ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್‌ಫೀಲ್ಡ್‌ನಲ್ಲಿ ನಿತ್ಯವೂ ರಾತ್ರಿ ಹೊತ್ತು ದುರ್ವಾಸನೆ: ನಿವಾಸಿಗಳಿಂದ ದೂರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ರಾತ್ರಿಯಾಗುತ್ತಿದ್ದಂತೆ ವೈಟ್‌ಫೀಲ್ಡ್ ತುಂಬಾ ದುರ್ವಾಸನೆ ತುಂಬಿಕೊಳ್ಳುತ್ತಿದ್ದು, ನಿವಾಸಿಗಳು ದೂರು ನೀಡಿದ್ದಾರೆ.

ಕಳೆದ 10 ದಿನಗಳಿಂದ ದುರ್ನಾಥ ಬರುತ್ತಿದೆ. ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದ್ದಾರೆ. ಸಹಾಯ ಅಪ್ಲಿಕೇಷನ್‌ ಮೂಲಕ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಸಂಚಾರ ಯಾವಾಗ?ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಸಂಚಾರ ಯಾವಾಗ?

ಸಂದರ್ಭವನ್ನು ಪರಿಶೀಲಿಸದೆ, ಸ್ಥಳಕ್ಕೆ ಬಾರದೆ ದೂರನ್ನು ಮುಚ್ಚಿಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೈಟ್‌ಫೀಲ್ಡ್‌ನ ಫೋರಂ ಮಾಲ್‌ನಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ಈ ಪ್ರದೇಶದಗಳಿವೆ.

Whitefield Residents Complain Of Peculiar Unpleasant Smell At Night In The Neighbourhood

ರಾತ್ರಿ ಸುಮಾರು 11.30 ಸಮಯದಲ್ಲಿ ದುರ್ವಾಸನೆ ಆರಂಭವಾಗುತ್ತದೆ. ಬೆಳಗ್ಗೆ 6.30ರವರೆಗೂ ವಾಸನೆ ಇರಲಿದೆ. ಫೋರಂ ಮಾಲ್ ಬಳಿ ಇರುವ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿರುವವರು ತಿಳಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ವರ್ತೂರು ಕೆರೆ ಸಾಕಷ್ಟು ತ್ಯಾಜ್ಯಗಳು ಬಂದು ಸೇರುವ ಕಾರಣ ವಾಸನೆ ಬರುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಏನೇ ಆಗಲಿ ಬಿಬಿಎಂಪಿ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿತ್ತು ಆದರೆ ದೂರನ್ನು ಮುಚ್ಚಿಹಾಕಿದ್ದಾರೆ ಎಂದು ದೂರಿದ್ದಾರೆ.

ಸಾವಿರಾರು ಜನರು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ರಾತ್ರಿ ಸರಿಯಾಗಿ ನಿದ್ದೆ ಬರುವ ವೇಳೆಗೆ ವಾಸನೆ ಆರಂಭವಾಗುತ್ತದೆ, ಬೆಳಗಿನ ಜಾವದವರೆಗೂ ಇರುತ್ತದೆ.

English summary
The residents of Bengaluru’s Whitfield have been complaining of a peculiar unpleasant odour that has been emanating in their neighbourhood every night for the last 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X