ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಚುನಾವಣೆ ಯಾವಾಗ? ಇಲ್ಲಿದೆ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚನಾವಣೆ ಸೆಪ್ಟೆಂಬರ್ 27 ಕ್ಕೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಬಿಎಂಪಿ ಹಾಲಿ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಸಕತ್ ಕಿವಿಮಾತುಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಸಕತ್ ಕಿವಿಮಾತು

ಸೆ.27ಕ್ಕೆ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ. ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟೆಂಬರ್ 28ಕ್ಕೆ ಮುಗಿಯಲಿದೆ.

When Is The BBMP Mayor Election Here Is The Information

ಹಾಗಾಗಿ ಬಿಬಿಎಂಪಿ ಅಧಿಕಾರಿಗಳು ನೂತನ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳುಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

ಈಗಾಗಲೇ ಚುನಾವಣೆಗೆ ಮತದಾರ ಪಟ್ಟಿಯನ್ನೂ ಸಿದ್ಧಗೊಳಿಸಲಾಗಿದೆ. ಆ ಪ್ರಕಾರ, ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, 128 ಮತಗಳ ಮ್ಯಾಜಿಕ್ ನಂಬರ್ ಬರಬೇಕಾಗಿದೆ.

ಬೆಂಗಳೂರು ರೌಂಡ್ಸ್‌ : ಐಟಿ ಕಂಪನಿಗಳ ದೂರು ಕೇಳಿ ಬೆಚ್ಚಿಬಿದ್ದ ಸಿಎಂಬೆಂಗಳೂರು ರೌಂಡ್ಸ್‌ : ಐಟಿ ಕಂಪನಿಗಳ ದೂರು ಕೇಳಿ ಬೆಚ್ಚಿಬಿದ್ದ ಸಿಎಂ

ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಈ ಬಾರಿ ಬಿಜೆಪಿ ಪಾಲಿಕೆ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಿದೆ. ಏಳು ಜನ ಪಕ್ಷೇತರ ಸದಸ್ಯರ ಪೈಕಿ ಕನಿಷ್ಠ ನಾಲ್ವರು ಸದಸ್ಯರ ಬೆಂಬಲ ಅಗತ್ಯವಾಗಿದೆ. ಬಿಇಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.

English summary
There is information available that the BBMP mayor and deputy mayoral election is scheduled for September 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X