ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಸಂಪುಟ ವಿಸ್ತರಣೆ: ಆಪ್ತರಿಗೆ ಯಡಿಯೂರಪ್ಪ ಕೊಟ್ಟ ಸಂದೇಶ ಏನು?

|
Google Oneindia Kannada News

Recommended Video

B S Yeddyurappa Cabinet Expansion : ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಆಪ್ತರಿಗೆ ಬಿ ಎಸ್ ವೈ ನೀಡಿದ ಸಂದೇಶ?

ಬೆಂಗಳೂರು, ಆಗಸ್ಟ್ 19: ಯಡಿಯೂರಪ್ಪ ಸಂಪುಟ ಮಂಗಳವಾರ(ಆಗಸ್ಟ್ 20)ರಂದು ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಮ್ಮ ಆಪ್ತರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಸಚಿವ ಸ್ಥಾನ ಸಿಗದಿದ್ದರೂ ಬೇಸರಗೊಳ್ಳುವ ಅಗತ್ಯವಿಲ್ಲ, ನಾನು ಇದ್ದೇನೆ, ನಿಮಗೆ ಬೇಕಿರುವ ಅನುದಾನವನ್ನು ಪಡೆದುಕೊಳ್ಳಿ, ನಿಮ್ಮ ನಿಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಿರುವ ಏನು ಅನುದಾನ ಬೇಕೋ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ : ಯಡಿಯೂರಪ್ಪಗೆ ಅಮಿತ್ ಶಾ ಷರತ್ತು! ಸಂಪುಟ ವಿಸ್ತರಣೆ : ಯಡಿಯೂರಪ್ಪಗೆ ಅಮಿತ್ ಶಾ ಷರತ್ತು!

ಸಚಿವ ಸ್ಥಾನ ಸಿಗದಿದ್ದಲ್ಲಿ ಆಪ್ತರು ಬೇಸರಪಟ್ಟುಕೊಳ್ಳದಂತೆ ಮುನ್ನೆಚ್ಚರಿಕೆವಹಿಸಲು ಈ ಸಂದೇಶವನ್ನು ನೀಡಿದ್ದು, ಅಷ್ಟೇ ಅಲ್ಲದೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆಯೂ ಚರ್ಚಿಸಿರುವ ಬಿಜೆಪಿ ಹೈಕಮಾಂಡ್, ಸೆಪ್ಟೆಂಬರ್ ವೇಳೆಗೆ ಪಕ್ಷದ ಸಾಂಸ್ಥಿಕ ಚುನಾವಣೆಗಳು ಕೂಡ ಇರುವ ಕಾರಣ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ನಡೆದಿದೆ.

What Is The Message Of Yeddyurappa To His Close Aide

3 ದಿನಗಳ ಹಿಂದೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನವದೆಹಲಿಗೆ ತೆರಳಿದ್ದರು. ಆಗ ಸಿಎಂ ಯಡಿಯೂರಪ್ಪ ನೀಡಿದ್ದ ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇನ್ನೂ ಅಂತಿಮಗೊಳಿಸಿಲ್ಲ.

ಯಡಿಯೂರಪ್ಪ ಸಂಪುಟ ಸೇರುವುದು 14 ಶಾಸಕರು ಮಾತ್ರ!ಯಡಿಯೂರಪ್ಪ ಸಂಪುಟ ಸೇರುವುದು 14 ಶಾಸಕರು ಮಾತ್ರ!

ಭಾನುವಾರ ಅಂತಿಮಪಟ್ಟಿಯನ್ನು ಕಳುಹಿಸುವುದಾಗಿ ಹೇಳಿ ಕಳಿಸಿದ್ದ ಬಿಜೆಪಿ ಹೈಕಮಾಂಡ್​ ಇನ್ನೂ ಸಚಿವರ ಹೆಸರನ್ನು ಅಂತಿಮಗೊಳಿಸಿಲ್ಲ. ನಾಳೆಯೇ ಸಚಿವ ಸಂಪುಟ ವಿಸ್ತರಣೆ ಖಚಿತ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದು, ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆಗಳು ನಡೆದಿವೆ.

ಇಂದು ಸಂಜೆ ಅಥವಾ ರಾತ್ರಿ ಸಚಿವರ ಅಂತಿಮ ಪಟ್ಟಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲುಪಲಿದೆ ಎನ್ನಲಾಗಿದೆ.

ಸಂಪುಟ ಸಂಕಟ: ಅಮಿತ್ ಶಾ ಪಟ್ಟಿಯಿಂದ ಶೆಟ್ಟರ್ ಸೇರಿ 6 ಮಂದಿ ಔಟ್ಸಂಪುಟ ಸಂಕಟ: ಅಮಿತ್ ಶಾ ಪಟ್ಟಿಯಿಂದ ಶೆಟ್ಟರ್ ಸೇರಿ 6 ಮಂದಿ ಔಟ್

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಸಿಎಂ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಸುನೀಲ್ ಕುಮಾರ್, ಪ್ರಭು ಚೌಹ್ಹಾಣ್, ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಬಸವರಾಜ್ ಬೊಮ್ಮಾಯಿ, ಎಂಎಲ್ಸಿ ಪುಟ್ಟಣ್ಣ ಭೇಟಿ ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕೂಡ ಸಚಿವರ ಅಂತಿಮ ಪಟ್ಟಿಗೆ ಕಾಯುತ್ತಿದ್ದು, ಇಂದು ಸಂಜೆಯೊಳಗೆ ಆ ಕುತೂಹಲಕ್ಕೆ ತೆರೆ ಬೀಳಲಿದೆ.

English summary
Cabinet Expansion: What Is The Message Of Chief Minister BS Yeddyurappa To His close Aide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X