ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯವು ಬೆಂಗಳೂರು ಕೆರೆಗಳನ್ನು ರಕ್ಷಣೆ ಮಾಡದಿದ್ದರೆ ಕೇಂದ್ರ ಮಾಡುತ್ತೆ : ರಾಜೀವ್ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಜೂನ್ 6: ನಿಮ್ಮಿಂದ ನಗರದ ಕೆರೆಗಳ ಸಂರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಹೇಳಿ ಅದನ್ನು ಕೇಂದ್ರ ಮಾಡುತ್ತೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಕರ್ನಾಟಕ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ಬೆಳ್ಳಂದೂರು, ವರ್ತೂರು ಕೆರೆಗಳು ಸಣ್ಣ ಮಳೆಗೂ ನೊರೆಯುಕ್ಕುತ್ತಿವೆ. ಇದರಿಂದ ಸುತ್ತಮುತ್ತಲಿನ ಜನತೆ ವಾಸಿಸುವುದು ಕಷ್ಟಕರವಾಗಿದೆ. ಕೆರೆಯ ಹೂಳು ತೆಗೆಯುವುದು, ಸೇರಿದಂತೆ ಅನೇಕ ಕಾಮಗಾರಿಗೆ ಬಿಬಿಎಂಪಿ ಮುಂದಾಗಿದ್ದರೂ ಕೂಡ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.

When State government can not protect our city may be GIO can

ಹೀಗೆಯೇ ಮುಂದುವರೆದರೆ ಬೆಂಗಳೂರಿನಲ್ಲಿ ಉಳಿದಿರುವು ಬೆರಳೆಣಿಕೆಯಷ್ಟು ಕೆರೆಗಳನ್ನು ಕಳೆದುಕೊಳ್ಳಬೇಕಾದೀತು ಎನ್ನುವುದು ಸಾರ್ವಜನಿಕರ ವಾದವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ರಾಜೀವ್ ಚಂದ್ರಶೇಖರ್, ಸಂಸತ್ತಿನ ನಗರಾಭಿವೃದ್ಧಿ ಇಲಾಖೆಯು ಶೀಘ್ರ ಬೆಂಳ್ಳಂದೂರು, ವರ್ತೂರು ಕೆರೆಗೆ ಭೇಟಿ ನೀಡುತ್ತಿದೆ. ರಾಜ್ಯ ಸರ್ಕಾರಕ್ಕೆ ನಗರದ ಕೆರೆಗಳನ್ನು ಉಳಿಸಿಕೊಳ್ಳುವ ಆಸೆ ಇಲ್ಲದಿದ್ದರೆ ಕೇಂದ್ರ ಸರ್ಕಾರವು ಆ ಕೆಲಸವನ್ನು ಮಾಡಲಿದೆ ಎಂದು ಹೇಳಿದ್ದಾರೆ.

English summary
MP Rajeev Chandrasekhar tweeted that Parliaments Urban development committee will Visit Bellandur, Varthur Lakes.When Karnataka government can not protect our city maybe GIO can do it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X