ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಯ ಕಸರತ್ತು: ಸಿಎಂ ಭೇಟಿ ಬಳಿಕ ತ್ಯಾಗದ ಬಗ್ಗೆ ಎಂಟಿಬಿ ಮಾತು

|
Google Oneindia Kannada News

ಬೆಂಗಳೂರು, ಜನವರಿ 17: ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಕೊನೆಯ ಕಸರತ್ತು ನಡೆಸಿದ್ದಾರೆ.

ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ , ನಮ್ಮೆಲ್ಲರ ತ್ಯಾಗದಿಂದ ಈ ಸರ್ಕಾರ ಬಂದಿದೆ, ಸಮಯ ಸಂದರ್ಭ ಕೂಡಿ ಬಂದಾಗ ಸಚಿವರಾಗ್ತೀವಿ.ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾದ ಎಂಟಿಬಿ ನಾಗರಾಜ್: ಏನೇನು ಚರ್ಚೆ?ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾದ ಎಂಟಿಬಿ ನಾಗರಾಜ್: ಏನೇನು ಚರ್ಚೆ?

ಸರ್ಕಾರ ಅಥವಾ ಪಕ್ಷದಲ್ಲಿ ಸೂಕ್ತಸ್ಥಾನ ನೀಡೋದಾಗಿ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಎಂಟಿಬಿ ಮನವಿ ಮಾಡಿದ್ದಾರೆ. ರಿಜ್ವಾನ್ ಅರ್ಷದ್ ಸ್ಥಾನದಿಂದ ತೆರವಾದ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಂಟಿಬಿ ಮೊದಲು ಎಂಎಲ್‌ಸಿ ಮಾಡಿ ಬಳಿಕ ಮಂತ್ರಿ ಸ್ಥಾನ ನೀಡಿ ಎಂದು ಕೇಳಿದ್ದಾರೆ.

ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಇಲ್ಲ

ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಇಲ್ಲ

ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಇಲ್ಲ ಎನ್ನುವ ಹೇಳಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ , ಎಂಟಿಬಿ ನಾಗರಾಜ್ ಕೊನೆಯ ಹಂತದ ಕಸರತ್ತನ್ನು ಮುಂದುವರೆಸಿದ್ದಾರೆ.ಉಪ ಚುನಾವಣೆಯಲ್ಲಿ ಎಂಟಿಬಿ ಸೋತಾಗ, ಸ್ವತಃ ಸಿಎಂ ಅವರ ಮನೆಗೆ ತೆರಳಿ ಆಶ್ವಾಸನೆ ನೀಡಿದ್ದರು.ಸರ್ಕಾರ ಅಥವಾ ಪಕ್ಷದಲ್ಲಿ ಸೂಕ್ತಸ್ಥಾನ ನೀಡೋದಾಗಿ ಭರವಸೆ ನೀಡಿದ್ದರು.ಆ ಹಿನ್ನೆಲೆಯಲ್ಲಿ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಎಂಟಿಬಿ ಮನವಿ ಮಾಡಿದ್ದಾರೆ.

ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ಕಿಡಿ

ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ಕಿಡಿ

ನಾನು ತಂದ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. ಈ ಹಿಂದೆ ನಾನು ತಂದ ಅನುದಾನ ಇದಾಗಿತ್ತು.ಇದೀಗ ಆ ಅನುದಾನದಲ್ಲಿ ಕಾರ್ಯಕ್ರಮ ಮಾಡ್ತಿದ್ದಾರೆ. ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಗಳಿಗೆ ಚಾಲನೆ, ಶಂಕುಸ್ಥಾಪನೆ ಮಾಡ್ತಿದ್ದಾರೆ.ಇದು ಯಾವ ನ್ಯಾಯ,ಈ ಬಗ್ಗೆ ಗಮನಿಸಿ ಎಂದು ಸಿಎಂಗೆ ಹೇಳಿದ್ದೇನೆ ಎಂದು ಹೇಳಿದರು.

ಮಂತ್ರಿ ಸ್ಥಾನಕ್ಕೆ ಹೀಗೆ ಒತ್ತಡ ಹೇರಿದರೆ ಹೇಗೆ?: ಯಡಿಯೂರಪ್ಪ ಪ್ರಶ್ನೆಮಂತ್ರಿ ಸ್ಥಾನಕ್ಕೆ ಹೀಗೆ ಒತ್ತಡ ಹೇರಿದರೆ ಹೇಗೆ?: ಯಡಿಯೂರಪ್ಪ ಪ್ರಶ್ನೆ

ಸಂಸದ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳಿ

ಸಂಸದ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳಿ

ಸಂಸದ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿ ನಾಯಕರ ವಿರುದ್ಧ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಆಗಬೇಕು.ನಾನು ಚುನಾವಣೆ ಮುಗಿದ ನಂತರದ ದಿನದಿಂದಲೂ ಒತ್ತಾಯ ಮಾಡ್ತಿದ್ದೇನೆ.ಇಷ್ಟು ದಿನಗಳಿಂದಲೂ ಒತ್ತಾಯ ಮಾಡಿದ್ರು ಕ್ರಮಕ್ಕೆ ಮುಂದಾಗ್ತಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮೆಲ್ಲರ ತ್ಯಾಗದಿಂದ ಈ ಸರ್ಕಾರ ಬಂದಿದೆ

ನಮ್ಮೆಲ್ಲರ ತ್ಯಾಗದಿಂದ ಈ ಸರ್ಕಾರ ಬಂದಿದೆ

ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೋ ಇಲ್ವೋ ಅನ್ನೋ ಬಗ್ಗೆ ನನಗೆ ಗೊತ್ತಿಲ್ಲ,ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ,ನಮ್ಮೆಲ್ಲರ ತ್ಯಾಗದಿಂದ ಈ ಸರ್ಕಾರ ಬಂದಿದೆ.ಸಮಯ ಸಂದರ್ಭ ಕೂಡಿ ಬಂದಾಗ ಸಚಿವರಾಗ್ತೀವಿ.ನಾನು ಸಿಎಂ ಮತ್ತು ಹೈಕಮಾಂಡ್ ಒಪ್ಪಿ ಏನ್ ಸ್ಥಾನ ಕೊಟ್ರೂ ಸ್ವೀಕರಿಸ್ತೇನೆ.ಎಲ್ಲರಿಗೂ ಸಹಜ ಆಸೆ ಇರುತ್ತೆ.ಕೊಡೋದು ಬಿಡೋದು ಹೈಕಮಾಂಡ್ ನಿರ್ಧಾರ.ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಸ್ಪಷ್ಟನೆ ನೀಡಿದರು.

English summary
The Cabinet will be expanded shortly. Disqualified MLA MTB Nagaraj meet Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X