ಪೂಜಾರಿ

1994 ರಲ್ಲಿ ಮುಂಬೈ ನಲ್ಲಿ ಭೂಗತ ಪಾತಕಿ ಒಬ್ಬನ ಹತ್ಯೆ ಮಾಡಿದ ನಂತರ ಭೂಗತ ಜಗತ್ತಿನಲ್ಲಿ ಮುನ್ನೆಲೆಗೆ ಬಂದ ರವಿ ಪೂಜಾರಿ ಮುಂಬೈ ನಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಬ್ಯಾಂಕಾಂಕ್‌ ಗೆ ತೆರಳಿ ಅಲ್ಲಿಂದ ಉಗಾಂಡಾಕ್ಕೆ ಹೋಗಿ, ಅಲ್ಲಿಂದ ಬುರ್ಕಿನೋಪಾಸೋ ಕ್ಕೆ ರವಿ ಪೂಜಾರಿ ಹೋಗಿದ್ದ, ಬುರ್ಕಿನೋ ಪಾಸೋ ನಲ್ಲಿ 12 ವರ್ಷಗಳ ಕಾಲ ವಾಸವಿದ್ದ ಈ ರವಿ ಪೂಜಾರಿ.

ಬುರ್ಕಿನೊ ಪಾಸೋ ದಲ್ಲಿ ರವಿ ಪೂಜಾರಿ ಸಮಾಜ ಸೇವೆ

ಬುರ್ಕಿನೊ ಪಾಸೋ ದಲ್ಲಿ ರವಿ ಪೂಜಾರಿ ಸಮಾಜ ಸೇವೆ

ಬುರ್ಕಿನೊ ಪಾಸೋ ದಲ್ಲಿ ಸಮಾಜ ಸೇವೆಯಿಂದ ರವಿ ಪೂಜಾರಿ ಗುರುತಿಸಿಕೊಂಡಿದ್ದ. ಸೆನೆಗಲ್‌ ಸೇರಿದಂತೆ ಹಲವು ಕಡೆಗಳಲ್ಲಿ ಭಾರತೀಯ ಹೋಟೆಲ್‌ಗಳನ್ನು ನಿರ್ಮಿಸಿದ್ದ ರವಿ ಪೂಜಾರಿ ಒಳ್ಳೆಯ ಲಾಭವನ್ನೂ ಗಳಿಸುತ್ತಿದ್ದ. ಜೊತೆಗೆ ಭಾರತದಿಂದಲೂ ಹಫ್ತಾ ಹಣ ಪಡೆಯುತ್ತಿದ್ದ ರವಿ ಪೂಜಾರಿ ಸಾಕಷ್ಟು ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಸಿದ್ದ.

ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು?ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು?

ಉಚಿತ ಬೋರ್‌ವೆಲ್, ಉಡುಪು ವಿತರಣೆ

ಉಚಿತ ಬೋರ್‌ವೆಲ್, ಉಡುಪು ವಿತರಣೆ

ಸೆನೆಗಲ್ ಹಾಗೂ ಸುತ್ತ-ಮುತ್ತಾ ನೀರಿಲ್ಲದ ಕಡೆಗಳಲ್ಲಿ ಉಚಿತವಾಗಿ ಬೋರ್ ವೆಲ್ ಕೊರೆಸುವುದು, ಬಡವರಿಗೆ ಉಡುಪು, ಸಿಹಿ ತಿಂಡಿ ವಿತರಿಸುವುದು, ದಾನ ಮಾಡುವುದು ಇಂತಹಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಒಳ್ಳೆಯ ಹೆಸರು ಸಂಪಾದನೆ ಸಹ ಮಾಡಿದ್ದ.

ಹಲವು ದೇಶಗಳಿಗೆ ಸಂಚರಿಸಿದ್ದ ರವಿ ಪೂಜಾರಿ

ಹಲವು ದೇಶಗಳಿಗೆ ಸಂಚರಿಸಿದ್ದ ರವಿ ಪೂಜಾರಿ

ಮೊದಲಿಗೆ ಭಾರತದ ನಕಲಿ ಪಾಸ್‌ಪೋರ್ಟ್ ಬಳಸಿ ಬೇರೆ ದೇಶಗಳಿಗೆ ಸಂಚರಿಸುತ್ತಿದ್ದ ರವಿ ಪೂಜಾರಿ ನಂತರ ಬುರ್ಕಾನಾ ಪಾಸೊ ದೇಶದ ಅಧಿಕೃತ ಪಾಸ್‌ ಪೋರ್ಟ್ ಮೂಲಕವೇ ಸಂಚಾರ ಮಾಡುತ್ತಿದ್ದ. ಅಲ್ಲಿ ಆತನ ಹೆಸರು ರಾಕಿ ಫರ್ನಾಂಡೀಸ್. ಈ ಹೆಸರು ಆತನಿಗೆ ಕೊಟ್ಟಿದ್ದು ಛೋಟಾ ರಾಜನ್ ಅಂತೆ. ಅದೇ ಹೆಸರನ್ನು ಆತ ಬರ್ಕಿನೋ ಪಾಸೊ ದೇಶದಲ್ಲಿಯೂ ಇಟ್ಟುಕೊಂಡಿದ್ದಾನೆ.

ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?

ಹಲವು ನಕಲಿ ಪಾಸ್‌ಪೋರ್ಟ್ ವಶಕ್ಕೆ

ಹಲವು ನಕಲಿ ಪಾಸ್‌ಪೋರ್ಟ್ ವಶಕ್ಕೆ

ಅಮೆರಿಕ ಸೇರಿ ಹಲವು ದೇಶಗಳಿಗೆ ರವಿ ಪೂಜಾರಿ ಹೋಗಿದ್ದಾನೆ. ಆದರೆ ಭಾರತಕ್ಕೆ ಈ ವರೆಗೆ ಬಂದಿಲ್ಲ. ಆದರೆ ಭಾರತದ ಪಕ್ಕದ ರಾಷ್ಟ್ರಗಳಾದ ಮಲೇಷ್ಯಾ, ಇಂಡೋನೇಷ್ಯಾ ದೇಶಗಳಿಗೆ ಆತ ಬಂದು ಹೋಗಿದ್ದ. ಎಲ್ಲಾ ಕಡೆಗಳಲ್ಲಿ ಬುರ್ಕಿನೊ ಪಾಸೊ ಪಾಸ್‌ಪೋರ್ಟ್‌ ಮೂಲಕವೇ ಆತ ಸುತ್ತಾಟ ನಡೆಸಿದ್ದ. ಕೆಲವು ಬಾರಿ ನಕಲಿ ಪಾಸ್‌ಪೋರ್ಟ್‌ಗಳನ್ನೂ ಬಳಸಿದ್ದಾನೆ. ಆತನಿಂದ ಹಲವು ನಕಲಿ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಹಲವು ಬೆದರಿಕೆ ಕರೆ ಮಾಡಿದ್ದ ರವಿ ಪೂಜಾರಿ

ಹಲವು ಬೆದರಿಕೆ ಕರೆ ಮಾಡಿದ್ದ ರವಿ ಪೂಜಾರಿ

ದೂರದ ದೇಶದಲ್ಲಿ ಕುಳಿತುಕೊಂಡೆ ರವಿ ಪೂಜಾರಿ ಭಾರತದಲ್ಲಿ ಕೋಟ್ಯಂತರ ಹಣ ಮಾಡುತ್ತಿದ್ದ. ಬಾಲಿವುಡ್ ನಟರಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಹಣದ ಬೆದರಿಕೆ ಒಡ್ಡುತ್ತಿದ್ದ. ಹಲವು ಉದ್ಯಮಿಗಳಿಂದ ಹಪ್ತಾ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರು ಒಂದರಲ್ಲೇ ಆತನ ಮೇಲೆ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷವೇ ರವಿ ಪೂಜಾರಿ ಬಂಧನವಾಗಿತ್ತು

ಕಳೆದ ವರ್ಷವೇ ರವಿ ಪೂಜಾರಿ ಬಂಧನವಾಗಿತ್ತು

ಆರು ತಿಂಗಳ ಹಿಂದೆ ರವಿ ಪೂಜಾರಿ ಬಂಧನಕ್ಕೆ ವಿಶೇಷ ತಂಡ ರಚಿಸಿ ಸೆನೆಗಲ್‌ಗೆ ಕಳುಹಿಸಲಾಗಿತ್ತು. ರವಿ ಪೂಜಾರಿಯನ್ನು ಸೆನೆಗಲ್‌ ಪೊಲೀಸರ ಸಹಾಯದಿಂದ ಕಳೆದ ವರ್ಷ ಜನವರಿ 19 ರಂದೇ ಬಂಧಿಸಲಾಗಿತ್ತು. ಆದರೆ ಬಹುವಾದ ಪ್ರಯತ್ನಗಳ ನಂತರ ಫೆಬ್ರವರಿ 22 ರಂದು ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಲಾಯಿತು.

ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ಪೊಲೀಸರ ವಶಕ್ಕೆಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ಪೊಲೀಸರ ವಶಕ್ಕೆ

ಸೋಮವಾರ ಬೆಳಿಗ್ಗೆ ರವಿ ಪೂಜಾರಿ ಬೆಂಗಳೂರಿಗೆ

ಸೋಮವಾರ ಬೆಳಿಗ್ಗೆ ರವಿ ಪೂಜಾರಿ ಬೆಂಗಳೂರಿಗೆ

ಅಂತಿಮವಾಗಿ ಇಂದು ರವಿ ಪೂಜಾರಿಯನ್ನು ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಕರೆತರಲಾಗಿದೆ. ಹಲವಾರು ಕೊಲೆ ಪ್ರಕರಣಗಳು, ಬೆದರಿಕೆ, ಹಫ್ತಾ ವಸೂಲಿ ಸಾಕಷ್ಟಿವೆ. ಬಿಲ್ಡರ್‌ಗಳು, ಉದ್ಯಮಿಗಳು, ಗಣ್ಯ ವ್ಯಕ್ತಿಗಳು ಆತನ ಗುರಿಯಾಗಿದ್ದರು. ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ಕಡೆ ಅಪರಾಧ ಮಾಡಿದ್ದಾನೆ. ಎಲ್ಲಾ ಪ್ರಕರಣಗಳ ಕುರಿತ ವಿಚಾರಣೆ ನಡೆಯಲಿದೆ.

English summary
Who is Ravi Pujari and what is he doing in South Africa and how police arrested him and how he brought back to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X