ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟ : ಹುಲಿಗಳ ಕಾದಾಟ, ಬಿಳಿ ಹುಲಿ ಸಾವು

|
Google Oneindia Kannada News

Recommended Video

ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ | Oneindia Kannada

ಬೆಂಗಳೂರು, ಸೆಪ್ಟೆಂಬರ್ 21 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಳಿ ಹುಲಿ ಮೃತಪಟ್ಟಿದೆ. ಮೂರು ಬೆಂಗಾಲ್ ಟೈಗರ್ಸ್‌ ಜೊತೆಗಿನ ಕಾದಾಟದಲ್ಲಿ ಬಿಳಿ ಹುಲಿ ಗಂಭೀರವಾಗಿ ಗಾಯಗೊಂಡಿತ್ತು.

ಬನ್ನೇರುಘಟ್ಟ : ಬೆಂಗಾಲ್ ಟೈಗರ್ v/s ವೈಟ್ ಟೈಗರ್ ಕಾದಾಟಬನ್ನೇರುಘಟ್ಟ : ಬೆಂಗಾಲ್ ಟೈಗರ್ v/s ವೈಟ್ ಟೈಗರ್ ಕಾದಾಟ

ಮೂರು ಬೆಂಗಾಲ್ ಟೈಗರ್‌ಗಳು ಬಿಳಿ ಹುಲಿಯ ಮೇಲೆ ದಾಳಿ ಮಾಡುವ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದರು. ಕಾದಾಟದಿಂದ ಬಿಳಿ ಹುಲಿ ಸ್ಪೈನಲ್‌ ಕಾರ್ಡ್‌ಗೆ ಬಲವಾದ ಪೆಟ್ಟು ಬಿದ್ದು, ಹುಲಿ ನಡೆದಾಡದಂತೆ ಆಗಿತ್ತು.

White tiger dies in Bannerghatta National Park

ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಬಿಳಿ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬಿಳಿ ಹುಲಿ ಮೃತಪಟ್ಟಿದೆ. ಜುಲೈ ತಿಂಗಳಿನಲ್ಲಿ ಜೀವ್ರಾವೊಂದು ಗುಂಡಿಗೆ ಬಿದ್ದು, ಬನ್ನೇರುಘಟ್ಟದಲ್ಲಿ ಮೃತಪಟ್ಟಿತ್ತು.

ಬೆಂಗಾಲ್ ಟೈಗರ್‌ಗಳು ಬಿಳಿ ಹುಲಿ ಜೊತೆ ನಿರಂತರವಾಗಿ ಕಾದಾಟ ನಡೆಸುತ್ತಿದ್ದವು. ಆದ್ದರಿಂದ, ಹುಲಿಗಳು ಖೇಜ್ ಬಿಟ್ಟು ಹೊರಬರದಂತೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬಿಳಿ ಹುಲಿ ಖೇಜ್‌ನಿಂದ ಹೊರಬಂದಾಗ ಬೆಂಗಾಲ್ ಟೈಗರ್‌ಗಳು ಅದರ ಮೇಲೆ ದಾಳಿ ನಡೆಸಿದ್ದವು.

ಬನ್ನೇರುಘಟ್ಟ ಪಾರ್ಕ್ ನಲ್ಲಿ ಇಸ್ರೇಲ್ ನಿಂದ ತಂದಿದ್ದ ಜೀಬ್ರಾ ಸಾವುಬನ್ನೇರುಘಟ್ಟ ಪಾರ್ಕ್ ನಲ್ಲಿ ಇಸ್ರೇಲ್ ನಿಂದ ತಂದಿದ್ದ ಜೀಬ್ರಾ ಸಾವು

ಮೂರು ಹುಲಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಹುಲಿಗಳ ಕಾದಾಟಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.

English summary
White tiger died on Thursday, Spetember 21, 2017 at Bannerghatta National Park. White tiger seriously injured in a fight between three Bengal tigers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X