ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೆಂಟ್ರಲ್: ಠೇವಣಿ ಕಳೆದುಕೊಂಡ ಪ್ರಕಾಶ್ ರೈಗೆ ಬಿದ್ದ ಮತಗಳೆಷ್ಟು?

|
Google Oneindia Kannada News

Recommended Video

ನನಗೆ ಸಮಯ ಸಿಗಲಿಲ್ಲ..! ಆದ್ರೂ ಪರ್ವಾಗಿಲ್ಲ..? | Oneindia Kannada

ಬೆಂಗಳೂರು, ಮೇ 23: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದದ ಅಭಿಯಾನದಲ್ಲಿ ಮಂಚೂಣಿಯಲ್ಲಿದ್ದ ಪ್ರಕಾಶ್ ರೈ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.

ಗ್ಯಾಲರಿ: ಭರ್ಜರಿ ಜಯದೊಂದಿಗೆ ಸಂಭ್ರಮಾಚರಣೆಯಲ್ಲಿ ಬಿಜೆಪಿ

ಸೋಲು ಖಚಿತವಾಗುತ್ತಿದ್ದಂತೆಯೇ, ಮತಎಣಿಕೆ ಕೇಂದ್ರದಿಂದ ಹೊರನಡೆದ ಪ್ರಕಾಶ್ ರೈ, ಈ ಸೋಲು ನನಗಾದ ಕಪಾಳಮೋಕ್ಷ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ.

ನನಗೆ ಇದು ಬಲವಾದ ಕಪಾಳಮೋಕ್ಷ: ಸೋಲಿನ ಬಳಿಕ ಪ್ರಕಾಶ್ ರೈ ಹೇಳಿಕೆ ನನಗೆ ಇದು ಬಲವಾದ ಕಪಾಳಮೋಕ್ಷ: ಸೋಲಿನ ಬಳಿಕ ಪ್ರಕಾಶ್ ರೈ ಹೇಳಿಕೆ

ಒಂದು ಹಂತದಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆಯನ್ನು ಸಾಧಿಸಿದರೂ, ಕೊನೆಗೆ ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮೂವರು ಅಭ್ಯರ್ಥಿಗಳಿಗೆ ಬಿದ್ದ ಮತಗಳೆಷ್ಟು?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು

ಸರ್ವಜ್ಞ ನಗರ, ಸಿ ವಿ ರಾಮನ್ ನಗರ, ಶಿವಾಜಿ ನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಮಹದೇವಪುರ ಅಸೆಂಬ್ಲಿ ಕ್ಷೇತ್ರವನ್ನು ಹೊಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿ ಕಣದಲ್ಲಿದ್ದರು.

'ಮತ್ತೊಮ್ಮೆ ಮೋದಿ' ಎಂದ ಎಕ್ಸಿಟ್ ಪೋಲ್ : ಪ್ರಕಾಶ್ ರೈ ಏನಂದ್ರು?'ಮತ್ತೊಮ್ಮೆ ಮೋದಿ' ಎಂದ ಎಕ್ಸಿಟ್ ಪೋಲ್ : ಪ್ರಕಾಶ್ ರೈ ಏನಂದ್ರು?

ಹತ್ತೊಂಬತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು

ಹತ್ತೊಂಬತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು

ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಹತ್ತೊಂಬತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು. ಒಂದು ಮಟ್ಟಿನ ಸ್ಪರ್ಧೆಯನ್ನು ಪ್ರಕಾಶ್ ರೈ ಒಡ್ದಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಠೇವಣಿ ಉಳಿಸಿಕೊಳ್ಳುವುದರಲ್ಲೂ ಪ್ರಕಾಶ್ ರೈ ವಿಫಲರಾಗಿದ್ದಾರೆ.

ಅಂತೂ ರೈಗೆ ಕಾಂಗ್ರೆಸ್ ನೀಚತನ ಅರಿವಾಯಿತು: ಕಾಲೆಳೆದ ಸುರೇಶ್ ಕುಮಾರ್ಅಂತೂ ರೈಗೆ ಕಾಂಗ್ರೆಸ್ ನೀಚತನ ಅರಿವಾಯಿತು: ಕಾಲೆಳೆದ ಸುರೇಶ್ ಕುಮಾರ್

ಕ್ಷೇತ್ರವನ್ನು ಉಳಿಸಿಕೊಂಡ ಪಿ ಸಿ ಮೋಹನ್

ಕ್ಷೇತ್ರವನ್ನು ಉಳಿಸಿಕೊಂಡ ಪಿ ಸಿ ಮೋಹನ್

ಮೊದಲ ಕೆಲವು ಸುತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದರೆ, ನಂತರ ಹಂತಹಂತವಾಗಿ ಬಿಜೆಪಿ ಮುನ್ನಡೆಯನ್ನು ಪಡೆಯಲಾರಂಭಿಸಿತು. ಪಿ ಸಿ ಮೋಹನ್ 70,968 ಮತಗಳ ಅಂತರದಿಂದ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡರು.

ಠೇವಣಿ ಕಳೆದುಕೊಂಡ ಪ್ರಕಾಶ್ ರೈ

ಠೇವಣಿ ಕಳೆದುಕೊಂಡ ಪ್ರಕಾಶ್ ರೈ

ಪಿ ಸಿ ಮೋಹನ್ 602,853, ರಿಜ್ವಾನ್ ಅರ್ಷದ್ 531,885 ಮತ್ತು ನೋಟಾಗೆ 10,760 ಮತಗಳು ಬಿದ್ದಿವೆ. ಉಳಿದಂತೆ ಕೆಲವರು ನಾಲ್ಕು ಅಂಕಿ ದಾಟಿದ್ದರೆ, ಇನ್ನುಳಿದವರು ಮೂರಂಕೆಗೆ ತೃಪ್ತಿ ಪಡಬೇಕಾಗಿದೆ. ಪ್ರಕಾಶ್ ರೈ 28,906 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದಾರೆ.

ನನ್ನ ಮುಖಕ್ಕೆ ಇದು ಬಲವಾದ ಗುದ್ದು

ಮತಎಣಿಕೆ ನಡೆಯುತ್ತಿದ್ದಾಗಲೇ ಪ್ರಕಾಶ್ ರೈ, ಮತಎಣಿಕೆ ಕೇಂದ್ರದಿಂದ ಹೊರನಡೆದು ನಂತರ ಟ್ವೀಟ್ ಮಾಡಿದ್ದಾರೆ. ನನ್ನ ಮುಖಕ್ಕೆ ಇದು ಬಲವಾದ ಗುದ್ದು. ಹೆಚ್ಚು ನಿಂದನೆಗಳು, ಟ್ರಾಲ್‌, ಅಪಮಾನಗಳು ನನಗೆ ಎದುರಾಗಲಿವೆ. ಆದರೆ, ನನ್ನ ನಿಲುವಿಗೆ ನಾನು ಬದ್ಧನಾಗಿರುತ್ತೇನೆ. ಜಾತ್ಯತೀತ ಭಾರತಕ್ಕಾಗಿ ನನ್ನ ಹೋರಾಟವು ಮುಂದುವರಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಎರಡ್ಮೂರು ತಿಂಗಳಿನಿಂದ ಪ್ರಕಾಶ್ ರೈ, ಕ್ಷೇತ್ರದಲ್ಲಿ ಭಾರೀ ಪ್ರಚಾರವನ್ನು ನಡೆಸಿದ್ದರು

ಕಳೆದ ಎರಡ್ಮೂರು ತಿಂಗಳಿನಿಂದ ಪ್ರಕಾಶ್ ರೈ, ಕ್ಷೇತ್ರದಲ್ಲಿ ಭಾರೀ ಪ್ರಚಾರವನ್ನು ನಡೆಸಿದ್ದರು

ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಯಾವುದೇ ಹಂತದಲ್ಲಿ ಪೈಪೋಟಿ ನೀಡಲು ಸಾಧ್ಯವಾಗದೆ ಹೀನಾಯ ಸೋಲೊಪ್ಪಿಕೊಂಡಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಪ್ರಕಾಶ್ ರೈ, ಕ್ಷೇತ್ರದಲ್ಲಿ ಭಾರೀ ಪ್ರಚಾರವನ್ನು ನಡೆಸಿದ್ದರು.

English summary
What is the total votes Independent candidate Prakash Rai got in the Loksabha elections 2019 in Bengaluru Central constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X