ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

|
Google Oneindia Kannada News

Recommended Video

ಕೇವಲ 5 ದಿನದಲ್ಲಿ ಪೊಲೀಸರು ವಸೂಲಿ ಮಾಡಿದ ದಂಡ ಎಷ್ಟು ಗೊತ್ತಾ..? | traffic rules

ಬೆಂಗಳೂರು, ಸೆಪ್ಟೆಂಬರ್ 9: ಕಳೆದ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಬರೋಬ್ಬರಿ 72 ಲಕ್ಷ ರೂ ದಂಡ ಸಂಗ್ರಹಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ ಅಧಿನಿಯಮ 1988ಕ್ಕೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘನೆಗೆ ಇದ್ದ ದರ ಹೆಚ್ಚಿಸಿದ ಬಳಿಕ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು 1968 ಪ್ರಕರಣ ದಾಖಲಿಸಲಾಗಿದ್ದು, ಬರೋಬ್ಬರಿ 72,49,900 ರೂ ದಂಡ ಸಂಗ್ರಹಿಸಿದ್ದಾರೆ.

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

ಒಟ್ಟು ನಾಲ್ಕು ಅಪರಾಧಗಳಿಗೆ ಬರೋಬ್ಬರಿ 17,000 ರೂ. ದಂಡ ವಿಧಿಸಲಾಗಿತ್ತು, ವಾಹನ ಚಾಲಕ ನ್ಯಾಯಾಲಯದಲ್ಲೇ ದಂಡ ಕಟ್ಟಬೇಕಿದೆ. ಈ ಪ್ರಕರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎನ್ನುತ್ತಾರೆ ಟ್ರಾಫಿಕ್‌ ವಿಭಾಗದ ಜಂಟಿ ಆಯುಕ್ತ ರವಿಕಾಂತೇ ಗೌಡ. ಜನರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ರವಿಕಾಂತೇಗೌಡ ಮನವಿ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?ಟ್ರಾಫಿಕ್ ಪೊಲೀಸ್ ಕೊಟ್ಟ ಚಲನ್ ಹರಿದು ಬೈಕ್ ಸವಾರ ಮಾಡಿದ್ದೇನು?

ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ, ಒಂದೇ ಬಾರಿಗೆ ಒಬ್ಬನೇ ವ್ಯಕ್ತಿಯಿಂದ ಅತಿ ಹೆಚ್ಚು ದಂಡ ಸಂಗ್ರಹಿಸಿದ ದಾಖಲೆ ಗುರುಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ಚಾಲಕನೊಬ್ಬನಿಗೆ ಆತನ ಒಟ್ಟು 10 ಸಂಚಾರಿ ಅಪರಾಧಗಳನ್ನು ಕಲೆಹಾಕಿ ಬರೋಬ್ಬರಿ 59,000 ರೂ. ದಂಡ ವಿಧಿಸಲಾಗಿತ್ತು. ಪರವಾನಗಿ ಇಲ್ಲದೆ ಚಾಲನೆ, ನೋಂದಣಿಯಾಗದ ವಾಹನ ಚಾಲನೆ ಸೇರಿದಂತೆ ಹಲವು ವಿಧದಲ್ಲಿ ದಂಡ ವಿಧಿಸಲಾಗಿದೆ.

ಒನ್‌ ವೇನಲ್ಲಿ ವಾಹನ ಚಲಾಯಿಸಿದ್ದಕ್ಕೆ ಎಷ್ಟು ದಂಡ?

ಒನ್‌ ವೇನಲ್ಲಿ ವಾಹನ ಚಲಾಯಿಸಿದ್ದಕ್ಕೆ ಎಷ್ಟು ದಂಡ?

ಒನ್ ವೇ ನಲ್ಲಿ ವಾಹ ಚಲಾಯಿಸಿದ್ದಕ್ಕೆ ಅತಿ ಹೆಚ್ಚು ಅಂದರೆ 425 ಪ್ರಕರಣದಾಖಲಿಸಿಕೊಳ್ಳಲಾಗಿದ್ದು, ವಾಹನ ಸವಾರರಿಂದ 2,12,500 ದಂಡ ಸಂಗ್ರಹಿಸಲಾಗಿದೆ.

ಭಾರವಾದ ವಸ್ತುಗಳ ಸಾಗಣೆ

ಭಾರವಾದ ವಸ್ತುಗಳ ಸಾಗಣೆ

ಭಾರವಾದ ವಸ್ತುಗಳ ಸಾಗಣೆ 18 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು, 18 ಸಾವಿರ ರೂ ದಂಡ ವಿಧಿಸಲಾಗಿದೆ. ಹಾಗೆಯೇ ಬಾಲ್ಡ್ ಟೈರ್ಸ್ ಹೊಂದಿದ್ದ 1 ವಾಹನದ ಮೇಲೆ ಪ್ರಕರಣ ದಾಖಲಿಸಿ 500 ರೂ ದಂಡ ವಿಧಿಸಲಾಗಿದೆ. ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ 7 ಮಂದಿ ಬೈಕ್ ಸವಾರರಿಗೆ 3500 ರೂ. ದಂಡ ವಿಧಿಸಲಾಗಿದೆ.

ದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆ

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ, 1968 ಪ್ರಕರಣಗಳು ದಾಖಲಾಗಿದ್ದು, 19,68,000 ರೂ ದಂಡ ವಿಧಿಸಲಾಗಿದೆ. ಪ್ಲೇಟ್ ಇಲ್ಲದ 11 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು, 5500 ರೂ ದಂಡ ವಿಧಿಸಲಾಗಿದೆ. ಸೀಟು ಬೆಲ್ಟ್ ಹಾಕಿರದ 708 ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 7,08,000 ರೂ. ದಂಡ ವಿಧಿಸಲಾಗಿದೆ.

ಇನ್ಶೂರೆನ್ಸ್, ಪರವಾನಗಿ ಹೊಂದಿರದ ವಾಹನ ಚಾಲಕರಿಗೆ ದಂಡ

ಇನ್ಶೂರೆನ್ಸ್, ಪರವಾನಗಿ ಹೊಂದಿರದ ವಾಹನ ಚಾಲಕರಿಗೆ ದಂಡ

ಪರವಾನಗಿ ಹೊಂದಿರದ 109 ವಾಹನಗಳ ಮೇಲೆ ದೂರು ದಾಖಲಿಸಿದ್ದು, 14,4800 ರೂ ದಂಡ ವಿಧಿಸಲಾಗಿದೆ. ಡಿಎಲ್ ಇಲ್ಲದವರ ಮೇಲೆ 10 ಪ್ರಕರಣ ದಾಖಲಾಗಿದ್ದು, 50,000 ರೂ ದಂಡ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸದವರ ಮೇಲೆ 72 ಪ್ರಕರಣಗಳು ದಾಖಲಾಗಿದ್ದು ಕೋರ್ಟ್‌ನಲ್ಲಿ ದಂಡ ಕಟ್ಟಬೇಕಿದೆ.

ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ

ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ

ವಾಹನ ಚಲಿಸುವಾಗ ಮೊಬೈಲ್ ಬಳಕೆ ಮಾಡಿರುವ ಬಗ್ಗೆ 695 ಪ್ರಕರಣ ದಾಖಲಿಸಿ 13,90,000 ರೂ ದಂಡ ವಿಧಿಸಲಾಗಿದೆ. ಯು ಟರ್ನ್ ಇಲ್ಲದ ಕಡೆ ಚಲಿಸಿದ್ದಕ್ಕೆ 8 ಪ್ರಕರಣ ದಾಖಲಾಗಿದ್ದು 4,400 ರೂ ದಂಡ ವಿಧಿಸಲಾಗಿದೆ.

English summary
Bengaluru Traffic Police have collected a fine of Rs 72 lakh in the last one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X