ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್ ಟಾಪಿಂಗ್: ಮರಿಗೌಡ ರಸ್ತೆ ಬಂದ್, ಬದಲಿ ಮಾರ್ಗದ ಮಾಹಿತಿ

|
Google Oneindia Kannada News

ಬೆಂಗಳೂರು, ನವೆಂಬರ್ 27: ಮತ್ತೆ ವೈಟ್ ಟಾಪಿಂಗ್ ಯೋಜನೆ ಗರಿಗೆದರಿದೆ. ಡೈರಿ ವೃತ್ತದಿಂದ ಹೊಸೂರು ಜಂಕ್ಷನ್ ವರೆಗೆ 1.23 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ.

ನಗರದಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಡಾ. ಮರಿಗೌಡ ರಸ್ತೆಯಲ್ಲಿ ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್ ವರೆಗೆ ಎಡಬದಿಯ 1.23 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ.

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳುಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

ಕಾಮಗಾರಿ ಮುಗಿಯುವರೆಗೂ ಕೂಡ ಆ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಪೊಲೀಸರು ಗುರುತಿಸಿರುವ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪರ್ಯಾಯ ಮಾರ್ಗಗಳು ಯಾವುವು?

ಪರ್ಯಾಯ ಮಾರ್ಗಗಳು ಯಾವುವು?

ವೈಟ್ ಟಾಪಿಂಗ್ ನಡೆಯಲಿರುವ ಕಾರಣ ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್ ಕಡೆಗೆ ಹೋಗುವ ಎಡಭಾಗದ ಮಾರ್ಗ ಬಂದ್ ಆಗಿರುವುದರಿಂದ ವಾಹನಗಳನ್ನು ಡೈರಿ ವೃತ್ತದ ಬಳಿಯೇ ಅದೇ ರಸ್ತೆಯ ಬಲಭಾಗದ ರಸ್ತೆಗೆ ಸಂಚಾರ ಬದಲಿಸಿ ಹೊಸೂರು ರಸ್ತೆ ಜಂಕ್ಷನ್ ಕಡೆಗೆ ಸಾಗಲು ಅವಕಾಶ ಮಾಡಿಕೊಡಲಾಗುತ್ತದೆ.

ಹಾಗಾಗು ಹೊಸೂರು ರಸ್ತೆ ಜಂಕ್ಷನ್‌ನಿಂದ ಡೈರಿ ವೃತ್ತದ ಕಡೆಗೆ ಹೋಗುವ ವಾಹನಗಳು ಬದಲೀ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. ಈ ವಾಹನಗಳು ಹೊಸೂರು ರಸ್ತೆಯ ಸೇಂಟ್‌ಜಾನ್ಸ್ ಕ್ರಾಸ್ ರೋಡ್ ಜಂಕ್ಷನ್ ಮೂಲಕ ಸಂಚರಿಸಲು ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

60 ದಿನಗಳಲ್ಲಿ ಕಾಮಗಾರಿ ಪೂರ್ಣ

60 ದಿನಗಳಲ್ಲಿ ಕಾಮಗಾರಿ ಪೂರ್ಣ

ಈ ಕುರಿತು ಮಂಗಳವಾರ ಬಿಬಿಎಂಪಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡಾ. ಮರಿಗೌಡ ರಸ್ತೆಯ ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್ ಕಡೆಗೆ ಹೋಗುವ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲು ನಗರ ಸಂಚಾರ ಪೊಲೀಸರ ಅನುಮತಿ ದೊರೆತಿದೆ. 60 ದಿನಗಳಲ್ಲಿ ಕಾಮಗಾರಿ ಮುಗಿಸಲು ಪೊಲೀಸರು ಅನುಮತಿ ನೀಡಿದ್ದು ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವೈಟ್ ಟಾಪಿಂಗ್‌ಗೆ ಯಾವಾಗ ಅನುಮತಿ ಸಿಕ್ತು?

ವೈಟ್ ಟಾಪಿಂಗ್‌ಗೆ ಯಾವಾಗ ಅನುಮತಿ ಸಿಕ್ತು?

ವೈಟ್‌ ಟಾಪಿಂಗ್‌ಗೆ ಅನುಮತಿ ದೊರೆತು 13 ದಿನ ಆಗಿದೆಮರಿಗೌಡ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಅನುಮತಿ ದೊರೆತು 13 ದಿನಗಳು ಕಳೆದಿವೆ. ಆದರೆ ಬಿಬಿಎಂಪಿ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಪೊಲೀಸ್ ಇಲಾಖೆ ನೀಡಿದ 60 ದಿನಗಳಲ್ಲಿ 13 ದಿನಗಳು ಕಳೆದು ಹೋದಂತಾಗಿದೆ.

ವರ್ಗಾವಣೆಯಿಂದಾಗಿ ಕಾಮಗಾರಿ ತಡ

ವರ್ಗಾವಣೆಯಿಂದಾಗಿ ಕಾಮಗಾರಿ ತಡ

ಅಹಮದ್ ಎಂಬ ಎಂಜಿನಿಯರ್ ಈ ಹುದ್ದೆಯಲ್ಲಿದ್ದಾಗಲೇ ಪೊಲೀಸ್ ಇಲಾಖೆಯಿಂದ ಕಾಮಗಾರಿಗೆ ಅನುಮತಿ ದೊರೆತಿದೆ. ಆ ನಂದ ಆ ಹುದ್ದೆಗೆ ಕೆಂಪೇಗೌಡ ಎಂಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಕೆಲ ದಿನಗಳ ಹಿಂದಕ್ಕೆ ರಾಧಾಕೃಷ್ಣ ಎಂಬ ಹೊಸ ಅಧಿಕಾರಿಯನ್ನು ನಿಯೋಜಿಸಲಾಗಿದೆ.

English summary
BBMP Will Develop 1.23 km road from Dairy Circle to Hosur Junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X