ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?

By ಅನಂಗ
|
Google Oneindia Kannada News

ರಾಸಲೀಲೆ ಪ್ರಕರಣದ ಆರೋಪಿಯಾಗಿರುವ ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ಇಂದಿನ ಹಾಟ್ ಟಾಪಿಕ್ ಆಗಿದೆ. ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಇಷ್ಟಕ್ಕೂ ಪುರುಷತ್ವ ಪರೀಕ್ಷೆ ಎಂದರೇನು? ಇದನ್ನು ಏಕೆ ಮಾಡಲಾಗುತ್ತದೆ? ನಿತ್ಯಾನಂದ ಅವರ ವಿಷಯದಲ್ಲಿ ಲಿಂಗಪರೀಕ್ಷೆಯನ್ನೂ ಮಾಡಬೇಕಾಗುತ್ತದೆಯೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

ನಿತ್ಯಾನಂದ ಕೇಸ್ ನಲ್ಲಿ ಪರೀಕ್ಷೆ ಏಕೆ? : ನಿತ್ಯಾನಂದ ಸ್ವಾಮೀಜಿ ವಿರುದ್ಧ ಅತ್ಯಾಚಾರದ ದೂರು ದಾಖಲಾದಾಗ ಪ್ರತಿಕ್ರಿಯಿಸಿದ್ದ ನಿತ್ಯಾ, 'ನಾನು ದೈಹಿಕವಾಗಿ ಬಾಲಾವಸ್ಥೆಯಲ್ಲಿದ್ದು, ಅತ್ಯಾಚಾರ ನಡೆಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಹೀಗಾಗಿ ಇದರಿಂದ 2012ರ ಜೂ.18ರಂದು ರಾಮನಗರದ ಕೋರ್ಟ್‌ ನಿತ್ಯಾನಂದ ಸ್ವಾಮೀಯ ಪುರುಷತ್ವ ಪರೀಕ್ಷೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿತ್ತು. [ನಿತ್ಯಾ ಪುರುಷತ್ವ ಪರೀಕ್ಷೆ ಬೆಳವಣಿಗೆಗಳು]

ಅದರಂತೆ, ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಪ್ಪ ಅವರ ನೇತೃತ್ವದಲ್ಲಿ ಗೌಪ್ಯವಾಗಿ ಪುರುಷತ್ವ ಪರೀಕ್ಷೆಯನ್ನು ರಾಮನಗರ ನ್ಯಾಯಾಧೀಶರು ಮತ್ತು ವಕೀಲರ ಉಪಸ್ಥಿತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ವಿಧಿವಿಜ್ಞಾನ ತಜ್ಞ, ಮನೋವೈದ್ಯ ತಜ್ಞ, ಆಂಡ್ರೋಲಾಜಿ ಮತ್ತು ಯೂರೋಲಾಜಿಸ್ಟ್ ಮತ್ತು ಫಿಜಿಷಿಯನ್ ಸೇರಿದಂತೆ ನಾಲ್ಕು ತಜ್ಞ ವೈದ್ಯರು ವಿವಿಧ ರೀತಿಯಲ್ಲಿ ನಿತ್ಯಾನಂದನ ಲಿಂಗತ್ವ ಪರೀಕ್ಷೆನಡೆಸುತ್ತಿದ್ದಾರೆ. ವೈದ್ಯಶಾಸ್ತ್ರದ ನಿಯಮದ ಪ್ರಕಾರ ಪರೀಕ್ಷೆಯ ಫಲಿತಾಂಶವನ್ನು ವೈದ್ಯರು ನೇರವಾಗಿ ಬಹಿರಂಗಪಡಿಸುವಂತಿಲ್ಲ. ವೈದ್ಯಕೀಯ ವರದಿಯನ್ನು ಸಿಐಡಿ ಪೊಲೀಸರಿಗೆ ನೀಡಬೇಕಾಗುತ್ತದೆ.

ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸಲು ಅಗತ್ಯ

ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸಲು ಅಗತ್ಯ

ಲೈಂಗಿಕ ಕಿರುಕುಳ, ಹಲ್ಲೆ, ಲೈಂಗಿಕ ಅಸಮರ್ಥ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷನ ಲೈಂಗಿಕ ಸಾಮರ್ಥ್ಯ ಅಳೆಯಲು ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ. ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ. ಈ ಬಗ್ಗೆ ವಿವರ ಮುಂದೆ ಓದಿ

ವೀರ್ಯ ವಿಶ್ಲೇಷಣೆ(A Semen Analysis)

ವೀರ್ಯ ವಿಶ್ಲೇಷಣೆ(A Semen Analysis)

ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಕೆಲ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದಾಗಿದೆ. ಇದರಿಂದಆರೋಪಿಯ ವೀರ್ಯದ ಫಲವತ್ತತೆ ಅದರಲ್ಲಿರುವ ಪ್ರೋಟಿನ್ ಅಂಶ ಬಹಿರಂಗ ಪಡಿಸಬಹುದು.

ಸಾಮಾನ್ಯವಾಗಿ ಬಂಜೆತನದಿಂದ ಬಳಲುವ ದಂಪತಿಗಳ ಪೈಕಿ ಪುರುಷರ ವೀರ್ಯ ಪರೀಕ್ಷೆ ನಡೆಸುವಂತೆ ಇಲ್ಲೂ ಪರೀಕ್ಷೆ ನಡೆಯಲಿದೆ. ವೀರ್ಯದಾನ ಸಂದರ್ಭದಲ್ಲೂ ಇದೇ ವಿಧಾನ ಅನುಸರಿಸಲಾಗುತ್ತದೆ. ವ್ಯಾಸೆಕ್ಟಮಿ(ಜನನ ನಿಯಂತ್ರಣ ಚಿಕಿತ್ಸೆ) ಮಾಡಿಸಿಕೊಂಡಿದ್ದರೂ ಈ ಪರೀಕ್ಷೆಯಿಂದ ಎಲ್ಲವೂ ತಿಳಿಯಲಿದೆ. ವೀರ್ಯ ಸಂಗ್ರಹಿಸಲು ಆರೋಪಿ ಹಸ್ತಮೈಥುನ ಮಾಡಿಕೊಳ್ಳುವುದು ಅನಿವಾರ್ಯ.

ಶಿಶ್ನದ ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ Penile Doppler Ultrasound

ಶಿಶ್ನದ ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ Penile Doppler Ultrasound

ಶಿಶ್ನದ ಒಳ ಹೊರಗಿನ ರಕ್ತನಾಳದ ಪರೀಕ್ಷೆ ಇದಾಗಿದೆ. ಶಿಶ್ನಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಶಿಶ್ನದಿಂದ ಹೊರಬಿದ್ದ ವೀರ್ಯದಲ್ಲಿ ರಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯಲಿದೆ. ವಯಾಗ್ರಾದಂಥ ಔಷಧ ಸೇವಿಸಿದರೂ ಕೂಡಾ ಶೀಘ್ರ ಸ್ಖಲನ, ನಿಮಿರುವಿಕೆ ತೊಂದರೆ ಇದ್ದಾಗ ಈ ಪರೀಕ್ಷೆ ನಡೆಸಲಾಗುತ್ತದೆ.

* ಶಿಶ್ನ ನಿಮಿರುವಿಕೆಗೆ ಸಮರ್ಪಕ ರಕ್ತ ಸಂಚಾರ ಅತ್ಯಗತ್ಯ. ಶಿಶ್ನದ ಒಳ -ಹೊರಗೂ ರಕ್ತ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎಂಬುದನ್ನು ತಿಳಿಯಲು ಸಾಧನವೊಂದನ್ನು ಬಳಸಿ ಪತ್ತೆ ಹಚ್ಚಲಾಗುತ್ತದೆ.
* ಆರೋಪಿಗೆ Venous Leak Syndrome ಇದ್ದರೆ ಶಿಶ್ನಕ್ಕೆ ರಕ್ತ ಸಂಚಾರ ಅಧಿಕಗೊಂಡು ನಿಮಿರುವಿಕೆ ಸ್ಥಿಮಿತದಲ್ಲಿರುವುದಿಲ್ಲ. ಅದರೆ, ಸರ್ಜರಿ ಮೂಲಕ ಇದನ್ನು ಸರಿಪಡಿಸಬಹುದು.
* ಮಧುಮೇಹ ರೋಗಿ(ನಿತ್ಯಾ ಕೂಡಾ ಮಧುಮೇಹಿ) ಗಳಿಗೆ ರಕ್ತನಾಳ ತೊಂದರೆಯುಂಟಾಗಿ ನಿಮಿರುವಿಕೆ ಸಮಸ್ಯೆ ಎದುರಿಸಬಹುದು. ವಯಾಗ್ರಾ ಕೊಟ್ಟರೂ ಶಿಶ್ನ ನಿಮಿರುವುದಿಲ್ಲ.
ಶಿಶ್ನ ನಿಮಿರುವಿಕೆ ಪೂರಕ ಪರೀಕ್ಷೆ Visual Erection Examination

ಶಿಶ್ನ ನಿಮಿರುವಿಕೆ ಪೂರಕ ಪರೀಕ್ಷೆ Visual Erection Examination

ನಿಮಿರು ಮತ್ತು ಉದ್ರೇಕರಹಿತ ಸ್ಥಿತಿ ಎರಡೂ ಸ್ಥಿತಿಯನ್ನು ಅವಲೋಕಿಸಿ ವೈದ್ಯರು ನಡೆಸುವ ಪರೀಕ್ಷೆ ಇದಾಗಿದೆ. ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎನ್ನಲು ಶಾಶ್ವತ ನಿಮಿರುವಿಕೆ ದೋಷವಿರಬೇಕು. ಯಾವುದೇ ಸಂದರ್ಭದಲ್ಲಿಯೂ(ಪ್ರಚೋದನಕಾರಿ ಚಿತ್ರ, ವಿಡಿಯೋ ನೋಡಿ ಅಥವಾ ವಯಗ್ರಾ ಸೇವಿಸಿಯೂ ಕೂಡಾ) ಶಿಶ್ನ ನಿಮಿರುವುದಿಲ್ಲ ಎಂದು ತಿಳಿದಾಗ ವೈದ್ಯರು ಸರ್ಜರಿ ಮೂಲಕ ಸರಿಪಡಿಸಲು ಯತ್ನಿಸುತ್ತಾರೆ. ಸಾಧ್ಯವಾಗದಿದ್ದರೆ. ಲೈಂಗಿಕವಾಗಿ ಅಸಮರ್ಥ ಎಂದು ಘೋಷಿಸುತ್ತಾರೆ

Nocturnal Penile Tumescence (NPT) Test

Nocturnal Penile Tumescence (NPT) Test

ವ್ಯಕ್ತಿಯೊಬ್ಬ ಇರುಳಿನ ನಿದ್ರೆಯಲ್ಲಿ ಎಷ್ಟು ಬಾರಿ ತಂತಾನೇ ಗಡುಸು ಪಡೆಯುತ್ತಾನೆ ಎಂದು ನಡೆಸುವ ಪರೀಕ್ಷೆಯ ಹೆಸರು ಎನ್‌ಪಿಟಿ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ.

ವ್ಯಕ್ತಿಯ ಅರಿವಿಗೆ ಬಾರದಂತೆ ನಡೆಯುವ ನಿಮಿರುವಿಕೆಯನ್ನು ಈ ಉಪಕರಣ ದಾಖಲಿಸುತ್ತದೆ. ಕಣ್ಣು ನಿದ್ರಾವಸ್ಥೆಯಲ್ಲಿರುವುದರಿಂದ ಸುಪ್ತ ಸ್ಥಿತಿಯಲ್ಲಿ ಮೆದುಳು ಕಳಿಸುವ ಸಂದೇಶ ರಕ್ತನಾಳಗಳ ಮೂಲಕ ಶಿಶ್ನಕ್ಕೆ ಹರಿದು ನಿಮಿರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗುತ್ತದೆ.
ಕಾನೂನು ಬದಲಾಗಬೇಕು ಎನ್ನುತ್ತಾರೆ ವೈದ್ಯರು

ಕಾನೂನು ಬದಲಾಗಬೇಕು ಎನ್ನುತ್ತಾರೆ ವೈದ್ಯರು

ಪುರುಷತ್ವ ಪರೀಕ್ಷೆ ನಡೆಸುವಾಗ ದೈಹಿಕ ಪರೀಕ್ಷೆ ಮತ್ತು ವೀರ್ಯ ಹಾಗೂ ಹಾರ್ಮೋನು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ನಂತರ ಲೈಂಗಿಕ ಕ್ರಿಯೆ ನಡೆಸಲು ಸಮರ್ಥ ಎಂದು ಘೋಷಿಸಲೂ ಬಹುದು. ಅದರೆ, ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದರೂ ಹಾರ್ಮೋನು ಅಥವಾ ಮತ್ತು ವೀರ್ಯ(ಶಕ್ತಿ ಹೀನ) ಸಮಸ್ಯೆ ಎದುರಿಸುತ್ತಿರಬಹುದು.

ಪುರುಷತ್ವದ ಪ್ರಶ್ನೆ ಸಂಕೀರ್ಣವಾಗಿದ್ದು. ದೇಶದ ಕಾನೂನು ಈ ಸಂಕೀರ್ಣತೆಯನ್ನು ಗಣನೆಗೆ ತೆಗೆದುಕೊಂಡಂತಿಲ್ಲ ಎನ್ನುತ್ತಾರೆ ವೈದ್ಯರು. ಎಲ್ಲ ಪರೀಕ್ಷೆಗಳನ್ನು ನೈಸರ್ಗಿಕವಾಗಿ ಉದ್ರೇಕ ಹೊಂದಿದ್ದ ಸ್ಥಿತಿಯಲ್ಲೇ ಮಾಡಲಾಗಿದೆ ಎಂಬುದಾಗಿ ವೈದ್ಯರು ಪ್ರಮಾಣಪತ್ರ ನೀಡಬೇಕು.

English summary
A potency test is a medical examination that allows the authorities to prove potency, which basically means that the accused is physically capable of committing sexual assault
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X