ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನಗಳು ಸಂಚರಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕಾಗಿ ಕೆಆರ್‌ಪುರಂನ ಟಿನ್ ಫ್ಯಾಕ್ಟರಿ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಒಟ್ಟು 18.5 ಕಿ.ಮೀ ಮಾರ್ಗದಲ್ಲಿ ಪ್ರತ್ಯೇಕ ಬಸ್‌ ಪಥದಲ್ಲಿ ಇತರೆ ವಾಹನಗಳ ಸಂಚಾರದ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮರಾ ಅಳವಡಿಸಲು ಬಿಎಂಟಿಸಿ ಮುಂದಾಗಿದೆ.

ಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆ

ಹೈಟೆಕ್ ಕ್ಯಾಮರಾ ಖರೀದಿಗೆ ನಿರ್ಭಯಾ ನಿಧಿಯ ಅನುದಾನ ಬಳಕೆ ಮಾಡಲಾಗುತ್ತದೆ. ಪ್ರತ್ಯೇಕ ಪಥ ನಿರ್ಮಾಣವಾಗುತ್ತಿರುವ ಕೆಆರ್‌ ಪುರ- ಟಿನ್ ಫ್ಯಾಕ್ಟರಿ -ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ನಿತ್ಯ 700 ಬಸ್‌ಗಳು ಸಂಚರಿಸುತ್ತಿದ್ದರೂ ಎಲ್ಲಾ ಬಸ್‌ಗಳಿಗೆ ಏಕಕಾಲಕ್ಕೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಸಾಧ್ಯವಿಲ್ಲ.

ವಾಹನ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ

ವಾಹನ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ

ಬಿಬಿಎಂಪಿ, ಬಿಎಂಟಿಸಿ ನಗರ ಸಂಚಾರ ಪಲೀಸರ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಅಧಿಕ ವಾಹನ ಸಂಚಾರ ದಟ್ಟಣೆ ಇರುವ ಕೆಆರ್‌ಪುರಂ ಟಿನ್ ಫ್ಯಾಕ್ಟರಿ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಪ್ರತ್ಯೇಕ ಬಸ್‌ ಪಥ ನಿರ್ಮಿಸಲಾಗುತ್ತಿದೆ. ಕೇವಲ ಬಿಎಂಟಿಸಿ ಬಸ್‌ಗಳು ಮಾತ್ರ ಈ ಪಥದಲ್ಲಿ ಸಂಚರಿಸಬೇಕು. ಹಾಗಾಗಿ ರಸ್ತೆಯ ಎಡಭಾಗದಲ್ಲಿ ಈ ಪ್ರತ್ಯೇಕ ಬಸ್‌ ಪಥ ನಿರ್ಮಿಸಲಾಗುತ್ತಿದೆ. ಇತರೆ ವಾಹನಗಳು ಪಥ ಪ್ರವೇಶಿಸದಂತೆ ಬೊಲ್ಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಬೊಲ್ಲಾರ್ಡ್ ದಾಟಿಕೊಂಡು ಪಥ ಪ್ರವೇಶಿಸುವ ವಾಹನಗಳ ಮೇಲೆ ನಿಗಾ ಇರಿಸಲು ಬಿಎಂಟಿಸಿ ಸಿಸಿ ಕ್ಯಾಮರಾಗಳ ವ್ಯವಸ್ಥೆಗೆ ಮುಂದಾಗಿದೆ.

ಮೊದಲು 90 ಬಸ್‌ಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ

ಮೊದಲು 90 ಬಸ್‌ಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ

ಮೊದಲಿಗೆ ಈ ರ್ಮಾದಲ್ಲಿ ಸಂಚರಿಸುವ 90 ಬಸ್‌ಗಳಿಗೆ ಹೈಟೆಕ್ ಸಿಸಿಟಿವಿ ಕ್ಯಾಮರಾ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬಸ್ಸಿನ ಮುಂಭಾಗದಲ್ಲಿ ಈ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಬಸ್ ಸಂಚಾರದ ವೇಳೆ ಇತರೆ ವಾಹನಗಳು ಈ ಪ್ರತ್ಯೇಕ ಪಥ ಪ್ರವೇಶಿಸಿದರೆ ಕ್ಯಾರಾದಲ್ಲಿ ಚಿತ್ರ ಸೆರೆಯಾಗುತ್ತದೆ ಬಳಿಕ ಅವರಿಗೆ ಸಂಡ ವಿಧಿಸಲಾಗುತ್ತದೆ.

ಪ್ರತ್ಯೇಕ ಬಸ್‌ ಪಥದಲ್ಲಿ ಅ.20 ರಿಂದ ಬಿಎಂಟಿಸಿ ಸಂಚಾರಪ್ರತ್ಯೇಕ ಬಸ್‌ ಪಥದಲ್ಲಿ ಅ.20 ರಿಂದ ಬಿಎಂಟಿಸಿ ಸಂಚಾರ

ಐಟಿಎಸ್ ಬಟನ್ ಅಳವಡಿಕೆ

ಐಟಿಎಸ್ ಬಟನ್ ಅಳವಡಿಕೆ

ಬಸ್ ಚಾಲಕನ ಎದುರು ಸಿಸಿಟಿವಿ ಕ್ಯಾಮರಾದ ಬಟನ್ ಇರುತ್ತದೆ. ಇತರೆ ವಾಹನಗಳು ಪ್ರತ್ಯೇಕ ಪಥ ಪ್ರವೇಶಿಸಿದರೆ ಚಾಲಕ ಆ ಬಟನ್ ಒತ್ತಿದರೆ ವಾಹನ ಚಿತ್ರ ಸೆರೆಯಾಗುತ್ತದೆ. ಚತುರ ಸಾರಿಗೆ ವ್ಯವಸ್ಥೆ ತಂತ್ರಜ್ಞಾನದ ಮೂಲಕ ಆ ಫೋಟೊ ಬಿಎಂಟಿಸಿಯ ಕೇಂದ್ರ ಕಚೇರಿಯ ಐಟಿಎಸ್ ಕೇಂದ್ರಕ್ಕೆ ರಾವಾನೆಯಾಗುತ್ತದೆ. ಅಲ್ಲಿಂದ ಸಂಚಾರ ಪೊಲೀಸರಿಗೆ ರವಾನೆಯಾಗಲಿದೆ.

ನಿರ್ಭಯಾ ನಿಧಿ ಬಳಕೆ

ನಿರ್ಭಯಾ ನಿಧಿ ಬಳಕೆ

ಹೈಟೆಕ್ ಕ್ಯಾಮರಾ ಖರೀದಿಗೆ ನಿರ್ಭಯಾ ನಿಧಿಯ ಅನುದಾನ ಬಳಕೆ ಮಾಡಲಾಗುತ್ತದೆ. ಪ್ರತ್ಯೇಕ ಪಥ ನಿರ್ಮಾಣವಾಗುತ್ತಿರುವ ಕೆಆರ್‌ ಪುರ- ಟಿನ್ ಫ್ಯಾಕ್ಟರಿ -ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ನಿತ್ಯ 700 ಬಸ್‌ಗಳು ಸಂಚರಿಸುತ್ತಿದ್ದರೂ ಎಲ್ಲಾ ಬಸ್‌ಗಳಿಗೆ ಏಕಕಾಲಕ್ಕೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಸಾಧ್ಯವಿಲ್ಲ.

ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

English summary
BMTC officials said fines would be imposed on other vehicles traveling on a separate bus route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X