ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ನಿಯಂತ್ರಣದಲ್ಲಿ ಕರ್ನಾಟಕ ಎಡವಿದ್ದೆಲ್ಲಿ:ಕಿರಣ್ ಮಜುಂದಾರ್ ಮಾತು

|
Google Oneindia Kannada News

ಬೆಂಗಳೂರು, ಜುಲೈ 29: ಕರ್ನಾಟಕ ಸರ್ಕಾರವು ಕೊರೊನಾ ಸೋಂಕನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.

Recommended Video

Rafael fighter jet lands in India | Oneindia Kannada

ಆದರೆ ಅದನ್ನು ತಡೆಯಲು ಯಾವುದೇ ನಿರ್ದಿಷ್ಟ ಕಾರ್ಯ ತಂತ್ರಗಳಿಲ್ಲ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.

ಕೊವಿಡ್ ರೋಗಿಗಳಿಗೆ 'ಸೋರಿಯಾಸಿಸ್ ' ಇಂಜೆಕ್ಷನ್ ನೀಡಲು ಒಪ್ಪಿಗೆಕೊವಿಡ್ ರೋಗಿಗಳಿಗೆ 'ಸೋರಿಯಾಸಿಸ್ ' ಇಂಜೆಕ್ಷನ್ ನೀಡಲು ಒಪ್ಪಿಗೆ

ನಾವು ಕೊರೊನಾ ಸೋಂಕನ್ನು ಎದುರಿಸಲು ಸಿದ್ಧವಿರಲಿಲ್ಲ ಆಗಲೇ ಸೋಂಕು ರಾಜ್ಯವನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದ್ದು, ಸರಿಯಾದ ಯೋಜನೆಗಳಿರಲಿಲ್ಲ, ಹೆಚ್ಚೆಚ್ಚು ಸಂಖ್ಯೆಯಲ್ಲಿ ಪರೀಕ್ಷೆ ನಡೆಯುತ್ತಿರಲಿಲ್ಲ. ಎಲ್ಲವೂ ಮೇ ತಿಂಗಳ ಅಂತ್ಯದವರೆಗೆ ಸರಿಯಾಗಿಯೇ ಇತ್ತು. ಕಳೆದ ಎರಡು ತಿಂಗಳಲ್ಲಿ ನಿಯಂತ್ರಣ ತಪ್ಪಿದೆ ಎಂದರು.

Where Karnataka Lost The Covid Plot Kiran Mazumdar Shaw Explains

ನಾನು ಸರ್ಕಾರಕ್ಕೆ ಈ ಮೊದಲೇ ಹೇಳಿದ್ದೆ, ಲಾಕ್‌ಡೌನ್ ಸಡಿಲಗೊಳಿಸಿದರೆ ಕೊರೊನಾ ಸೋಂಕು ಕೂಡ ತೀವ್ರವಾಗುತ್ತದೆ. ಆದರೆ ಅವರು ಕೇಳಲಿಲ್ಲ. ಪರೀಕ್ಷೆಯನ್ನು ವಿಸ್ತರಿಸುವುದು ಹೇಗೆ, ಆರ್‌ಟಿ ಪಿಸಿಆರ್, ಆಂಡಿಬಾಡಿ ಟೆಸ್ಟಿಂಗ್, ಆಂಟಿಜೆಎನ್ ಟೆಸ್ಟಿಂಗ್ ವಿಸ್ತರಿಸುವುದು ಹೇಗೆ ಎನ್ನುವ ಕುರಿತು ಯಾರೂ ಆಲೋಚನೆ ಮಾಡಿಲ್ಲ. ಡಾ. ರವಿ, ಡಾ. ಸಿಎನ್ ಮಂಜುನಾತ್ ಅವರಿಗೆ ಈ ಎಲ್ಲಾ ಸಮಸ್ಯೆಗಳ ಅರಿವಿದೆ ಪರಿಹಾರವೂ ಕೂಡ ಇದೆ ಆದರೆ ಅದೆಲ್ಲವನ್ನು ತಿಳಿಸಲು ನೀವೇ ಬಿಡುತ್ತಿಲ್ಲ ಎಂದು ದೂರಿದ್ದಾರೆ.

ಕರ್ನಾಟಕದಲ್ಲಿ ಇದೀಗ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ತಮಿಳುನಾಡು, ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಂತಿಮ ಘಟ್ಟಕ್ಕೆ ಏರುತ್ತಿದೆ. ನವೆಂಬರ್ ಅಷ್ಟೊತ್ತಿಗೆ ಎಲ್ಲವೂ ತಿಳಿಯಾಗುವ ಸಾಧ್ಯತೆ ಇದೆ.

ಎಲ್ಲರೂ ಕೊವಿಡ್ 19 ಲಸಿಕೆಯನ್ನು ಎದುರು ನೋಡುತ್ತಿದ್ದಾರೆ. ಅದಕ್ಕೂ ಮೊದಲು ಲಸಿಕೆಯು ಲ್ಯಾಬ್‌ನಿಂದ ಮಾರುಕಟ್ಟೆಗೆ ಹೋಗಬೇಕಿದೆ. ಆಕ್ಸ್‌ಫರ್ಡ್ ವಿವಿಯ ಅಸ್ಟ್ರಾಜೆನೆಕಾ, ಪಿಫೈಸರ್-ಬಯೋ ಎನ್ ಟೆಕ್ ಲಸಿಕೆ, ಮಾಡೆರ್ನಾ, ನೋವಾವ್ಯಾಕ್ಸ್ ಲಸಿಕೆಯು ಭರವಸೆ ಮೂಡಿಸಿದೆ.

English summary
The Karnataka Government is struggling to control the rising number of Covid19 positive cases across the state, especially in Bengaluru says Biocon chairperson Kiran Mazumdar Shaw.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X