• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

By Nayana
|
   ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ? | Oneindia Kannada

   ಬೆಂಗಳೂರು, ಜು.18: ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಬರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್‌ ಕೊಡ್ತಾನೆ, ಒಂದು ಹೆಲ್ಮೆಟ್‌ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್‌ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.

   ಹೆಲ್ಮೆಟ್‌ ಹಾಕದ ಬೈಕ್‌ ಸವಾರರಿಗೆ ತಿಳಿ ಹೇಳಲು ಸಂಚಾರ ಪೊಲೀಸರು ಯಮಧರ್ಮನನ್ನೇ ಧರೆಗಿಳಿಸಿದ್ದರು. ಕಳೆದ ವಾರವಷ್ಟೇ ಹಲಸೂರು ಗೇಟ್ ಸಂಚಾರ ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿಹೇಳಲು ಯಮ ಧರ್ಮರಾಜನನ್ನು ಭೂಮಿಗಿಳಿಸಿದ್ದರು.

   ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಬಂದ ಯಮ..!

   ಈಗ ಹೈಗ್ರೌಂಡ್ಸ್ ಸಂಚಾರ ಪೊಲೀಸರ ಸರದಿ. ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಯಮನಿಂದ ಎಚ್ಚರಿಕೆ ಕೊಡಿಸಿದರು. ಇದೀಗ ಟ್ರಿನಿಟಿ ವೃತ್ತಕ್ಕೆ ಯಮರಾಜ ಕಾಲಿಟ್ಟಿದ್ದಾನೆ.

   'ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ, ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ಯಮ. ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸರು ಕೈಗೊಂಡಿರುವ ಹೊಸ ಉಪಾಯವಿದು. ಯಮನ ವೇಷಧರಿಸಿದ ವ್ಯಕ್ತಿ ಒಂದು ಕೈಯಲ್ಲಿ ಯಮಪಾಷ ಮತ್ತೊಂದು ಹೆಲ್ಮೆಟ್ ಹಿಡಿದು ಹೆಲ್ಮೆಟ್ ಹಾಕದಿದ್ದರೆ ಯಮಪಾಷವೇ ಗಟ್ಟಿ ಎನ್ನುತ್ತಾ ಜಾಗೃತಿ ಮೂಡಿಸುತ್ತಿದ್ದಾನೆ. ಅವನಿಗೆ ಬಿಳಿ ಸಮವಸ್ತ್ರ ತೊಟ್ಟ ಟ್ರಾಫಿಕ್ ಪೊಲೀಸರ ಬೆಂಬಲ.

   ಹೆಲ್ಮೆಟ್‌ ಬಗ್ಗೆ ಜಾಗೃತಿಗೆ ಮೂಡಿಸಲು ಟ್ರಿನಿಟಿ ವೃತ್ತಕ್ಕೆ ಬಂದ ಯಮ

   ಹೆಲ್ಮೆಟ್‌ ಕುರಿತು ಜಾಗೇರಿ ಮೂಡಿಸಲು ರಂಗಭೂಮಿ ಕಲಾವಿದರೊಬ್ಬರು ಯಮನ ವೇಚ ತೊಟ್ಟು, ಹೆಲ್ಮೆಟ್‌ ಧರಿಸಲಿರುವ ಸವಾರರಿಗೆ ಎಚ್ಚರಿಕೆ ನೀಡಿದರು, ಹೆಲ್ಮೆಟ್‌ ಧರಿಸದಿದ್ದರೆ ಸಾವು ಖಚಿತ ಎಂದು ಮನವರಿಗೆ ಮಾಡಿಕೊಟ್ಟರು.

   ಬೈಕ್‌ ಸವಾರನಿಗೆ ಹೆಲ್ಮೆಟ್‌ ಹಾಕಿಸಲು ರಸ್ತೆಗಿಳಿದ ಯಮ

   ಇನ್ನು ಚಾಲುಕ್ಯ ವೃತ್ತದಲ್ಲೂ ಕೂಡ ಇದೇ ರೀತಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಟ್ರಾಫಿಕ್‌ ನಿಯಮ ಉಲ್ಲಂಘನೆ ನಿಮ್ಮ ಜೀವಕ್ಕೇ ಆಪತ್ತನ್ನು ತಂದೊಡ್ಡಬಹುದು ಎಂದು ಸಂದೇಶ ಸಾರಲು ರಂಗಭೂಮಿ ಕಲಾವಿದರೊಬ್ಬರು ಯಮನ ವೇಶ ಧರಿಸಿ ರಸ್ತೆಗಳಲ್ಲಿ ಓಡಾಡಿ ಜಾಗೃತಿ ಮೂಡಿಸಿದರು.

   ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನವೊಂದನ್ನು ಮಾಡಿದ್ದಾರೆ. ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡೊರಿಗೆ ಯಮನಿಂದ ವಾರ್ನಿಂಗ್ ಎಂಬ ವಿಶೇಷ ಅಭಿಯಾನವನ್ನು ಪೊಲೀಸರು ಕೈಗೊಂಡಿದ್ದಾರೆ.ಪ್ರಾಣ ಉಳೀಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.

   ಪೊಲೀಸರು ಹೆಲ್ಮೆಟ್‌ ಧರಿಸಿ ಎಂದು ಯಾಕೆ ಹೇಳುತ್ತಾರೆ

   ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿ,ಮೊಕ್ಕದ್ದಮೆ ದಾಖಲಿಸಿಕೊಂಡು ದಂಡ ವಿಧಿಸಿದರೂ ಸಹ ಹೆಲ್ಮೆಟ್‌ ಧರಿಸದೇ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ದಹ ದ್ವಿಚಕ್ರ ವಾಹನ ಸವಾರರು ಈ ನಿಯಮ ಪಾಲಿಸುತ್ತಿಲ್ಲವಾದ್ದರಿಂದ ಸಂಚಾರ ಪೊಲೀಸರು ಈ ಮೂಲಕ ಜಾಗೃತಿ ಮೂಡಿಸಿದ್ದಾರೆ.

   ಈ ಕುರಿತು ವಿಟಿಯೋವಂನ್ನು ಪೊಲೀಸರು ಟ್ವಿಟ್ಟರ್‌ನಲ್ಲಿ ಹಾಕಿದ್ದು, ಈ ವಿಡಿಯೋ ನೋಡಿದರೆ ಯಾಕೆ ಹೆಲ್ಮೆಟ್‌ ಧರಿಸಬೇಕು ಎಂದು ಅರ್ಥವಾಗುತ್ತದೆ. ಹೆಲ್ಮೆಟ್‌ ಮಹತ್ವ ಏನೆಂದು ತಿಳಿಯುತ್ತದೆ.

   ಹೆಲ್ಮೆಟ್‌ ಧರಿಸದಿರುವವರಿಗೆ ಯಮನ ಸ್ವಾಗತ

   ಹೆಲ್ಮೆಟ್‌ ಧರಿಸದಿರುವವರಿಗೆ ಯಮನ ಸ್ವಾಗತ

   ಜು.10ರಂದು ಹಲಸೂರು ಪೊಲೀಸರು ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವ ಯಮ ವೇ‍ಷಧಾರಿಯಿಂದ ಗುಲಾಬಿ ಹೂ ನೀಡಿ ಸ್ವಾಗತಿಸುವ ಮೂಲಕ ಸಂಚಾರ ನಿಯಮವನ್ನು ಉಲ್ಲಂಘಿಸಬೇಡಿ ಎಂದು ತಿಳಿ ಹೇಳಿದರು.

   English summary
   In a unique initiative, a mace-wielding 'Yamaraja', God of Death, attired in his traditional golden dress intercepted bikers without helmets as part of Traffic Police's campaign to spread road safety awareness in the city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more