ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 3 ರಿಂದ ವೈಟ್‌ಫೀಲ್ಡ್, ಬಾಣಸವಾಡಿ ಡೆಮು ರೈಲು ಆರಂಭ

|
Google Oneindia Kannada News

ಬೆಂಗಳೂರು, ಜನವರಿ 30: ಬೆಂಗಳೂರಿನ ಐಟಿ ತಾಣವಾದ ವೈಟ್‌ ಫೀಲ್ಡ್ ಹಾಗೂ ಬಾಣಸವಾಡಿ ನಡುವಿನ ಡೆಮು ರೈಲು ಸಂಚಾರ ಫೆ.3ರಿಂದ ಆರಂಭವಾಗಲಿದೆ.

ಬೆಳಗ್ಗೆ 7.50ಕ್ಕೆ ವೈಟ್‌ಫೀಲ್ಡ್ ನಿಂದ ಹೊರಡುವ ರೈಲು 8.30ಕ್ಕೆ ಬಾಣಸವಾಡಿ ತಲುಪಲಿದೆ. ಸಂಜೆ 6.25ಕ್ಕೆ ಬಾಣಸವಾಡಿಯಿಂದ ಹೊರಟು, 7.20ಕ್ಕೆ ವೈಟ್ ಫೀಲ್ಡ್ ತಲುಪಲಿದೆ. ಮಾರ್ಗಮಧ್ಯದಲ್ಲಿ ಹೂಡಿ, ಕೃಷ್ಣರಾಜಪುರ ಹಾಗೂ ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ ಎಂದು ತಿಳಿಸಿದ್ದಾರೆ.

ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ

ಇನ್ನು ಮಲೆನಾಡಿನ ಜನರ ಬಹುದಿನಗಳ ಅಪೇಕ್ಷೆ ಇದೀಗ ಸಾಕಾರಗೊಂಡಿದ್ದು, ಮಲೆನಾಡಿಗೆ ಬೆಂಗಳೂರು ಇನ್ನಷ್ಟು ಹತ್ತಿರವಾಗಲಿದೆ. ಶಿವಮೊಗ್ಗ-ಬೆಂಗಳೂರು ನಡುವೆ ಕೇವಲ ನಾಲ್ಕೂವರೆ ಗಂಟೆಗಳ ಪ್ರಯಾಣದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಫೆ. 4 ರಿಂದ ಆರಂಭಗೊಳ್ಳಲಿದೆ.

whitefield and electronic city will get DEMU train service from February 3

ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ! ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ!

ಈವರೆಗೆ 5 ತಾಸಿನಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕ್ರಮಿಸುವ ಇಂಟರ್ ಸಿಟಿ ರೈಲು ಈ ಊರುಗಳ ನಡುವಿನ ಅತಿ ವೇಗದ ರೈಲಾಗಿತ್ತು. ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.

ನಿಲ್ದಾಣಗಳು : ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನ ಶತಾಬ್ದಿ ರೈಲು ಭದ್ರಾವತಿ, ತರೀಕೆರೆ, ಕಡೂರು, ಬೀರೂರು, ಅರಸೀಕೆರೆ, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

English summary
Including four DEMU rails will run from February 3, as South Western Railway resumes suburban rail service white field, Banasawadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X