ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ತಪ್ಪಿದ ಸಚಿವ ಸ್ಥಾನ ರೇಣುಕಾಚಾರ್ಯ ಹೇಳಿದ್ದು ಹೀಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 20: ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಹಲವರು ಬೇಸರಿಸುತ್ತಿರುವ ಹೊತ್ತಲ್ಲಿ ಎಂಪಿ ರೇಣುಕಾಚಾರ್ಯ ಮಾತ್ರ ಬೇರೆಯ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

"ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರಲಿಲ್ಲ, ನನಗೆ ಅಸಮಾಧಾನ ಕೂಡ ಇಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸಂಪುಟ ಸೇರ್ಪಡೆಯಾದ ನೂತನ ಸಚಿವರಿಗೆ ಅಭಿನಂದನೆಗಳು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಯೇ ನನ್ನ ಮೂಲ ಮಂತ್ರ' ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ

ಹಾಗೆಯೇ ಸಚಿವ ಸ್ಥಾನದಿಂದ ವಂಚಿತ ರಾಮಪ್ಪ ಲಮಾಣಿ ಕೂಡ ಪ್ರತಿಕ್ರಿಯೆ ನೀಡಿದ್ದು, ನನಗೆ ಸಚಿವ ಸ್ಥಾನ ನಿರೀಕ್ಷೆ ಇತ್ತು, ಆದರೆ ಸಿಕ್ಕಿಲ್ಲ, ಸಹಜವಾಗಿಯೇ ಕಾರ್ಯಕರ್ತರು ಬೇಸರಗೊಂಡಿದ್ದಾರೆ, ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದೇನೆ.

What did Renukacharya say about not getting a ministerial position

ಪ್ರಭು ಚೌಹಾಣ್ ಗೆ ಕೊಟ್ಟಿರುವ ಕಾರಣ ನಾನು ಸಮಾಧಾನ ಆಗಲೇಬೇಕು. ನನಗೆ ಕೊಟ್ಟರೆ ಅವರು ಸಮಾಧಾನ ಆಗಬೇಕು. ಸಚಿವ ಸ್ಥಾನ ಸಿಗದ ಕಾರಣ ನಿಗಮ ಮಂಡಳಿ ಕೇಳುತ್ತೇವೆ. ನಿಗಮ ಮಂಡಳಿ ಕೊಡಿಸುವ ಭರವಸೆಯನ್ನು ಸಂಸದರನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

What did Renukacharya say about not getting a ministerial position

ಒಟ್ಟು 17 ಮಂದಿ ಶಾಸಕರು ಯಡಿಯೂರಪ್ಪ ಸಂಪುಟಕ್ಕೆ ಇಂದು(ಆಗಸ್ಟ್ 20)ಸೇರ್ಪಡೆಯಾಗಿದ್ದಾರೆ. ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ , ಗೋವಿಂದ ಕಾರಜೋಳ , ಅಶ್ವಥ್ ನಾರಾಯಣ ,ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ,ಶ್ರೀರಾಮುಲು, ಸುರೇಶ್ ಕುಮಾರ್ , ವಿ. ಸೋಮಣ್ಣ , ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ , ಶ್ರೀನಿವಾಸ ಪೂಜಾರಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ನಾಗೇಶ್ , ಪ್ರಭು ಚೌಹಾಣ್ , ಶಶಿಕಲಾ ಜೊಲ್ಲೆ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

English summary
What did Renukacharya say about not getting a ministerial position, While many lamented that they were not given a ministerial position, MP Renukacharya only responded in a different way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X