• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೋಡ್ ಬ್ಲ್ಯೂ' ಘೋಷಣೆ ಮಾಡಿದ ಆ ಕ್ಷಣ ನಡೆದಿತ್ತು ಪವಾಡ!

By ಡಾ. ಸಂಜೀವ್, ವಾಸವಿ ಆಸ್ಪತ್ರೆ
|

ಬೆಂಗಳೂರು, ಮೇ 23 : ಮಾನವನ ಜೀವನ ಎಷ್ಟು ಮುಖ್ಯವೋ, ಆತನ ಜೀವವೂ ಅಷ್ಟೇ ಮುಖ್ಯ. ಒಂದು ಜೀವದ ಜೊತೆ ಹಲವಾರು ಜೀವಗಳು ಕೊಂಡಿ ಹಾಕಿರುತ್ತವೆ, ಅವರ ಜೀವವೂ ಆ ಒಂದು ಜೀವದ ಜೊತೆ ಅಡಕವಾಗಿರುತ್ತದೆ.

ಆದರೆ, ಅದೇ ಆ ಒಂದು ಜೀವ ಹೋಗುವಂಥ ಸಮಯ ಬಂದಾಗ ಅಥವಾ ಆ ಜೀವವನ್ನು ಉಳಿಸುವ ಅವಶ್ಯಕತೆ ಇದ್ದಾಗ ನಾವು ಎಷ್ಟು ವಿವೇಚನೆಯಿಂದ ವರ್ತಿಸಬೇಕು, ಒಂದು ಕ್ಷಣ ಹಿಂದೆ ಮುಂದಾದರೂ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ವಾಸವಿ ಆಸ್ಪತ್ರೆಯ ವೈದ್ಯ ಡಾ. ಸಂಜೀವ್ ಅವರು ಬರೆದಿರುವ ಈ ಪತ್ರ ಸಾಕ್ಷಿ.

ಆ ಪತ್ರ ಹೀಗಿದೆ ಓದಿರಿ....

ಇಂದು ಬೆಳಿಗ್ಗೆ 9.45ರ ಸುಮಾರಿಗೆ ಚಂದು ಎಂಬುವವರನ್ನು ವಾಸವಿ ಆಸ್ಪತ್ರೆಗೆ ಮಾರುತಿ ಓಮ್ನಿ ವ್ಯಾನ್ ನಲ್ಲಿ ಕರೆತರಲಾಯಿತು. ದುರಾದೃಷ್ಟವಶಾತ್ ಆತ ಆಸ್ಪತ್ರೆಗೆ ಕರೆತರುವ ಮೊದಲೇ ಅಸುನೀಗಿದ್ದ. ಸಾವಿಗೀಡಾಗಿರುವುದು ಗೊತ್ತಿದ್ದರೂ, ಕರೆತಂದ ಆಕ್ಷಣವೇ ಆತನನ್ನು ಸ್ಟ್ರೆಚರ್ ಮೇಲೆ ಆತನನ್ನು ಎಮರ್ಜೆನ್ಸಿ ರೂಮಿಗೆ ಕೊಂಡೊಯ್ಯಲಾಯಿತು. [ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]

ಕೇವಲ 10 ನಿಮಿಷಗಳ ಹಿಂದೆ ಸ್ನಾನದ ಕೋಣೆಯಲ್ಲಿ ಚಂದು ಅವರು ಕುಸಿದುಬಿದ್ದರು ಎಂದು ಅವರ ಕುಟುಂಬದವರು ವಿವರಿಸಿದರು. ಅವರ ನಾಡಿ ಕೆಲಸ ಮಾಡುವುದು ನಿಲ್ಲಿಸಿತ್ತು, ದೇಹ ಹೆಚ್ಚೂಕಡಿಮೆ ತಣ್ಣಗಾಗಿತ್ತು. ಅವರು ಯಾವುದೇ ಮೌಖಿಕ ಸಂದೇಶಗಳಿಗೆ ಸ್ಪಂದಿಸುತ್ತಿರಲಿಲ್ಲ.

ಚಂದು ಅವರು ವೃತ್ತಿಯಿಂದ ವಾಹನ ಚಾಲಕರು. ಅವರಿಗೆ ಶ್ವಾಸಕೋಶದ ಸೋಂಕಿತ್ತು. ಕೇವಲ ನಾಲ್ಕೇ ದಿನಗಳ ಹಿಂದೆ, ವೈದ್ಯಕೀಯ ಸಲಹೆಗಳನ್ನು ನೀಡಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಎಮರ್ಜೆನ್ಸಿ ಕೋಣೆಯೊಳಗೆ ಅವರನ್ನು ಕರೆದೊಯ್ಯುತ್ತಿದ್ದಂತೆ, ಆಸ್ಪತ್ರೆಯವರು ಪಾಲಿಸಬೇಕಾದ ಕ್ರಮಗಳನ್ನು ಶುರು ಮಾಡಲಾಯಿತು. ಎಮರ್ಜೆನ್ಸಿ ತಂಡ 'ಕೋಡ್ ಬ್ಲ್ಯೂ' ಅನ್ನು ಘೋಷಣೆ ಮಾಡಿದರು. 'ಕೋಡ್ ಬ್ಲ್ಯೂ' ಅಂದ್ರೆ, ರೋಗಿಯ ಸ್ಥಿತಿ ತೀರ ಚಿಂತಾಜನಕವಾಗಿದ್ದು, ಅವರಿಗೆ ತಕ್ಷಣದ ಚಿಕಿತ್ಸೆಯ ಅವಶ್ಯಕತೆಯಿದೆ. [ನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು!]

ಮುಂದೆ ನಡೆದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ. 'ಕೋಡ್ ಬ್ಲ್ಯೂ' ಘೋಷಣೆ ಮಾಡುತ್ತಿದ್ದಂತೆ ನಿಪುಣ ತಜ್ಞರು ಎಮರ್ಜೆನ್ಸಿ ಕೋಣೆಗೆ ಧಾವಿಸಿದರು. 30 ನಿಮಿಷಗಳ ಚಿಕಿತ್ಸೆ ನೀಡುತ್ತಿದ್ದಂತೆ, ವೈದ್ಯರಿಗೆ ಅಚ್ಚರಿಯೋ ಅಚ್ಚರಿ. ಅವರು ಇನ್ನೂ ಬದುಕಿದ್ದರು!

ಚಂದು ಅವರ ಹೃದಯ ಮತ್ತೆ ಬಡಿದುಕೊಳ್ಳಲು ಆರಂಭಿಸಿತು! ಅವರ ಧಮನಿ ಮತ್ತೆ ರಕ್ತವನ್ನು ಪಂಪ್ ಮಾಡಲು ಶುರು ಮಾಡಿತು. ಅವರಿಗೆ ಕೂಡಲೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸಲಾಯಿತು. ಅವರು ಪ್ರಾಣಾಪಾಯದಿಂದ ಪಾರಾಗಿರದಿದ್ದರೂ ಅವರ ಜೀವ ಮತ್ತೆ ಪುಟಿಯಲು ಪ್ರಾರಂಭಿಸಿತ್ತು.

ಇಂಥದೊಂದು ಘಟನೆ ನಡೆದಿರುವುದನ್ನು ನಾನು ಎಲ್ಲರೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹಲವಾರು ಆಸ್ಪತ್ರೆಯವರು ತರುವಾಗಲೇ ಸತ್ತ ವ್ಯಕ್ತಿಯನ್ನು ಅಡ್ಮಿಟ್ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಆದ ಕಾರಣದಿಂದ ಸರಿಯಾದ ಆಸ್ಪತ್ರೆಯನ್ನು ಗುರುತಿಸಿ ಹೋಗಬೇಕಾಗಿರುವುದು ತೀರ ಅಗತ್ಯ.

ಎಲ್ಲಕ್ಕಿಂತ ಹೆಚ್ಚಾಗಿ, ನಾವು ಹೆಚ್ಚಾಗಿ ಪ್ರೀತಿಸುವವರು ತೊಂದರೆಗೆ ಸಿಲುಕಿದಾಗ, ಸಮಯ ವ್ಯಯ ಮಾಡದಂತೆ, ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ತರೆದುಕೊಂಡು ಹೋಗಬೇಕು. ಈ ಸಮಯದಲ್ಲಿ ಒಂದೊಂದು ಕ್ಷಣವೂ ಅತ್ಯಮೂಲ್ಯವೇ.

ನಾವು ಚಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಡ್ಮಿಟ್ ಮಾಡಿಸಿಕೊಳ್ಳುವ ಮೊದಲು ಅಥವಾ ಚಿಕಿತ್ಸೆ ಆರಂಭಿಸುವ ಮೊದಲು ಯಾವುದೇ ಶುಲ್ಕ ಭರಿಸುವಂತೆ ಹೇಳಲಿಲ್ಲ. ಇದೇನೇ ಇರಲಿ, ಈ ಹಣಕ್ಕಿಂತ ಮುಖ್ಯವಾದದ್ದು ವ್ಯಕ್ತಿಯ ಜೀವ. ಆ ಜೀವ ಉಳಿಸಲು ವಾಸವಿ ಆಸ್ಪತ್ರೆ ಎಂದೂ ಕಟಿಬದ್ಧವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is very interesting story about a patient brought dead to the hospital. Many hospitals do not admit patient brought dead. But, Vasavi hospital did. Doctors declared Code Blue'. What happened next is nothing but a miracle. Dr Sanjeev narrates the entire incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more