ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಜೂನ್ 11: ಬೆಂಗಳೂರು ಮೂಲದ ಐಎಂಎ ಅಥವಾ ಐ ಮಾನಿಟರಿ ಅಡ್ವೈಸರಿ ಜ್ಯುವೆಲ್ಸ್ ಆರಂಭ ಆಗಿದ್ದು 2016ರಲ್ಲಿ. ಮೊಹ್ಮದ್ ಮನ್ಸೂರ್ ಖಾನ್ ಅದರ ಪ್ರವರ್ತಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ. ಖಾನ್ ಗೆ ಬೆಂಗಳೂರಿನ ಜಯನಗರ ಹಾಗೂ ರಿಚ್ ಮಂಡ್ ಟೌನ್ ನಲ್ಲಿ ಮನೆಗಳಿವೆ ಎನ್ನಲಾಗಿದೆ. 2018ರಲ್ಲಿ ಜಯನಗರದಲ್ಲಿ ಎರಡನೇ ಜ್ಯುವೆಲ್ಲರಿ ಮಳಿಗೆಯನ್ನು ಆತ ಆರಂಭಿಸಿದ.

ಇನ್ನು ಮತ್ತೊಂದು ಸಹವರ್ತಿ ಸಂಸ್ಥೆ ಐಎಂಎ ಅಡ್ವೈಸರಿ ಪ್ರೈವೆಟ್ ಲಿಮಿಟೆಡ್ 13 ವರ್ಷದಿಂದ ಇದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಗ್ರೂಪ್ ನ ಸಹವರ್ತಿ ಸಂಸ್ಥೆಗಳಲ್ಲಿ ಹೂಡಿಕೆದಾರರು ಹಣ ಹೂಡಿದ್ದಾರೆ. ಕೆಲ ತಿಂಗಳ ಮುಂಚೆ ನಿಲ್ಲಿಸುವ ಮುನ್ನ ರಿಟರ್ನ್ಸ್ ನೀಡಲಾಗುತ್ತಿತ್ತು.

ಜೂನ್ 15ರ ಒಳಗೆ ಹಣ ವಾಪಸ್ ಕೊಡುತ್ತೇನೆ: ಐಎಂಎ ಮಾಲೀಕಜೂನ್ 15ರ ಒಳಗೆ ಹಣ ವಾಪಸ್ ಕೊಡುತ್ತೇನೆ: ಐಎಂಎ ಮಾಲೀಕ

ಖಾನ್ ಹೇಳುವ ಪ್ರಕಾರ IMAಗೆ 1050 ಕೋಟಿ ರುಪಾಯಿ ಮೌಲ್ಯದ ಆಸ್ತಿ ನಗರದಲ್ಲಿ ಇದೆ. ಇನ್ನು ಈ ಸಮೂಹಕ್ಕೆ 7 ಸಾವಿರ ಗ್ರಾಹಕರಿದ್ದಾರಂತೆ. ನಾಸಿರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ ಕರ್, ನಿಜಾಮುದ್ದೀನ್ ಅಜೀಮುದ್ದೀನ್, ಅಫ್ಷಾನ್ ತಬುಸ್ಸುಮ್, ಅಫ್ಸರ್ ಪಾಷಾ ಹಾಗೂ ಅರ್ಷಾದ್ ಖಾನ್ ಆಡಳಿತ ಮಂಡಳಿಯ ನಿರ್ದೇಶಕರು.

Who is IMA jewellery owner Mohmmed Mansoor Khan?

ಜ್ಯುವೆಲ್ಲರಿ ಹೊರತುಪಡಿಸಿ ಖಾನ್ ಲೋಹಗಳ ಟ್ರೇಡಿಂಗ್ ಕಂಪೆನಿ ಕೂಡ ನಡೆಸುತ್ತಿದ್ದ. ಫಾರ್ಮಾ, ಸೂಪರ್ ಮಾರ್ಕೆಟ್ಸ್ ಮತ್ತು ನಂದಿ ದುರ್ಗದಲ್ಲಿ ಮಾಲ್ ಶುರು ಮಾಡಲು ಯೋಚಿಸಿದ್ದ. ಆರೋಗ್ಯ ರಕ್ಷಣೆ ಸೇವೆ, ಹೈಪರ್ ಮಾರ್ಕೆಟ್, ಮೂಲಸೌಕರ್ಯ, ರಿಯಲ್ ಎಸ್ಟೇಟ್ ಅಭಿವೃದ್ಧಿ, ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್, ಚಿನ್ನ- ಬೆಳ್ಳಿ, ವಜ್ರ ಮತ್ತು ಪ್ಲಾಟಿನಂ ಆಭರಣದ ಚಿಲ್ಲರೆ ಮಾರಾಟ ಹೀಗೆ ನಾನಾ ವ್ಯಾಪಾರ ಆಲೋಚನೆಗಳು.

IMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರುIMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರು

IMA ವೆಬ್ ಸೈಟ್ ನಲ್ಲಿ ಹೇಳಿಕೊಳ್ಳುವ ಪ್ರಕಾರ, ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೆ ನೀಡುತ್ತದೆ. ಎರಡು ವರ್ಷದ ಹಿಂದೆ ಅಂದರೆ 2017ರಲ್ಲಿ ಖಾನ್ ಒಂದು ಸರಕಾರಿ ಶಾಲೆ ದತ್ತು ಪಡೆದುಕೊಂಡಿದ್ದ. ಅದನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು.

ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?

ಗ್ರೂಪ್ ಕಂಪೆನಿಯಲ್ಲಿ ಐಎಂ ಡಿಜಿಟಲ್, ಐಎಂ ಟ್ರೆಂಡ್ಸ್, ಐಎಂ ಎಂಟರ್ ಟೈನ್ ಮೆಂಟ್, ಐಎಂ ಝಾಯಿ, ಐಎಂಎಐಪಿ ಬುಲಿಯನ್ ಅಂಡ್ ಟ್ರೇಡಿಂಗ್, ಎಂಎಂಕೆ ಇನ್ ಸ್ಟಿಟ್ಯೂಟ್ ಆಫ್ ಎಜುಕೇಷನ್, ಐಎಂಎಡಬ್ಲ್ಯು ಜ್ಯುವೆಲ್ಲರಿ, ಐಎಂಎ ವುಮೆನ್ ಎಂಪವರ್ ಮೆಂಟ್ ಬಿಜಿನೆಸ್ ಮಾಡ್ಯುಲ್ ಹೀಗೆ ಹಲವು ಇದ್ದವು. ಇವುಗಳ ಪೈಕಿ ಹಲವು ಸೀಮಿತ ಜವಾಬ್ದಾರಿ ಪಾಲುದಾರಿಕೆಯಲ್ಲಿ ಶುರು ಮಾಡಿದ್ದವು.

Who is IMA jewellery owner Mohmmed Mansoor Khan?

ಮನ್ಸೂರ್ ಖಾನ್ ಪದವಿ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಆನಂತರ ತೆರಳಿದ್ದು ಚೆನ್ನೈನ ಮ್ಯಾನೇಜ್ ಮೆಂಟ್ ಇನ್ ಸ್ಟಿಟ್ಯೂಟ್ ಗೆ. ಮನ್ಸೂರ್ ಗೆ ಉನ್ನತ ಅಧಿಕಾರಿಗಳು, ರಾಜಕಾರಣಿಗಳ ಸಂಪರ್ಕ ಇತ್ತು. ಇನ್ನು ಐಎಂಎ ಜ್ಯುವೆಲ್ಲರಿಯನ್ನು ಹೊಗಳಿ ಉರ್ದುವಿನಲ್ಲಿ ಒಂದು ಪುಸ್ತಿಕೆಯನ್ನೇ ತರಲಾಗಿದೆ.

IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; 400 ಕೋಟಿ ಕಥೆ ಏನಂತೆ? IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; 400 ಕೋಟಿ ಕಥೆ ಏನಂತೆ?

ಆಸಕ್ತಿಕರ ಸಂಗತಿ ಏನು ಗೊತ್ತಾ? ತನ್ನ ಗ್ರಾಹಕರನ್ನು 'ಹೂಡಿಕೆದಾರರು' ಎನ್ನುತ್ತಿರಲಿಲ್ಲ. ಬದಲಿಗೆ 'ಪಾಲುದಾರರು' ಎನ್ನುತ್ತಿದ್ದ. ಐಎಂಎ ವೆಬ್ ಸೈಟ್ ನಲ್ಲಿ ಹೇಳಿಕೊಂಡಿರುವ ಪ್ರಕಾರ, ಈ ಗ್ರೂಪ್ ಗೆ 3500ಕ್ಕೂ ಹೆಚ್ಚು ಪಾಲುದಾರರು ಇದ್ದಾರೆ. ವಿವಿಧ ಹಣಕಾಸು ಸಲಹಾ ಸೇವೆಯನ್ನು ಇಸ್ಲಾಮಿಕ್ ಹಣಕಾಸು ವ್ಯವಸ್ಥೆಯಡಿ ನಡೆಸಿಕೊಂಡು ಹೋಗಲಾಗುತ್ತಿದೆ.

English summary
Who is IMA jewellery owner Mohammed Mansoor Khan? He is allegedly cheated more than 3000 people, with a worth of 2,000 crore rupees. Now he is absconding. Police are searching for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X