ಪರಮೇಶ್ವರ ಮೂವರು ಆಪ್ತರ ವಿಚಾರಣೆಯಿಂದ ಹೊರಬಿದ್ದ ಸತ್ಯವೇನು?
ಬೆಂಗಳೂರು, ಅಕ್ಟೋಬರ್ 15: ವೈದ್ಯಕೀಯ ಸೀಟ್ ಬ್ಲಾಕ್ ಆರೋಪದ ಸುಳಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಪ್ತ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಮೂವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಪರಮೇಶ್ವರ ಅವರ ಹಣಕಾಸು ವ್ಯವಹಾರಗಳನ್ನು ಶಿವಕುಮಾರ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಯಾವ ರೀತಿಯ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತಿತ್ತು ಎಂಬುದರ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ
ಇನ್ನು ಮಧ್ಯವರ್ತಿ ಎನ್ನಲಾದ ರಂಗನಾಥ್ ವೈದ್ಯಕೀಯ ಸೀಟು ಬ್ಲಾಕ್ ಮಾಡಿಸುತ್ತಿದ್ದು, ಪರಮೇಶ್ವರ ಒಡೆತನದ ಕಾಲೇಜುಗಳಿಗೂ ವೈದ್ಯಕೀಯ ಸೀಟು ಬ್ಲಾಕ್ ಮಾಡಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಜಿ ಡಿಸಿಎಂ ಪರಮೇಶ್ವರ ವಿಚಾರಣೆ ಇಂದು
ಆದಾಯ ತೆರಿಗೆ ದಾಳಿಗೊಳಗಾಗಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಮಂಗಳವಾರ ಐಟಿ ಕಚೇರಿಗೆ ಹಾಜರಾಗಲಿದ್ದಾರೆ. ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಸೀಟ್ ಬ್ಲಾಕ್ ಮೂಲಕ ಕೋಟ್ಯಂತರ ರೂ ಅಕ್ರಮವಾಗಿ ಸಂಪಾದನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ರಮೇಶ್ ಅಸಹಜ ಸಾವು; ಕೊನೆ ಎರಡು ಕರೆ, ಡೈರಿಯಲ್ಲಿ ಏನಿದೆ?

ನೆಲಮಂಗಲ ಬಳಿ ಜಮೀನನ್ನು ಮಾರಾಟ ಮಾಡಿದ್ದ ಮುನಿರಾಮಯ್ಯ
ನೆಲಮಂಗಲ ಬಳಿಯ ಜಮೀನನ್ನು ಪರಮೇಶ್ವರ ಅವರಿಗೆ ಮಾರಾಟ ಮಾಡಿದ ಮುನಿರಾಮಯ್ಯ , ನೆಲಮಂಗಲ ಪುರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್ ಮತ್ತು ಮಧ್ಯವರ್ತಿ ಎನ್ನಲಾದ ರಂಗನಾಥ್ ಕ್ವೀನ್ಸ್ ರಸ್ತೆಯಲ್ಲಿನ ಐಟಿ ಕಚೇರಿಗೆ ಸೋಮವಾರ ಹಾಜರಾಗಿ ವಿಚಾರಣೆ ಎದುರಿಸಿದರು. ಮೂವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪರಮೇಶ್ವರ ಅವರೊಂದಿಗಿನ ವ್ಯವಹಾರದ ಕುರಿತು ಮಾಹಿತಿ ನೀಡಿದ್ದಾರೆ.

ಮಾಹಿತಿ, ಹೇಳಿಕೆ ತಾಳೆ ಹಲವು ವ್ಯತ್ಯಾಸ
ದಾಳಿ ವೇಳೆ ಸಂಗ್ರಹಿಸಲಾಗಿದ್ದ ಹೇಳಿಕೆಗೂ, ವಿಚಾರಣೆ ವೇಳೆ ಮೂವರು ನೀಡಿದ್ದ ಹೇಳಿಕೆಗೂ ಐಟಿ ಅಧಿಕಾರಿ ತಾಳೆ ಹಾಕಿದರು. ಈ ವೇಳೆ ಕೆಲವು ವ್ಯತ್ಯಾಸಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಣದ ಮೂಲದ ಬಗ್ಗೆ ಪ್ರಶ್ನಿಸಿ ಮೂವರಿಂದಲೂ ಮಾಹಿತಿ ಸಂಗ್ರಹ
ಹಣದ ಮೂಲದ ಬಗ್ಗೆ ಪ್ರಶ್ನಿಸಿ ಮೂವರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೇ, ವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ನೆಲಮಂಗಲದ ಬೇಗೂರು ಬಳಿ ಹೊಂದಿದ್ದ 8 ಎಕರೆ ಜಮೀನನ್ನು 5.5 ಕೋಟಿ ರೂಗೆ ಪರಮೇಶ್ವರ ಮಾರಾಟ ಮಾಡಿದ್ದು, 3 ಕೋಟಿ ರೂ ಚೆಕ್ ಮತ್ತು 2.5 ಕೋಟಿ ರೂ ನಗದು ಪಡೆದು ವ್ಯವಹಾರ ನಡೆಸಲಾಗಿದೆ.ಮುನಿರಾಮಯ್ಯ ಅವರ ನಿವಾಸದ ಮೇಲೆ ನಡೆಸಿದ ದಾಳಿ ವೇಳೆ ಐಟಿ ಅಧಿಕಾರಿಗಳಿಗೆ ಈ ಮಾಹಿತಿ ಲಭ್ಯವಾಗಿತ್ತು.