ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಕೆ. ಶಿವಕುಮಾರ್ ಮೌನ ವ್ರತಕ್ಕೆ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದೇನು?

|
Google Oneindia Kannada News

ಮಂಗಳವಾರವೂ ಕಾಂಗ್ರೆಸ್ ನಾಯಕರು ಮೂರನೇ ದಿನದ ಪಾದಯಾತ್ರೆ ನಡೆಸುತ್ತಿದ್ದಾರೆ. ಕನಕಪುದಿಂದ ಆರಂಭವಾದ ಪಾದಯಾತ್ರೆ ಇಂದು ಸಂಜೆ ಚಿಕ್ಕೇನಹಳ್ಳಿಗೆ ತಲುಪುತ್ತದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದಕ್ಕೆ ಬಚಾವ್ ಆಗಲು ಮೌನ ವ್ರತಕ್ಕೆ ನಿರ್ಧರಿಸಿದ್ದಾರೆ ಅಷ್ಟೆ ಎಂದು ಅಶ್ವತ್ಥ್ ನಾರಾಯಣ ಟಾಂಗ್ ನೀಡಿದರು. ಇದೇ ವೇಳೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್‌ನವರ ರೀತಿ ಬಂಡತನಕ್ಕೆ ಬಿದ್ದಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.

ಅತ್ಯುನ್ನತ ಆದರ್ಶಗಳ ಪ್ರತೀಕ ಶಾಸ್ತ್ರಿ
ಉನ್ನತ ವಿಚಾರ, ಸರಳ ಬದುಕು ಮತ್ತು ಉತ್ಕೃಷ್ಟ ನೈತಿಕತೆಯ ಪ್ರತೀಕವಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬದುಕು ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಸ್ಮರಿಸಿದ್ದಾರೆ.

What did Minister Ashwath Narayan Say to DK Shivakumars silent Vrata?

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದ ಸಚಿವರು, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಅವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದರು.

ಮಹಾತ್ಮ ಗಾಂಧೀಜಿಯವರ ವಿಚಾರ ಮತ್ತು ಜೀವನಗಳಿಂದ ಪ್ರೇರೇಪಿತರಾಗಿ ದೇಶ ಸೇವೆಗೆ ಧುಮುಕಿದ ಶಾಸ್ತ್ರಿಯವರು ವಿದ್ವತ್ ಮತ್ತು ದೂರದರ್ಶಿತ್ವಗಳನ್ನು ಹೊಂದಿದ್ದ ತುಂಬಾ ಅಪರೂಪದ್ದ ರಾಜನೀತಿಜ್ಞರಾಗಿದ್ದರು. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ಪ್ರಧಾನಿಯಾಗಿ ಇದ್ದಿದ್ದರೆ ದೇಶವು ಹಲವು ಶಾಪಗಳಿಂದ ವಿಮುಕ್ತವಾಗಿರುತ್ತಿತ್ತು ಎಂದು ನುಡಿದರು.

What did Minister Ashwath Narayan Say to DK Shivakumars silent Vrata?

ದೇಶವು ಅನುಸರಿಸಬೇಕಾದ ವಿದೇಶಾಂಗ ನೀತಿ ಹೇಗಿರಬೇಕೆನ್ನುವುದು ಶಾಸ್ತ್ರಿಯವರಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಚಾರದಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಹೆಚ್ಚು ವಾಸ್ತವಿಕ ದೃಷ್ಟಿಕೋನವನ್ನು ಹೊಂದಿದ್ದರು. ಅದರಲ್ಲೂ ದೇಶವನ್ನು ಕಾಯುವ ಸೇನಾ ಸಿಬ್ಬಂದಿಯನ್ನು ಗುರುತಿಸುವ ಮೂಲಕ ಅವರಿಗೆಲ್ಲ ಮನ್ನಣೆ ಸಿಕ್ಕುವಂತೆ ನೋಡಿಕೊಂಡರು. ಇದು ಅನುಸರಣೀಯ ಕ್ರಮವಾಗಿದೆ ಎಂದು ಅಶ್ವತ್ಥ್ ನಾರಾಯಣ ನೆನೆದರು.

Recommended Video

Cricket ಪ್ರೇಮಿಗಳು ತಿಳಿದುಕೊಳ್ಳಬೇಕಾಗಿರೋ ವಿಷಯ | One-Day Internationals | Oneindia Kannada

ಇದಕ್ಕೂ ಮುನ್ನ ಮಂಗಳವಾರ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ಅಂಗವಾಗಿ ಅವರು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಶಾಸ್ತ್ರಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

English summary
Higher Education Minister CN Ashwath Narayan responded to KPCC President DK Shivakumar's silent Vrata for three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X