ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?

|
Google Oneindia Kannada News

ಬೆಂಗಳೂರು, ಮೇ 30: ಈ ಬಾರಿ ಮಾವು ಮೇಳ ಆಯೋಜಿಸುವುದು ಕೊಂಚ ತಡವಾಗಿದ್ದರೂ ಕೂಡ ಬಗೆ ಬಗೆಯ ಮಾವಿನ ಹಣ್ಣುಗಳು ಲಾಲ್‌ಬಾಗ್‌ಗೆ ಬಂದಿವೆ.

ಬಾಯಲ್ಲಿ ನೀರೂರಿಸುವ ಬಾದಾಮಿ, ರಸಪುರಿ, ಮಲ್ಲಿಕಾ, ಸೇಂದೂರ ಸಕ್ಕರೆ ಗುತ್ತಿ, ಬಂಗನಪಲ್ಲಿ ಹೀಗೆ ಹಲವಾರು ಬಗೆಯ ಮಾವುಗಳು ಲಭ್ಯವಿದೆ.

ಹಾಗಾದರೆ ಈ ಬಾರಿ ನೀವು ಮಾವು ಮೇಳಕ್ಕೆ ಯಾಕೆ ಹೋಗಲೇಬೇಕು, ಅಂಥದ್ದೇನಿದೆ ಎನ್ನುವುದನ್ನು ನೋಡೋಣ..

ಎಂಜಿನಿಯರ್‌ಗಳೆಲ್ಲ ಒಟ್ಟುಗೂಡಿ ಬೆಳೆದ ನೈಸರ್ಗಿಕ ಮಾವು

ಎಂಜಿನಿಯರ್‌ಗಳೆಲ್ಲ ಒಟ್ಟುಗೂಡಿ ಬೆಳೆದ ನೈಸರ್ಗಿಕ ಮಾವು

ಬೆಂಗಳೂರಿನ ಹತ್ತಾರು ಎಂಜಿನಿಯರ್‌ಗಳು ಒಟ್ಟು ಸೇರಿ ಕೋಲಾರದಲ್ಲಿ ಜಾಗ ಖರೀದಿಸಿ ಅಲ್ಲಿ ಮಾವಿನ ಹಣ್ಣು ಬೆಳದಿದ್ದಾರೆ. ಭುವನೇಶ್ವರಿ ನಿಸರ್ಗ ಆರ್ಗ್ಯಾನಿಕ್ ಎನ್ನುವ ಹೊಸ ಮಳಿಗೆ ತೆರೆದು ಗ್ರಾಹಕರಿಗೆ ಉತ್ತಮ ಮಾವಿನಹಣ್ಣುಗಳನ್ನು ನೀಡಲು ಬಂದಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲೂ ಮಾವು ಲಭ್ಯ

ಮೆಟ್ರೋ ನಿಲ್ದಾಣಗಳಲ್ಲೂ ಮಾವು ಲಭ್ಯ

ಬೈಯಪ್ಪನಹಳ್ಳಿ, ನಾಯಂಡಹಳ್ಳಿ, ಇಂದಿರಾನಗರ ಮತ್ತು ಪೀಣ್ಯ ಇಂಡಸ್ಟ್ರೀಸ್ ನಲ್ಲಿ ಮಾವು ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಮಾವು ಹಂಗಾಮಿನಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಮಾಹಿತಿ ಪ್ರಕಾರ ರಾಜ್ಯದಿಂದ ಒಟ್ಟು 831 ಟನ್ ಮಾವಿನ ಹಣ್ಣು ಹೊರದೇಶಗಳಿಗೆ ರಫ್ತಾಗಿದೆ.

ಪ್ರತಿವರ್ಷ ಎಷ್ಟು ಇಳುವರಿ ನಿರೀಕ್ಷೆ

ಪ್ರತಿವರ್ಷ ಎಷ್ಟು ಇಳುವರಿ ನಿರೀಕ್ಷೆ

ಕರ್ನಾಟಕದಲ್ಲಿ ಮಾವು ಬೆಳೆಯನ್ನು ಸುಮಾರು 1.80 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದು, ಪ್ರತಿವರ್ಷ ಸರಾಸರಿ 13-14 ಲಕ್ಷ ಟನ್‌ಗಳಷ್ಟು ಇಳುವರಿ ನಿರೀಕ್ಷಿಸಲಾಗುತ್ತಿದೆ.

ಎಲ್ಲಾ ಮಳಿಗೆಗಳಲ್ಲೂ ಒಂದೇ ದರ, ಶೇ.10 ರಿಯಾಯಿತಿ

ಎಲ್ಲಾ ಮಳಿಗೆಗಳಲ್ಲೂ ಒಂದೇ ದರ, ಶೇ.10 ರಿಯಾಯಿತಿ

ಎಲ್ಲಾ ಮಳಿಗೆಗಳಲ್ಲೂ ಒಂದೇ ರೀತಿಯ ದರ ನಿಗದಿ ಮಾಡಲಾಗಿದೆ. ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಬಾದಾಮಿ-72 ರೂ
ಬಾದಾಮಿ ಬಾಕ್ಸ್ 3 ಕೆಜಿಗೆ-225 ರೂ
ರಸಪುರಿ-63 ರೂ
ಮಲ್ಲಿಕಾ-77 ರೂ
ಸೇಂದೂರ-43 ರೂ
ಸಕ್ಕರೆಗುತ್ತಿ-85 ರೂ
ಮಲಗೋವಾ-100 ರೂ
ಬಂಗನಪಲ್ಲಿ-60 ರೂ
ದಶೇರಿ- 80 ರೂ
ತೋತಾಪುರ-25 ರೂ
ಕಾಲಾಪಾಡ್- 76ರೂ
ಅಮ್ರಪಾಲಿ-78 ರೂ
ಕೇಸರ್-63 ರೂ
ನೀಲಂ-50 ರೂಗೆ ಲಭ್ಯವಿದೆ.

ಕೋಲಾರದ ಮಾವು ಜೂನ್ ಬಳಿಕವೂ ಇರಲಿದೆ

ಕೋಲಾರದ ಮಾವು ಜೂನ್ ಬಳಿಕವೂ ಇರಲಿದೆ

ಕೋಲಾರದ ಮಾವು ಜೂನ್ ಬಳಿಕವೂ ಇರಲಿದೆ, ಹವಾಮಾನ ಬದಲಾವಣೆಯ ಕಾರಣ ಸ್ವಲ್ಪ ತಡವಾಗಿಯೇ ಮಾವು ಬಿಡಲು ಆರಂಭವಾಗುತ್ತದೆ. ಚಿಕ್ಕಬಳ್ಳಾಪುರ ಇನ್ನಿತರೆ ಕಡೆ ಮಾವು ಸೀಸನ್ ಮುಗಿದರೂ ಕೂಡ ಕೋಲಾರದಲ್ಲಿ ಮಾವಿನ ಹಣ್ಣುಗಳು ಲಭ್ಯವಿರುತ್ತವೆ.

ಆನ್‌ಲೈನ್‌ನಲ್ಲಿ ಕೂಡ ಮಾವುಗಳು ಲಭ್ಯ

ಆನ್‌ಲೈನ್‌ನಲ್ಲಿ ಕೂಡ ಮಾವುಗಳು ಲಭ್ಯ

ನಗರದ ಗ್ರಾಹಕರಿಗೆ ಆನ್‌ಲೈನ್ ಮೂಲಕ ಮಾವಿನ ಹಣ್ಣನ್ನು ಬೆಳೆಗಾರರಿಂದ ನೇರವಾಗಿ ಸರಬರಾಜು ಮಾಡಲು ಅನುಕೂಲವಾಗುವಂತೆ ಬಿಟುಸಿ ಪೋರ್ಟಲ್‌ನ್ನು ಆರಂಭಿಸಲಾಗಿದೆ.www.karisirimangos.karnataka.gov.in ಭೇಟಿ ನೀಡಿ ಮಾವು ಖರೀದಿಸಬಹುದಾಗಿದೆ.

English summary
Mango Mela Inaugurated by Chief minister HD Kumaraswamy Today at Labagh What are the specalities of Mela, What are the difference between previous year and this year Mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X