ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದ ಟ್ರೆಡಿಂಗ್ ಪದ ಪುಡಾಂಗ್ ಸುತ್ತಾ ಮುತ್ತಾ

|
Google Oneindia Kannada News

ಇತ್ತೀಚೆಗೆ ಪತ್ರವಳ್ಳಿ ಆದಮೇಲೆ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ಪದ ಪುಡಂಗ್, ಪುಡಾಂಗ್, ಪುಡಂಗು. ನಟ ದರ್ಶನ್ ಮಾಧ್ಯಮದವರ ಮುಂದೆ ನಿರ್ದೇಶಕ ಪ್ರೇಮ್ ಅವರ ಬಗ್ಗೆ ಹೇಳುತ್ತ ಅವರೇನು ದೊಡ್ಡ ಪುಡಾಂಗಾ..? ಎಂದಿದ್ದರು. ದರ್ಶನ್ ಬಳಸಿದ ಈ ಪದದ ಅರ್ಥ ತಿಳಿಯಲು ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಅನೇಕ ಮಂದು ಹುಡುಕಿದ್ದು ಸುಳ್ಳಲ್ಲ.

ಕನ್ನಡ ನಿಘಂಟುಗಳನ್ನು ತಡಕಾಡಿದರೂ ಈ ಪದದ ಅರ್ಥ ಸಿಗುವುದಿಲ್ಲ. ಎಲ್ಲೋ ಕೆಲವು ಮಂದಿ ಬೆಂಗಳೂರಿನ ಸ್ಲಾಂಗ್ ಪದಗಳನ್ನು ಒಟ್ಟುಗೂಡಿಸಿ ಬ್ಲಾಗ್‌ಗಳಲ್ಲಿ ವರ್ಷಗಳ ಹಿಂದೆ ಬರೆದಿದ್ದು ಇದೆ. ಕಂಗ್ಲೀಷ್, ಮಿಶ್ರ ಕನ್ನಡ ಪದಗಳ ಅರ್ಥಗಳನ್ನು ತಿಳಿಸುವ ಜೊತೆಗೆ ಪಡ್ಡೆಗಳ ಭಾಷೆಯಲ್ಲಿ ಬಳಕೆಯಾಗುವ ಅನೇಕ ಪದಗಳಲ್ಲಿ ಪುಡಂಗ್ ಕೂಡಾ ಒಂದು.

ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳುಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು

ಹಾಗೆ ನೋಡಿದರೆ ಪುಡಂಗ್ ಮೂಲ ಕನ್ನಡ ಪದವಲ್ಲ. ಹಾಗಾಗಿ ನಿಘಂಟಿನಲ್ಲಿ ಪದದ ಅರ್ಥ ಸಿಗಲ್ಲ. ಪುಡಂಗ್ ಪದಕ್ಕೆ ಸಮಾನಾರ್ಥಕ ಪದವೆಂದರೆ ತೋಲಾಂಡಿ. ಬೆಂಗಳೂರಿಗರಿಗೆ ಈ ಪದ ಹೆಚ್ಚು ಕಿವಿಗೆ ಬಿದ್ದಿರುತ್ತದೆ. ತಮಿಳು ಭಾಷೆಯಿಂದ ಎರವಲು ಪಡೆದ ಪದ ಪುಡಂಗ್/ಪುಡಾಂಗ್.

What is the meaning of word pudangu used by Darshan in press meet

ತೋಲಾಂಡಿ ಜೊತೆಗೆ ಹೋಲಿಸಿ ನೋಡಿದರೆ ಪುಡಾಂಗ್ ಎಂದರೆ ಭಾರಿ ದೊಡ್ಡ ಪಂಟ್ರು, ಲೀಡರು, ನಾಯಕ, ಒಂದು ಹಂತಕ್ಕೆ ರ್ಹೆಸರು ಮಾಡಿದವ, ಒಂದು ಗ್ಯಾಂಗಿನ ಲೀಡರ್ ಎಂಬರ್ಥ ಬರುತ್ತದೆ. ಆದರೆ, ತಮಿಳು ಭಾಷೆಯಲ್ಲಿ ಪುಡುಂಗಿರೈ ಎಂದರೆ ಕೀಳೋದು ಎಂಬ ಅರ್ಥ ಬರುತ್ತದೆ. ಹೀಗಾಗಿ ಕಿತ್ತೋದವನು, ಏನ್ ಕೀಳ್ತಿಯಾ ಎಂದು ಪ್ರಶ್ನಿಸಿದವರಿಗೆ ಉತ್ತರ ಕೊಟ್ಟವ ಎಂಬ ರೀತಿಯಲ್ಲಿ ಬಳಸಲಾಗುತ್ತದೆ.

ಚೀನಾದ ಶಾಂಘೈನ pudong ಹೆಸರಿನ ಜಿಲ್ಲೆಗೂ ಪುಡಾಂಗ್ ಪದಕ್ಕೂ ಸಂಬಂಧವಿಲ್ಲ. ಜೊತೆಗೆ ಇದು ಒಂದು ವೇಳೆ ಫ್ರೆಂಚ್ ಅಥವಾ ಬೇರೆ ಭಾಷೆಯಿಂದ ಬಂದಿದ್ದರೆ ಈ ವೇಳೆಗಾಗಲೇ ಕನ್ನಡ ನಿಘಂಟಿನಲ್ಲಿ ಸೇರುವ ಎಲ್ಲಾ ಸಾಧ್ಯತೆ ಇರುತ್ತಿತ್ತು.

English summary
What is the meaning of word pudangu used by Darshan in press meet to mention about Director Prem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X