ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9 ನಿಮಿಷ ಲೈಟ್ ಆಫ್ ಮಾಡಿದರೆ ಏನು ಸಮಸ್ಯೆಯಾಗುತ್ತೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 5 ರಂದು ರಾತ್ರಿ9 ಗಂಟೆಗೆ 9 ನಿಮಿಷಗಳ ಕಾಲ ದೇಶದ ಜನತೆ ಮನೆಯ ಲೈಟ್‌ನ್ನು ಆರಿಸಿ ದೀಪವನ್ನು ಬೆಳಗಿಸಿ ಎಂದು ಕರೆ ನೀಡಿದ್ದಾರೆ.

ಆದರೆ ಇಂಧನ ಇಲಾಖೆ ಮಾತ್ರ ಮೋದಿ ಆದೇಶದಿಂದ ಇಕ್ಕಟ್ಟಿಗೆ ಸಿಲುಕಿದೆ. 9 ನಿಮಿಷಗಳ ಕಾಲ ಲೈಟ್ ಆಫ್ ಮಾಡುವುದರಿಂದ ಏನೇನು ಸಮಸ್ಯೆಯಾಗಬಹುದು ಎಂದು ತಿಳಿಸಿದ್ದಾರೆ.

ವಿದ್ಯುತ್ ಪೂರೈಕೆ ಸ್ಥಗಿತದಿಂದ ಉಂಟಾಗಬಹುದಾದ ತಾಂತ್ರಿಕ ದೋಷಗಳ ತಡೆಗೆ ಯಾವುದೇ ಸಿದ್ಧತೆಗಳು ಆಗಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ನ್ನು ಎಲ್ಲರೂ ಒಟ್ಟಾಗಿ ಸೇರಿ ಹೋಗಲಾಡಿಸೋಣ. ಲಾಕ್‌ಡೌನ್ ಇದೆ ನಿಜ ಎಲ್ಲರೂ ಮನೆಯಲ್ಲಿರುವುದೂ ಸತ್ಯ ಆದರೆ ಯಾರೂ ಕೂಡ ಏಕಾಂಗಿಯಲ್ಲ ದೇಶದ ಇಡೀ 130 ಕೋಟಿ ಜನರು ನಿಮ್ಮೊಂದಿಗಿದ್ದಾರೆ. ಭಾನುವಾರ ರಾತ್ರಿ ಮನೆಯ ಬಾಗಿಲಿನಲ್ಲಿ ದೀಪ ಹಚ್ಚಿ, ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ ಎನ್ನುವುದನ್ನು ದೇಶಕ್ಕೆ ಸಾರಿ ಸಾರಿ ಹೇಳಿ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.

ತಾಂತ್ರಿಕ ದೋಷಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳೇನು?

ತಾಂತ್ರಿಕ ದೋಷಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳೇನು?

ಕನಿಷ್ಠ ಶೇ.30 ವಿದ್ಯುತ್ ಪೂರೈಕೆ ಆಗುತ್ತಿರಬೇಕು ಹಾಗೂ ಉತ್ಪಾದನೆ ತಗ್ಗಿಸಿಕೊಳ್ಳಬೇಕು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯುತ್ ಉತ್ಪಾದನಾ ಘಟಕದಲ್ಲಿನ ಟ್ರಾನ್ಸ್‌ಫಾರ್ಮರ್‌ಗಳು 12 ಪಾಯಿಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವುಗಳನ್ನು 4-5 ಪಾಯಿಂಟ್‌ಗೆ ಇಳಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ.

ರಾತ್ರಿ 7-9 ಪೀಕ್ ಅವಧಿ

ರಾತ್ರಿ 7-9 ಪೀಕ್ ಅವಧಿ

ಪ್ರತಿನಿತ್ಯ 7-9 ಪೀಕ್ ಅವಧಿಯಾಗಿರುತ್ತದೆ. ಆಗ ಹೆಚ್ಚಿನ ವಿದ್ಯುತ್ ನೀಡಲಾಗುತ್ತದೆ. 9 ಗಂಟೆಗೆ ಒಮ್ಮೆಲೆ ಪೀಕ್ ಲೋಡ್‌ನಿಂದ ಕಡಿಮೆಯಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತದೆ.

ಲಾಕ್‌ಡೌನ್ ಹಿನ್ನೆಲೆ ಅನೇಕ ಸಂಸ್ಥೆಗಳು ಬಂದ್

ಲಾಕ್‌ಡೌನ್ ಹಿನ್ನೆಲೆ ಅನೇಕ ಸಂಸ್ಥೆಗಳು ಬಂದ್

ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಸಂಸ್ಥೆಗಳು ಬಂದ್ ಆಗಿವೆ. ಕಾರ್ಖಾನೆಗಳು, ಮಾಲ್, ಕೈಗಾರಿಕಾ ಕಾರ್ಖಾನೆಗಳು, ಸಿನಿಮಾ ಸೇರಿ ಬಹುತೇಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದೀಗ ಒಂದೇ ಬಾರಿಗೆ ಮನೆಗಳಲ್ಲಿಯೂ ಲೈಟ್ ಆಫ್ ಮಾಡುವುದರಿಂದ ವಿದ್ಯುತ್ ವಾಪಸ್ ಜನರೇಟರ್‌ಗಳಿಗೆ ಹೋಗಲಿದೆ. ಈ ಸಂದರ್ಭದಲ್ಲಿ ಟ್ರಿಪ್ ಆಗಿ ಆಫ್ ಆದಾಗ ಪವರ್ ಗ್ರಿಡ್ ಮೇಲೆ ಹೆಚ್ಚಿನ ಶಕ್ತಿ ಪೂರೈಕೆಯಾಗಿ ಹಾನಿ ಉಂಟಾಗಬಹುದು.

ವಿದ್ಯುತ್ ಬೇಡಿಕೆ ಕಡಿಮೆಯಾದಾಗ ಸಮಸ್ಯೆ

ವಿದ್ಯುತ್ ಬೇಡಿಕೆ ಕಡಿಮೆಯಾದಾಗ ಸಮಸ್ಯೆ

ಏ.5 ರಂದು ವಿದ್ಯುತ್ ಬೇಡಿಕೆ ಕಡಿಮೆಯಾದಾಗ ಪವರ್ ಗ್ರಿಡ್‌ನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದಂತೆ ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆಯೋ ಅಷ್ಟನ್ನೂ ತೆಗೆದುಕೊಳ್ಳುತ್ತೇವೆ. ಎಂದು ಇಂಧನ ಸಚಿವರು ತಿಳಿಸಿದ್ದಾರೆ. ಬ್ಯಾಕ್‌ಔಟ್ ಸಮಯದಲ್ಲಿ ವಿದ್ಯುತ್ ನಿರ್ವಹಣಾ ಸ್ಥಿರತೆ ಕಾಪಾಡುವ ಬಗ್ಗೆ ವಿಶ್ವಾಸವ್ಯಕ್ತಪಡಿಸಿದ್ದಾರೆ.

English summary
Only the Department Of Power has been hit by Prime Minister Narendramodi mandate. "Turn off the light for 9 minutes on April 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X