ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ದಿನಪತ್ರಿಕೆಗಳು ಕಂಡಂತೆ ದಿವಂಗತ ಪಾರ್ವತಮ್ಮ

ಇಂದು ಕನ್ನಡ ದಿನಪತ್ರಿಕೆಗಳೂ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಅಕ್ಷರ ನಮನ ಸಲ್ಲಿಸಿವೆ. ಯಾವ ಪತ್ರಿಕೆ ಏನು ಶೀರ್ಷಿಕೆ ನೀಡಿದೆ?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜೂನ್ 1: ಕನ್ನಡ ಚಿತ್ರರಂಗದಲ್ಲಿ ಇನ್ನು ಕೆಲವು ದಿನ ಸೂತಕದ ಛಾಯೆ. ನಿರ್ಮಾಪಕಿಯಾಗಿ, ವಿತರಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಅಗ್ರಗಣ್ಯರೆನ್ನಿಸಿದ್ದ ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ನಿನ್ನೆ (ಮೇ 31) ನಿಧನರಾಗುತ್ತಿದ್ದಂತೆಯೇ ಇಡಿ ಚಿತ್ರರಂಗದಲ್ಲೂ ಮೌನ ಮನೆಮಾಡಿತ್ತು, ನೋವು ಮಡುಗಟ್ಟಿತ್ತು.

ಕನ್ನಡ ಚಿತ್ರರಂಗಕ್ಕೆ ಅಮ್ಮನಂತಿದ್ದ ಮೈಸೂರಿನ ಸಾಲಿಗ್ರಾಮದ ಪಾರ್ವತಮ್ಮವರನ್ನು ನಿನ್ನೆ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಣ್ಣಾವ್ರ ಸಮಾಧಿ ಪಕ್ಕದಲ್ಲೇ ಮಣ್ಣು ಮಾಡುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಜನರು ಭಾವುಕರಾದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಬಹುಮುಖ್ಯ ಕೊಂಡಿಯೊಂದು ಕಳಚಿರುವುದು ಸುಳ್ಳಲ್ಲ.[ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ]

ನಿನ್ನೆ ತಾನೇ ಬಹುತೇಕ ಕನ್ನಡದ ಎಲ್ಲಾ ನ್ಯೂಸ್ ಚಾನೆಲ್ ಗಳೂ ಪಾರ್ವತಮ್ಮ ಅವರ ಅಂತ್ಯಕ್ರಿಯೆಯ ದೃಶ್ಯಗಳನ್ನು ನೇರಪ್ರಸಾರ ಮಾಡಿ, ಅವರಿಗೆ ಅಂತಿಮ ನಮನ ಸಲ್ಲಿಸಿದ್ದವು. ಅವರು ನೀಡಿದ ಹಿಟ್ ಚಿತ್ರಗಳನ್ನೂ, ಅವರ ಕಾಣಿಕೆಯನ್ನು, ನಟಸಾರ್ವಭೌಮ ಜೊತೆಗಿನ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದವು. ಇಂದು ಕನ್ನಡ ದಿನಪತ್ರಿಕೆಗಳೂ ಪಾರ್ವತಮ್ಮ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಅಕ್ಷರ ನಮನ ಸಲ್ಲಿಸಿವೆ.

ಇಂದಿನ ಕನ್ನಡದ ಪ್ರಮುಖ ಪತ್ರಿಕೆಗಳು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದು ಹೀಗೆ...

ಚಂದನವನದ ಛಲದಂಕಮಲ್ಲೆ

ಚಂದನವನದ ಛಲದಂಕಮಲ್ಲೆ

ಚಂದನವನದ ಛಲದಂಕಮಲ್ಲೆ ಪಾವರ್ತಮ್ಮ ಚಿರಸ್ಥಾಯಿ ಎಂದು ಉದಯವಾಣಿ ತಲೆಬರಹ ನೀಡಿ, ಪಾರ್ವತಮ್ಮ ಅವರಿಗೆ ಅಕ್ಷರ ನಮನ ಸಲ್ಲಿಸಿದೆ.

ಪಾರ್ವತಮ್ಮ ಇನ್ನಿಲ್ಲ

ಪಾರ್ವತಮ್ಮ ಇನ್ನಿಲ್ಲ

ಕನ್ನಡದ ಮುಂಚೂಣಿ ದಿನಪತ್ರಿಕೆ ವಿಜಯವಾಣಿ, ಪಾರ್ವತಮ್ಮ ಇನ್ನಿಲ್ಲ ಎಂದು ಸರಳವಾಗಿ ತಲೆಬರಹ ನೀಡಿದೆ.

ಪ್ರೇರಕ ಶಕ್ತಿ ಇನ್ನಿಲ್ಲ

ಪ್ರೇರಕ ಶಕ್ತಿ ಇನ್ನಿಲ್ಲ

ಕನ್ನಡ ಚಿತ್ರ ರಂಗದ ಪ್ರೇರಕ ಶಕ್ತಿ ಪಾರವತಮ್ಮ ಇನ್ನಿಲ್ಲ ಎಂದು ವಿಜಯ ಕರ್ನಾಟಕ ಶೀರ್ಷಿಕೆ ನೀಡಿದೆ.

ಅಣ್ಣಾವ್ರಲ್ಲಿ ಪಾರ್ವತಮ್ಮ ಲೀನ

ಅಣ್ಣಾವ್ರಲ್ಲಿ ಪಾರ್ವತಮ್ಮ ಲೀನ

ಅಣ್ಣಾವ್ರಲ್ಲಿ ಪಾರ್ವತಮ್ಮ ಲೀನ ಎಂಬ ಹೃದಯ ಸ್ಪರ್ಶಿ, ಅರ್ಥಗರ್ಭಿತ ಶೀರ್ಷಿಕೆಯನ್ನು ಸಂಯುಕ್ತ ಕರ್ನಾಟಕ ನೀಡಿದೆ.

ನಟಿಸದೆಯೂ ನಾಯಕಿ

ನಟಿಸದೆಯೂ ನಾಯಕಿ

ನಟಿಸದೆಯೂ ನಾಯಕಿ ಎಂಬ ಸರಳ ಆದರೆ ಅರ್ಥವತ್ತಾದ ಶೀರ್ಷಿಕೆಯನ್ನು ಪ್ರಜಾವಾಣಿ ನೀಡಿದೆ.

ವಜ್ರೇಶ್ವರಿ ಕಾಲೈಕ್ಯ

ವಜ್ರೇಶ್ವರಿ ಕಾಲೈಕ್ಯ

ವಜ್ರೇಶ್ವರಿ ಕಾಲೈಕ್ಯ ಎಂಬ ಚಿಕ್ಕ, ಆದರೆ ಅರ್ಥಪೂರ್ಣ ಶೀರ್ಷಿಕೆಯನ್ನು ವಿಶ್ವವಾಣಿ ನೀಡಿದೆ.

ಕನ್ನಡ ಚಿತ್ರ ರಂಗದ ರಾಜಮಾತೆ ವಿಧಿವಶ

ಕನ್ನಡ ಚಿತ್ರ ರಂಗದ ರಾಜಮಾತೆ ವಿಧಿವಶ

ಕನ್ನಡ ಚಿತ್ರ ರಂಗದ ರಾಜಮಾತೆ ವಿಧಿವಶ ಎಂದು ಕನ್ನಡ ಪ್ರಭ ಪತ್ರಿಕೆ ಶೀರ್ಷಿಕೆ ನೀಡಿದೆ.

ಪಾರ್ವತಮ್ಮ ಇನ್ನಿಲ್ಲ

ಪಾರ್ವತಮ್ಮ ಇನ್ನಿಲ್ಲ

ವಾರ್ತಾ ಭಾರತಿ, ಪಾರ್ವತಮ್ಮ ಇನ್ನಿಲ್ಲ ಎಂದು ಸರಳ ತಲೆಬರಹ ನೀಡಿದೆ.

English summary
Well known Producer of Kannada film industry Parvathamma Rajkumar died yesterday in Bengaluru. Here is a look on headlines and coverages of Parvathamma's news in Kannada newspapers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X