ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಷೆಲ್ ಗಳಿಗೆ ಮರ್ಮಾಘಾತ ನೀಡಿದ ಮಹಿಳೆ: ಏನಾಯ್ತು ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಆಟೋದಲ್ಲಿ ಚಲಿಸತ್ತಿದ್ದ ಮಹಿಳೆಯನ್ನು ಮಾಸ್ಕ್ ಹಾಕಿಲ್ಲ ಎಂದು ದಂಡ ವಿಧಿಸಲು ಹೋದ ಮಾರ್ಷೆಲ್ ಗಳಿಗೆ ನೀರಿಳಿಸಿದ ವೈರಲ್ ವಿಡಿಯೋ ಅಸಲಿ ಸಂಗತಿ ಹೊರ ಬಿದ್ದಿದೆ. ಈ ಘಟನೆ ನಡೆದಿರುವು ನವೆಂಬರ್ 25 ರಂದು. ಜಯನಗರದ ವಾರ್ಡ್ ನಂ 170 ರ ಜಯದೇವ ಆಸ್ಪತ್ರೆ ಸಮೀಪ. ಆಟೋದಲ್ಲಿ ಬರುತ್ತಿದ್ದ ಮಹಿಳೆ ಮಾಸ್ಕ್ ಹಾಕಿರಲಿಲ್ಲ. ಈ ವೇಳೆ ದಂಡ ಪ್ರಯೋಗಕ್ಕೆ ಮುಂದಾದ ಮಾರ್ಷೆಲ್ ಗಳಿಗೆ ಹಿಗ್ಗಾ ಮುಗ್ಗಾ ನೀರಿಳಿಸಿ ಮರ್ಮಾಘಾತ ನೀಡಿದ್ದಾರೆ.ಮಹಿಳೆ ಚಲಿಸುತ್ತಿದ್ದ ಆಟೋ ನಂಬರ್ ಉಲ್ಲೇಖಿಸಿ ಮಾರ್ಷೆಲ್ ಗಳು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕೆಲಸ ನಿಮಿತ್ತ ಬಾಡಿಗೆ ಆಟೋ ಪಡೆದು ಮಹಿಳೆ ಜಯದೇವ ಆಸ್ಪತ್ರೆ ಸಮೀಪ ಬನ್ನೇರುಘಟ್ಟಕ್ಕೆ ಹೋಗುತ್ತಿದ್ದರು. ಮಾಸ್ಕ್ ಧರಿಸದ ಮಹಿಳೆ ನೋಟಿ ಆಟೋ ನಿಲ್ಲಿಸಿದ ಮಾರ್ಷೆಲ್ ಗಳ ತಂಡ " ನೀವು ಮಾಸ್ಕ್ ಹಾಕಿಲ್ಲ, ದಂಡ ಕಟ್ಟಿ " ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಣ್ಣ ನನ್ನ ಹತ್ತಿರ ಮಾಸ್ಕ್ ಇದೆ ಅಣ್ಣ ಹಾಕ್ತೀನಿ ಬಿಡಿ ಎಂದಿದ್ದಾರೆ.

ಆಟೋ ಚಾಲನೆ ಮಾಡುವಂತೆ ಮಹಿಳೆ ಆಟೋ ಡ್ರೈವರ್ ಗೆ ಹೇಳಿದ್ದಾಳೆ. ಆಟೋ ಚಾಲನೆ ಮಾಡಲು ಮುಂದಾದಾಗ, ನಿವು ಮುಂದೆ ಹೋದರೆ ನಿಮ್ಮ ಮೇಲೆ ಕೇಸು ಬೀಳುತ್ತೆ ಎಂದು ಮಾರ್ಷೆಲ್ ಗಳು ಹೆದರಿಸಿದ್ದಾರೆ. ಅಲ್ಲದೇ ಮಹಿಳೆಯ ವಿಡಿಯೋ ಮಾಡಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಮಾರ್ಷೆಲ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

what happen for viral video lady after the video

ಆಟೋದಿಂದ ಕೆಳಗೆ ಇಳಿದ ಮಹಿಳೆ ಮಾರ್ಷೆಲ್ ಗಳಿಗೆ ಪ್ರಶ್ನೆ ಮಾಡಲು ಮಾಡ್ತಾಳೆ. ಪ್ರಯಾಣಕ್ಕೆ ಅಡ್ಡಿ ಪಡಿಸಿದ ಮಾರ್ಷೆಲ್ ಗಳ ವರ್ತನೆಯಿಂದ ಸಿಟ್ಟುಗೊಂಡ ಮಹಿಳೆ ಕೊನೆಗೆ ಹೋಗಲೋ ನಾನು ಫೈನ್ ಕಟ್ಟಲ್ಲ ಎಂದು ಹೇಳಿ ಹೊರಡುತ್ತಾರೆ.

ತಮ್ಮ ಸುರಕ್ಷತೆಗಾಗಿ ಎಂಧು ಮಾರ್ಷೆಲ್ ಗಳೇ ವಿಡಿಯೋ ಮಾಡಿಕೊಂಡು ಮೇಲಾಧಿಕಾರಿಗಳಿಗೆ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಆಕೆಯ ವಿವರ ಉಲ್ಲೇಖಿಸದೇ ಆಕೆ ಚಲಿಸುತ್ತಿದ್ ಆಟೋ ನಂಬರ್ ಉಲ್ಲೇಖಿಸಿ ದೂರು ನೀಡಿದ್ದಾರೆ. ಇದೇ ರೀತಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಪ್ರಕರಣದಲ್ಲೂ ಮಾರ್ಷೆಲ್ ಗಳು ದೂರು ನೀಡಿದ್ದಾರೆ.

English summary
The viral video of the marshals attempting to penalize a woman for not masking a woman in an auto has emerged. The incident happened on November 25th. Near Jayadeva Hospital, Ward No. 170, Jayanagara. after the arguments Marshals file complaint against the Lady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X