ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಲ್ಲ ಇಲ್ಲ ಸಿದ್ದರಾಮಯ್ಯ ಹಾಗೆ ಹೇಳಿರಲಿಕ್ಕಿಲ್ಲ ಎಂದ ಡಿಕೆ ಶಿವಕುಮಾರ್

|
Google Oneindia Kannada News

Recommended Video

D K Shivakumar Slams Siddaramaiah | Oneindia Kannada

ಬೆಂಗಳೂರು, ಅಕ್ಟೋಬರ್ 28: ಇಲ್ಲ ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಹೀಗೆ ಹೇಳಿರಲಿಕ್ಕಿಲ್ಲ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಗಿಯೇ ನುಡಿದಿದ್ದಾರೆ.

ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿದಿರುವ ಕುರಿತು ತೀವ್ರ ಚರ್ಚೆ ನಡೆದಿತ್ತು, ಅದರಲ್ಲೂ ಈ ವಿಚಾರವಾಗಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದರು.ಸಿದ್ದರಾಮಯ್ಯ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಈ ರೀತಿ ಮಾತನಾಡಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ, ಗೌರವ ಇದೆ ಎಂದಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ನನಗೆ ಅನ್ಯಾಯವಾಗಿದೆ ಅಂತ ಜನ ಬೀದಿಗಿಳಿದರು.

ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ, ಹಾಗಾಗಿ ಭೇಟಿ ನೀಡಿದ್ದೇನೆ. ದಸರಾ ಹಬ್ಬದ ವೇಳೆ ತಂದೆ ಸಮಾಧಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ. ಸೋಮವಾರ ತಂದೆ ಸಮಾಧಿಗೆ, ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುತ್ತೇನೆ.

ಡಿಕೆಶಿ ಕೈಲಿ ಜೆಡಿಎಸ್ ಬಾವುಟ, ಕೆಂಡಾಮಂಡಲವಾದ ಸಿದ್ದರಾಮಯ್ಯಡಿಕೆಶಿ ಕೈಲಿ ಜೆಡಿಎಸ್ ಬಾವುಟ, ಕೆಂಡಾಮಂಡಲವಾದ ಸಿದ್ದರಾಮಯ್ಯ

ಮೈಸೂರಿಗೆ ಹೋಗಿ ಅಲ್ಲಿಯೂ ದೇವಸ್ಥಾನ, ಹಿರಿಯರ ಭೇಟಿ ಮಾಡಲಿದ್ದೇನೆ. ನನ್ನಿಂದ ನನ್ನ ಸ್ನೇಹಿತರ, ಸಂಬಂಧಿಕರ ಮನೆ ಮೇಲೂ ಐಟಿ ರೇಡ್ ಆಗಿತ್ತು. ಅವರ ಮನೆಗಳಿಗೆ ಹೋಗಿ ಮಾತನಾಡುತ್ತೇನೆ, ಧೈರ್ಯ ತುಂಬುತ್ತೇನೆ ಎಂದು ಹೇಳಿದರು.

ನಾನು ಪಕ್ಷಾತೀತ ನಾಯಕ

ನಾನು ಪಕ್ಷಾತೀತ ನಾಯಕ

ನಾನು ಪಕ್ಷಾತೀತ ನಾಯಕ, ನನಗೆ ಎಲ್ಲ ವರ್ಗದವರ ಆಶೀರ್ವಾದ ಇದೆ. ನಾನು ಅರೆಸ್ಟ್ ಆದಾಗ ನಂಜಾವಧೂತ ಶ್ರೀಗಳು ನನ್ನ ಪರವಾಗಿ ಹೋರಾಟ ಮಾಡಿದ್ರು. ಪಾದಯಾತ್ರೆ ನಡೆಸಿ ರಾಜ್ಯಕ್ಕೆ ಸಂದೇಶ ಕೊಟ್ಟರು. ನಾನು ಎಲ್ಲರ ಮನೆಗೆ ಹೋಗಿ ವೈಯಕ್ತಿಕವಾಗಿ ಭೇಟಿ ಆಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು, ರಾಜ್ಯದ ಜನಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

ಜೈಲಿನಿಂದ ಹೊರ ಬರಲು ಎಲ್ಲರೂ ಹೋರಾಟ ನಡೆಸಿದ್ದಾರೆ

ಜೈಲಿನಿಂದ ಹೊರ ಬರಲು ಎಲ್ಲರೂ ಹೋರಾಟ ನಡೆಸಿದ್ದಾರೆ

ನಾನು ಜೈಲಿನಿಂದ ಹೊರ ಬರಲು ಎಲ್ಲ ಸಮಾಜ, ಪಕ್ಷ, ಸಂಘಗಳು ಪಕ್ಷಾತೀತವಾಗಿ ಹೋರಾಟ ನಡೆಸಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ನಾನು ಬರುವಾಗ ಜೆಡಿಎಸ್ ಕಾರ್ಯಕರ್ತರು ದಾರಿಯಲ್ಲಿ ನಿಂತು ಹಾರೈಸಿದರು.

ರಮೇಶ್ ಅವರ ಮನೆಗೆ ಭೇಟಿ ನೀಡುತ್ತೇನೆ

ರಮೇಶ್ ಅವರ ಮನೆಗೆ ಭೇಟಿ ನೀಡುತ್ತೇನೆ

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಿಎ ರಮೇಶ್ ನನ್ನ ಹುಡುಗ. ಸೋಮವಾರ ರಮೇಶ್ ಮನೆಗೂ ಹೋಗಿ ಕುಟುಂಬಕ್ಕೆ ಧೈರ್ಯ ತುಂಬುತ್ತೇನೆ ಎಂದರು. ಆದರೆ ಕೇಂದ್ರ ಸರ್ಕಾರ ಐಟಿ, ಇ.ಡಿ ದುರ್ಬಳಕೆ ಬಗ್ಗೆ ಹೇಳಿಕೆ ನೀಡಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.

ನನ್ನ ನೋಡಲು ಬರಬೇಡಿ ಎನ್ನುವುದಕ್ಕೆ ಆಗುತ್ತಾ?

ನನ್ನ ನೋಡಲು ಬರಬೇಡಿ ಎನ್ನುವುದಕ್ಕೆ ಆಗುತ್ತಾ?

ನನ್ನನ್ನು ನೋಡಲು ಮಾಜಿ ಸಿಎಂ ಕುಮಾರಸ್ವಾಮಿ ಜೈಲಿಗೆ ಬಂದಿದ್ದರು. ಅವರನ್ನು ಬರಬೇಡಿ ಎನ್ನುವುದಕ್ಕೆ ಆಗುತ್ತಾ? ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಕೂಡ ಬಂದಿದ್ದರು. ಆದರೆ ಅವರಿಗೆ ನನ್ನನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂದರು.

English summary
Siddaramaiah Didnot Say such things about me says DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X