• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಬಜೆಟ್ 2019: ಬೆಂಗಳೂರಿನ ವಿವಿಧ ಇಲಾಖೆಗಳಿಗೆ ದೊರೆತಿದ್ದೇನು?

|

ಬೆಂಗಳೂರು, ಫೆಬ್ರವರಿ 8: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ.

ಅದರಲ್ಲಿ ಬೆಂಗಳೂರಿಗೆ ಒಟ್ಟು 8015ಕೋಟಿ ಮೀಸಲಿಟ್ಟಿದ್ದು ವಿವಿಧ ಇಲಾಖೆಗಳಿಗೆ ವಿವಿಧ ಅನುದಾನವನ್ನು ಘೋಷಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಅಧಿವೇಶನ LIVE : ಬಜೆಟ್ ಮಂಡಿಸುತ್ತಿರುವ ಸಿಎಂ

ಬೆಂಗಳೂರು ಮೆಟ್ರೋ ರೈಲು ನಿಗಮ

ಬೆಂಗಳೂರು ಮೆಟ್ರೋ ರೈಲು ನಿಗಮ

ಮೆಟ್ರೋ ಮತ್ತು ಬಸ್ ಸೇವೆಗಳಲ್ಲಿ ಬಳಸಬಹುದಾದ ಚಾಲನೆ ಕಾರ್ಡ್‌ಗಳ ಪ್ರಾರಂಭ, 3 ಕೋಚ್‍ಗಳಿರುವ ಎಲ್ಲಾ 50 ರೈಲು ಸೆಟ್‌ಗಳನ್ನು 6 ಕೋಚ್‍ಗಳ ಸೆಟ್‌ಗಳಾಗಿ ಪರಿವರ್ತನೆ ಮಾಡಲಾಗುತ್ತದೆ.

- ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೌಕರ್ಯ.
- ಕೊನೆಯ ಮೈಲಿನ ಸಂಪರ್ಕ ಸೇವೆಗಾಗಿ ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಇಂದ ಸಣ್ಣ ಸಾಮರ್ಥ್ಯದ ಬಸ್‌ಗಳ ಸೌಲಭ್ಯ
-ಯಶವಂತಪುರದಲ್ಲಿ ರೈಲ್ವೇ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಮೇಲ್ಸೇತುವೆ
ನಿರ್ಮಾಣ.
-ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮತ್ತು ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ - ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ; 16,579 ಕೋಟಿ ರೂ. ಅನುದಾನ.
- ಕೆಂಗೇರಿ ನಮ್ಮ ಮೆಟ್ರೋ ಜಾಲದ ಪಶ್ಚಿಮ ತುದಿ ವಿಸ್ತರಿಸಿ ಚಲ್ಲಘಟ್ಟದಲ್ಲಿ ಹೆಚ್ಚುವರಿ ನಿಲ್ದಾಣವನ್ನು ಸ್ಥಾಪಿಸಲಾಗುವುದು.

ಬೆಂಗಳೂರಿನ ಚಲನಶೀಲತೆ ಯೋಜನೆ

ಬೆಂಗಳೂರಿನ ಚಲನಶೀಲತೆ ಯೋಜನೆ

ಬೆಂಗಳೂರಿನ ಚಲನಶೀಲತೆಗಾಗಿ ಸಮಗ್ರ ಯೋಜನೆ ಜಾರಿ; ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆಗೆ ಆಯವ್ಯತ; ಎಲ್ಲ ರೀತಿಯ ಚಾಲನಾ ಸೌಲಭ್ಯಗಳನ್ನು ಒಳಗೊಂಡ ಯೋಜನೆ, ಬಿಎಂಟಿಸಿಗೆ ಬಸ್ ಸಂಖ್ಯೆ ಹೆಚ್ಚಳ ಮುಂದಿನ ವರ್ಷಗಳಲ್ಲಿ ಅನುದಾನ, ಕನಿಷ್ಠ 50 ಕಿ.ಮೀ. ಕಾಲುದಾರಿಗಳ ಅಭಿವೃದ್ಧಿ. ಇದಕ್ಕಾಗಿ 50
ಕೋಟಿ ರೂ. ಅನುದಾನ ನೀಡಲಾಗುತ್ತದೆ.

ಕರ್ನಾಟಕ ಬಜೆಟ್ 2019: ಬೆಂಗಳೂರಿಗೆ ಸಿಕ್ಕಿದ್ದೇನು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಿಕ್ಕಿದ್ದೇನು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಿಕ್ಕಿದ್ದೇನು?

- 8015 ಕೋಟಿ ರೂ. ಅಂದಾಜು ವೆಚ್ಚದ ನವ ಬೆಂಗಳೂರು
-ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2019-20ರಲ್ಲಿ 2,300 ಕೋಟಿ ರೂ ಅನುದಾನ
- ಎಲಿವೇಟೆಡ್ ಕಾರಿಡಾರ್ ಯೋಜನೆಗೆ 2019-20ನೇ ಸಾಲಿನಲ್ಲಿ
1,000 ಕೋಟಿ ರೂ. ಅನುದಾನ.
- ಬೆಂಗಳೂರಿನಲ್ಲಿ 5 ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳಾಗಿ ಪರಿವರ್ತನೆ.
- ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್
-ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತದೆ
- ಬೆಂಗಳೂರಿನಲ್ಲಿ ಕೆ.ಪಿ.ಸಿ.ಎಲ್ ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ 400 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪನೆ.
- ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನಾ ನೀತಿ ಜಾರಿ; 10,000 ವಾಹನಗಳ, ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ
- 195 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್ ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ
-ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ.

ಬೆಂಗಳೂರು ಸಬರ್ಬನ್ ರೈಲ್ವೆ ವ್ಯವಸ್ಥೆ

ಬೆಂಗಳೂರು ಸಬರ್ಬನ್ ರೈಲ್ವೆ ವ್ಯವಸ್ಥೆ

-23,093 ಕೋಟಿ ರೂ. ಅಂದಾಜು ಮೊತ್ತದ ಬೆಂಗಳೂರು ಉಪ
ನಗರ ರೈಲು ಸೇವೆ ಯೋಜನೆಗೆ ಚಾಲನೆ ನೀಡಲಾಗಿದೆ.
-ವಿಶೇಷ ಉದ್ದೇಶಿತ ವಾಹಕ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ಕ್ರಮ.
-ಹೆಬ್ಬಾಳ, ಬೈಯಪ್ಪನಹಳ್ಳು, ಕೆ.ಆರ್.ಪುರಂ, ಕಾಡುಗೋಡಿ, ಚಲ್ಲಘಟ್ಟ ಮತ್ತು ಪೀಣ್ಯ ಪ್ರದೇಶಗಳಲ್ಲಿ ಬಹುಮಾದರಿ ಪ್ರಯಾಣ ಹಬ್ ಕಾರ್ಯಸಾಧ್ಯತೆ ಅಧ್ಯಯನ.
- ಬೆಂಗಳೂರಿನ ಪ್ರಮುಖ ಸ್ಥಳಗಳಾದ ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ಮೆಟ್ರೊ ರೈಲು ಒತ್ತು ಟಿ.ಟಿ.ಎಂ.ಸಿ.ಗಳ ಅಂತರ್ ನಿಗಮ ಸಂಯೋಜನೆ ವಿನ್ಯಾಸ ಹಾಗೂ ಮೂಲಸೌಕರ್ಯ ಅಭಿವೃದ್ಧಿ.
- ಟೈರ್-2 ನಗರಗಳಲ್ಲಿ ಒಂದು ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ಜಾರಿ ಹಾಗೂ ಸುಧಾರಿತ ಸಂಚಾರ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆಯ ಅಧ್ಯಯನಕ್ಕೆ ಕ್ರಮ/
- ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ.

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

17,200 ಕೋಟಿ ರೂ. ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2019-20ನೇ ಸಾಲಿಗೆ 1,000 ಕೋಟಿ ರೂ. ಅನುದಾನ.

ಬೆಂಗಳೂರು ಜಲಮಂಡಳಿ

ಬೆಂಗಳೂರು ಜಲಮಂಡಳಿ

-ಬೆಂಗಳೂರಿನಲ್ಲಿರುವ ಜಲ ಸಂಪನ್ಮೂಲ ಬಳಸಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಒದಗಿಸುವ ಯೋಜನೆ
- ಬಿಎಂಆರ್‍ಡಿಎ ಪ್ರದೇಶದಲ್ಲಿ ಮಳೆ ನೀರು ಕೊಯ್ಲು, ಎಲ್ಲ ಕರೆ ಹಾಗೂ ನೀರು ನಿಲ್ಲುವ ತಾಣಗಳ ಸಂರಕ್ಷಣೆ, ತ್ಯಾಜ್ಯ ನೀರು ಮರುಬಳಕೆ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಪಕ್ಕ ಇರುವ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಡಲು ಕ್ರಮ .
-ಇದರಿಂದ 1400 ಎಂಎಲ್‍ಡಿ ನೀರು ಹೆಚ್ಚುವರಿಯಾಗಿ ಲಭ್ಯ. ಈ ಯೋಜನೆ ಅಅನುಷ್ಠಾನಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ರಚನೆ; ಯೋಜನೆಗೆ 50 ಕೋಟಿ ರೂ. ಅನುದಾನ. ಜೈಕಾ ನೆರವಿನೊಂದಿಗೆ 5550 ಕೋಟಿ ರೂ. ಗಳ ಕಾವೇರಿ
-ನೀರು ಸರಬರಾಜು ಯೋಜನೆಯ 5ನೇ ಹಂತ ಅನುಷ್ಠಾನನಕ್ಕೆ 019-20ರಲ್ಲಿ 500 ಕೋಟಿ ರೂ. ಅನುದಾನ
-ಬೆಂಗಳೂರು ನಗರದಲ್ಲಿ 914 ಸ್ಥಳಗಳಲ್ಲಿ ಮಳೆನೀರು ನೀರು ಗುಂಡಿಗೆ ತ್ಯಾಜ್ಯನೀರು ¸ಹೋಗುವುದನ್ನು ತಡೆಗಟ್ಟಲು 2 ವರ್ಷದಲ್ಲಿ 76.55 ಕೋಟಿ ರೂ. ಕಾಮಗಾರಿ.

ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

-ಮಂಡಳಿಯ ಒಂದೇ ಸೂರಿನಡಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಗಟು ನೀರು ಸರಬರಾಜು ಯೋಜನೆಗಳ ಸಮಗ್ರ ನಿರ್ವಹಣೆ, ಎಸ್‍ಎಫ್‌ಸಿ ಅನುದಾನದಡಿ ವೆಚ್ಚ ಭರಿಸಲು ಕ್ರಮ.
- ನಗರ ಪ್ರದೇಶದ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆ , ಆರ್ಧ್ರಬಾವಿಗಳು ಮತ್ತು ಒಳಚರಂಡಿ ಯೋಜನೆಯಡಿ ಸಂಯೋಜಿತ ಕಾಮಗಾರಿಗಳ ನಿರ್ವಹಣಾ ವೆಚ್ಚ ಎಸ್‌ಎಫ್‌ಸಿ ಅನುದಾನದಡಿ ಭರಿಸಲು ಕ್ರಮ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To improve the infrastructure of Bengaluru like roads, drainage, grade separate and many more chief minister HD Kumaraswamy announced an action plan of 8015 crore in his budget.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more