ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಕ್ ಕಳ್ಳರ ಬಂಧನ: ಹತ್ತು ಲಕ್ಷ ಮೌಲ್ಯದ ಬೈಕ್‌ಗಳು ವಶ!

|
Google Oneindia Kannada News

ಬೆಂಗಳೂರು, ಮೇ.24 : ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಬೈಕ್ ಕಳ್ಳರನ್ನ ಭಾರತೀನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಲಕ್ಷ್ಮೀಪತಿ ಎಂಬುವವರನ್ನ ಬಂಧಿಸಿರುವ ಪೊಲೀಸರು ಆರೋಪಿಯಿಂದ ನಾಲ್ಕು ಲಕ್ಷ ಮೌಲ್ಯದ ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಆಡುಗೋಡಿ, ಭಾರತೀನಗರ ಸುತ್ತಮುತ್ತ ಬೈಕ್ ಕದಿದ್ದ್ ಆರೋಪಿ, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಬಲೆಬೀಸಿದ್ದ ಜ್ಞಾನಭಾರತಿ ಪೊಲೀಸರು 4 ಲಕ್ಷ ಮೌಲ್ಯದ ಬೈಕ್ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯ ಕೃಷ್ಣಮೂರ್ತಿ ಎಂ.ಎಲ್ ಅಂಡ್ ಟೀಮ್ ಯಶಸ್ವಿಯಾಗಿದ್ದಾರೆ.

ಕಳೆದ ಏಪ್ರಿಲ್ 13 ರಂದು ಸಂಜೆ 7:30 ಗಂಟೆ ಸಮಯದಲ್ಲಿ ಮನೆಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ 200 ಎಬಿಎಸ್ ಬೈಕ್ ಬೆಳಗ್ಗೆ ಎದ್ದು ನೋಡಿದಾಗ ಕಳ್ಳತನವಾಗಿರುತ್ತದೆ. ಕೂಡಲೇ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

Bengaluru: West Division Police arrested 3 Accused for Bike Theft

ಒಂದೂವರೆ ತಿಂಗಳು ನಂತರ ಆಂಧ್ರ ಮೂಲದ ಲಕ್ಷ್ಮೀಪತಿ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಡುಗೋಡಿ, ಭಾರತೀನಗರ ಸುತ್ತಮುತ್ತ ಬೈಕ್ ಕದಿದ್ದ್ ಆರೋಪಿ, ಜ್ಞಾನಭಾರತೀನಗರ ಠಾಣೆ ವ್ಯಾಪ್ತಿಯಲ್ಲೂ ತನ್ನ ಕೈಚಳಕ ತೋರಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

6.5 ಲಕ್ಷದ ಬೈಕ್ಗಳ ಕಳ್ಳತನ

ಸುಬ್ರಮಣ್ಯಪುರ, ಚಂದ್ರಾಲೇಔಟ್, ಬಂಡೆಪಾಳ್ಯ, ಬ್ಯಾಟರಾಯನಪುರ ಸೇರಿ ನಗರದ ಹಲವೆಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ಧೀನ್ ಖಾನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 6 ಲಕ್ಷದ 50 ಸಾವಿರ ಮೌಲ್ಯದ 8 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Bengaluru: West Division Police arrested 3 Accused for Bike Theft

ಬೆಂಗಳೂರಿನಲ್ಲಿ ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್ ಕಳೆದುಕೊಂಡು ಠಾಣೆ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗಿದೆ. ಮನೆಮುಮದೆ ನಿಲ್ಲಿಸಿದ ಬೈಕ್ ಗಳನ್ನೇ ಎಸ್ಕೇಪ್ ಮಾಡುತ್ತಿದ್ದ ಚಾಲಾಕಿ ಬೈಕ್ ಖದೀಮರ ಎಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲಿಸರು ಇದೀಗ ಬಲೆ ಬೀಸಿದ್ದಾರೆ.

Recommended Video

ಬಿಎಸ್ ವೈ ಪುತ್ರನಿಗೆ ಟಿಕೆಟ್ ಮಿಸ್ | #PoliticalWrap | Oneindia Kannada

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಒಟ್ಟು 10 ಲಕ್ಷದ 50 ಸಾವಿರದ ಮೌಲ್ಯದ ಕಳ್ಳತನ ಬೈಕ್‌ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಸದ್ಯ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ನಗರ ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಶ್ಚಿಮ ವಿಭಾಗದಲ್ಲಿ ಈ ಖದೀಮರ ಕೈಚಳಕ ತೋರಿದ್ದು, ಬೆಂಗಳೂರಿನ ಹಲವು ಭಾಗಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ.

English summary
Bengaluru: West Division Police arrested 3 Accused for Bike Theft, Ten lakhs of bikes were seized by the detainees,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X