ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3ನೇ ಹಂತದ ವೈಟ್ ಟಾಪಿಂಗ್, ಇನ್ನು ಮೈಸೂರು ರಸ್ತೆಯಲ್ಲಿ ಸುಗಮ ಸಂಚಾರ ಕನಸು

|
Google Oneindia Kannada News

ಬೆಂಗಳೂರು, ಏ.17: ರಸ್ತೆ ಅಪಘಾತ ತಗ್ಗಿಸಿ ಸುಲಭ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ.

ಇದೀಗ ಮೂರನೇ ಹಂತದ ವೈಟ್ ಟಾಪಿಂಗ್ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಈಗ ಒಟ್ಟು 89 ರಸ್ತೆಗಳಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಮಲ್ಲೇಶ್ವರದ ರಸ್ತೆಯಲ್ಲಿ ಹೊಸ ಟೆಂಡರ್ ಕಾಮಗಾರಿ ಆರಂಭ ಮಲ್ಲೇಶ್ವರದ ರಸ್ತೆಯಲ್ಲಿ ಹೊಸ ಟೆಂಡರ್ ಕಾಮಗಾರಿ ಆರಂಭ

ಮೊದಲ ಹಂತದಲ್ಲಿ 39.8 ಕಿ.ಮೀ ಉದ್ದದ ರಸ್ತೆಗಳಲ್ಲಿ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಇನ್ನೂ 30 ಕಿ.ಮೀ ರಸ್ತೆ ಕಾಮಗಾರಿ ಬಾಕಿ ಇದೆ. ಅದರೊಂದಿಗೆ 2ನೇ ಹಂತದ ವೈಟ್ ಟಾಪಿಂಗ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭವಾಗಬೇಕಿದೆ.

White topping will resume after election, traffic will be effected

ಅದರ ಬೆನ್ನಲ್ಲೇ ಇದೀಗ ಮೂರನೇ ಹಂತದ ವೈಟ್ ಟಾಪಿಂಗ್ ಗೆ ಟೆಂಡರ್ ನೀಡಲಾಗಿದೆ. ಮೂರನೇ ಹಂತದ ಯೋಜನೆಯಲ್ಲಿ ಒಟ್ಟು 975.21 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. 6 ಹಂತಗಳಲ್ಲಿ ಕಾಮಗಾರಿ ನಡೆಯಲಿದ್ದು ಒಟ್ಟು 89 ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಯಾವುದೇ ಮುನ್ಸೂಚನೆ ನೀಡದೆಯೇ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಿರ್ಸಿ ವೃತ್ತದ ವರೆಗೆ ಕೆಲಸ ಶುರು ಮಾಡಲಾಗಿದೆ. ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಬಗ್ಗೆ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ಎಲ್ಲಿಯೂ ಸೂಚನಾ ಫಲಕಗಳನ್ನು ಅಳವಡಿಸಿಲ್ಲ.

ಸ್ಮಾರ್ಟ್ ಸಿಟಿ ಯೋಜನೆ: 190 ಕೋಟಿ ವೆಚ್ಚದಲ್ಲಿ 17 ಟೆಂಡರ್‌ಶ್ಯೂರ್ ರಸ್ತೆ ಸ್ಮಾರ್ಟ್ ಸಿಟಿ ಯೋಜನೆ: 190 ಕೋಟಿ ವೆಚ್ಚದಲ್ಲಿ 17 ಟೆಂಡರ್‌ಶ್ಯೂರ್ ರಸ್ತೆ

ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್ ಹಾಕಿ ಒಂದು ಬದಿ ಡಾಂಬರ್ ತೆಗೆಯುವ ಕಾಮಗಾರಿ ಆರಂಭಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದೆ ಈ ರಸ್ತೆಯಲ್ಲಿ ಬರುವ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರಿತಪಿಸುವಂತಾಗಿದೆ.

ರಸ್ತೆಗುಂಡಿಗೆ ವೈಟ್ ಟಾಪಿಂಗ್ ಪರಿಹಾರ ಎಂದ ಮೇಯರ್ ಗಂಗಾಂಬಿಕೆ ರಸ್ತೆಗುಂಡಿಗೆ ವೈಟ್ ಟಾಪಿಂಗ್ ಪರಿಹಾರ ಎಂದ ಮೇಯರ್ ಗಂಗಾಂಬಿಕೆ

ನಾಯಂಡಹಳ್ಳಿ ಕಡೆಯಿಂದ ಸಿಸಿಬಿ ಕಚೇರಿ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಮಾಡಿದಾಗಲೂ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಆಗಲೂ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿಕೊಡದೆ ಜನರು ಪರದಾಡುವಂತೆ ಮಾಡಲಾಗಿತ್ತು.

English summary
Once election is over White topping of major roads will resume. It will effect the traffic of the city also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X