ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

37 ಬೀದಿ ಭಿಕ್ಷುಕರಿಗೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ ಪೊಲೀಸರು!

|
Google Oneindia Kannada News

ಬೆಂಗಳೂರು, ಅ. 27: ನಿರಾಶ್ರಿತರ ಪರಿಹಾರ ಕೇಂದ್ರ ರಾಜಭವನದಲ್ಲಿರುವ ಹಸಿರು ವಾತಾವರಣವಿದೆ. ಆದರೆ, ಭಿಕ್ಷುಕರಿಗೆ ಅಲ್ಲಿ ಕೊಡುವ ಊಟ ತಿಂದು ಇರಲಿಕ್ಕೆ ಮನಸು ಒಪ್ಪಲ್ಲ. ಬೀದಿಗೆ ಬಂದು ಭಿಕ್ಷೆ ಬೇಡಿ ಬೀದಿಯಲ್ಲಿ ಮಲಗಿದರೆ ಸುಖ ನಿದ್ದೆ. ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಹೋಗದೇ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ದಿನವೇ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ 37 ಭಿಕ್ಷುಕರನ್ನು ಪತ್ತ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಡಲಾಗಿದೆ.

ಕೆಲ ದಿನಗಳ ಹಿಂದೆ ರಸ್ತೆ, ಅಂಗಡಿಗಳ ಮುಂದೆ ಕೂತು ಭಿಕ್ಷೆ ಬೇಡುತ್ತಿದ್ದರು. ಇದನ್ನು ಗಮನಿಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಭಿಕ್ಷುಕರನ್ನು ಪತ್ತೆ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಟ್ಟಿದ್ದರು. ಇದೀಗ ಮತ್ತೆ ಭಿಕ್ಷುಕರ ಸಂಖ್ಯೆ ಹೆಚ್ಚಳವಾಗಿದ್ದು, ಎರಡನೇ ಹಂತದ ಕಾರ್ಯಾಚರಣೆಗೆ ಚಾಲನೆ ಕೊಟ್ಟಿದ್ದಾರೆ. ಉಪ್ಪಾರಪೇಟೆ, ಕೆ.ಆರ್. ಮಾರ್ಕೆಟ್ , ಬ್ಯಾಟರಾಯನಪುರ, ಚಂದ್ರ ಬಡಾವಣೆ, ಕೆಂಗೇರಿ, ವಿಜಯನಗರ ಮತ್ತಿತರ ಕಡೆ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು 37 ಭಿಕ್ಷುಕರನ್ನು ಪತ್ತೆ ಮಾಡಿ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಟ್ಟಿದ್ದಾರೆ.

ಭಿಕ್ಷುಕರಿಗೆ ತೊಂದರೆ ಕೊಡುವ ಕಾರ್ಯಾಚರಣೆ ಇದಲ್ಲ. ಭಿಕ್ಷುಕರಿಗೂ ಮೂರು ಹೊತ್ತು ಗುಣಮಟ್ಟದ ಆಹಾರ, ವಸತಿ, ವ್ಯಾಯಾಮಕ್ಕೆ ಅವಕಾಶ ಕಲ್ಪಿಸಿ ಪರಿಹಾರ ಕೇಂದ್ರವನ್ನು ಸರ್ಕಾರ ಕಲ್ಪಿಸಿದೆ. ಭಿಕ್ಷುಕರು ರಸ್ತೆಯಲ್ಲಿ ಮಲಗಿದಾಗ ಅವರ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ. ಅವರ ಯೋಗ ಕ್ಷೇಮ ಮತ್ತು ಸುರಕ್ಷತೆ ದೃಷ್ಟಿಯಿಂದ ಪರಿಹಾರ ಕೇಂದ್ರದಲ್ಲಿ ಇರುವುದು ಸೂಕ್ತ. ಇತ್ತೀಚೆಗೆ ಪಶ್ಚಿಮ ವಿಭಾಗದಲ್ಲಿ ಭಿಕ್ಷೆ ಬೇಡುವರ ಸಂಕ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 37 ಭಿಕ್ಷುಕರನ್ನು ಪತ್ತೆ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಡಲಾಗಿದೆ. ನಾಳೆಯೂ ಕಾರ್ಯಾಚರಣೆ ನಡೆಯಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

West Division police starts operation against street beggars in Bengaluru

ಪ್ರೀತಿ ನಿರಾಕರಿಸಿದ ಯುವತಿ ಕೊಲೆ; ಭಗ್ನ ಪ್ರೇಮಿ ಆತ್ಮಹತ್ಯೆ

ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಕೊಲೆ ಮಾಡಿರುವ ಭಗ್ನ ಪ್ರೇಮಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂದ್ರ ಗ್ರಾಮದಲ್ಲಿ ನಡೆದಿದೆ.

West Division police starts operation against street beggars in Bengaluru

ಆಂಕೋಲ ಮೂಲದ ಉಷಾ ಕೊಲೆಯಾದ ಯುವತಿ. ತಮಿಳುನಾಡು ಮೂಲದ ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿರುವ ಭಗ್ನಪ್ರೇಮಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾರನ್ನು ಸಮೀಪದಲ್ಲಿಯೇ ಇದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಪ್ರೀತಿಸುತ್ತಿದ್ದ. ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಗೋಪಾಲಕೃಷ್ಣ ತನ್ನ ಪ್ರೇಮ ನಿವೇದನೆಗೆ ಸಮ್ಮತಿ ಸೂಚಿಸಲು ಮನವಿ ಮಾಡಿದ್ದಾನೆ. ನಿರಾಕರಿಸಿದ ಉಷಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತ ವಿಷ ಕುಡಿದು ಗೆದ್ದಲಾಪುರ ಗ್ರಾಮದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುಗೊಂಡನಹಳ್ಳಿ ಠಾಣೆ ಪೊಲೀಸರು ಉಷಾ ಕೊಲೆ ಸಂಬಂಧ ಕೇಸು ದಾಖಲಿಸಿಕೊಂಡಿದ್ದಾರೆ. ಭಗ್ನಪ್ರೇಮಿ ಗೋಪಾಲಕೃಷ್ಣ ಆತ್ಮಹತ್ಯೆ ಪ್ರಕರಣ ಸಂಬಂಧ ತಿರುಮಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

West Division police starts operation against street beggars in Bengaluru

ವಂಚನೆ ಪ್ರಕರಣ ಸಂಬಂಧ ನಟಿ ಸಂಜನಾ ಹೇಳಿಕೆ ದಾಖಲು:

ಹಣ ಪಡೆದು ವಂಚನೆ ಮಾಡಿರುವ ಸಂಬಂಧ ಡ್ರಗ್ ಪೆಡ್ಲರ್ ರಾಹುಲ್ ತೋನ್ಸೆ ವಿರುದ್ಧ ದಾಖಲಿಸಿದ್ದ ದೂರಿನ ಸಂಬಂಧ ನಟಿ ಸಂಜನಾ ಗಲ್ರಾಣಿಯನ್ನು ಇಂದಿರಾನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

West Division police starts operation against street beggars in Bengaluru

Recommended Video

Pakistan ಗದ್ದಾಗ ಸಂಭ್ರಮಿಸಿದ ಭಾರತೀಯರಿಗೆ ಸಂಕಷ್ಟ | Oneindia Kannada

ಹಣ ಪಡೆದು ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಕೋರ್ಟ್ ಮೆಟ್ಟಿಲೇರಿದ್ದಳು. ಡ್ರಗ್ ಪೆಡ್ಲರ್ ರಾಹುಲ್ ತೋನ್ಸೆ ಹಣ ಪಡೆದು ಮೋಸ ಮಾಡಿದ ಸಂಬಂಧ ಗಲ್ರಾನಿ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಅದರಂತೆ ರಾಹುಲ್ ತೋನ್ಸೆ ವಿರುದ್ಧ ಇಂದಿರಾನಗರ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದೂರಿನ ತನಿಖೆ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದು ಸಂಜನಾ ಗಲ್ರಾನಿ ಪೊಲೀಸ್ ಠಾಣೆಗೆ ಹಾಜರಾಗಿ ಮಹತ್ವದ ದಾಖಲೆಗಳನ್ನು ಒದಗಿಸಿದ್ದಾಳೆ. ರಾಹುಲ್ ತೋನ್ಸೆ ವಂಚನೆ ಮಾಡಿರುವ ಸಂಬಂಧ ಸಂಜನಾ ಹೇಳಿಕೆ ಕೂಡ ದಾಖಲಿಸಿದ್ದಾಳೆ. ಹೂಡಿಕೆ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದಾಗಿ ಹೇಳಿಕೆ ನೀಡಿದ್ದು, ಹೂಡಿಕೆ ಮಾಡಿಸಿಕೊಂಡು ಲಾಭ ನೀಡದೇ ಮೋಸ ಮಾಡಿದ್ದಾನೆ. ಹಣ ವಾಪಸು ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾಗಿ ಸಂಜನಾ ಪೊಲೀಸರ ಮುಂದೆ ತಿಳಿಸಿದ್ದಾಳೆ ಎನ್ನಲಾಗಿದೆ. ಸಂಜನಾ ಹೇಳಿಕೆ ಬೆನ್ನಲ್ಲೇ ಆರೋಪಿ ರಾಹುಲ್ ತೋನ್ಸೆಗೆ ನೋಟಿಸ್ ನೀಡಿ ವಿಚಾರಣೆ ನಡೆಸಿಲು ಪೊಲೀಸರು ಮುಂದಾಗಿದ್ದಾರೆ.

English summary
Oration against street Beggars in Bengaluru: 37 beggars sent to Beggars colony rehab center know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X