ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಿಟಿ ರೈಲು ನಿಲ್ದಾಣ ವೆಬ್ ತಾಣಕ್ಕೆ ಸ್ವಾಗತ

By Mahesh
|
Google Oneindia Kannada News

ಬೆಂಗಳೂರು, ಫೆ.15: ಬೆಂಗಳೂರು ಸಿಟಿ ರೈಲು ನಿಲ್ದಾಣದ ಸಮಗ್ರ ಮಾಹಿತಿಯುಳ್ಳ ವೆಬ್ ತಾಣ ಈಗ ಸಾರ್ವಜನಿಕರಿಗೆ ಲಭ್ಯವಾಗಿದೆ.ನಗರ ರೈಲು ನಿಲ್ದಾಣದ ಇತಿಹಾಸ, ಇಲ್ಲಿಂದ ಎಲ್ಲೆಲ್ಲಿಗೆ ಸಂಪರ್ಕ ಕಲ್ಪಿಸಲಾಗಿದೆ, ಪ್ರತಿನಿತ್ಯ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಎಷ್ಟು , ನಿಲ್ದಾಣದಲ್ಲಿ ಲಭ್ಯವಿರುವ ಪ್ರಯಾಣಿಕರ ಸೌಲಭ್ಯಗಳು ಮುಂತಾದ ಮಾಹಿತಿಗಳುಈ ವೆಬ್ ಸೈಟ್ ನಲ್ಲಿದೆ.

ನಗರದ ನಿಲ್ದಾಣದಿಂದ ಹೊರಡುವ ರೈಲುಗಳ ವೇಳಾಪಟ್ಟಿ, ಅಖಿಲ ಭಾರತ ಮಟ್ಟದಲ್ಲಿ ರೈಲುಗಳ ವೇಳಾಪಟ್ಟಿ, ಪಿಎನ್ ‌ಆರ್ ಸಂಖ್ಯೆ ಪರಿಶೀಲನೆ, ಆನ್ ‌ಲೈನ್ ಮೂಲಕ ಟಿಕೆಟ್ ಬುಕಿಂಗ್, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ಮಧ್ಯದ ರೈಲುಗಳ ಮಾಹಿತಿ, ಸೀಟುಗಳ ಲಭ್ಯತೆ, ರೈಲುಗಳು ಬರುವ ಮತ್ತು ತೆರಳುವ ವೇಳಾಪಟ್ಟಿ ಮುಂತಾದ ಮಾಹಿತಿಯನ್ನು ವೀಕ್ಷಿಸಬಹುದು.

ನಗರ ರೈಲು ನಿಲ್ದಾಣದ ಇತಿಹಾಸ, ಇಲ್ಲಿಂದ ಎಲ್ಲೆಲ್ಲಿಗೆ ಸಂಪರ್ಕ ಕಲ್ಪಿಸಲಾಗಿದೆ, ಪ್ರತಿನಿತ್ಯ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಎಷ್ಟು , ನಿಲ್ದಾಣದಲ್ಲಿ ಲಭ್ಯವಿರುವ ಪ್ರಯಾಣಿಕರ ಸೌಲಭ್ಯಗಳು ಮುಂತಾದ ಮಾಹಿತಿಗಳು ಲಭ್ಯ.

Welcome to Bangalore city Railway Station Website

ನಗರ ನಿಲ್ದಾಣದಿಂದ ಹೊರಡುವ ರೈಲುಗಳ ವೇಳಾಪಟ್ಟಿ, ಅಖಿಲ ಭಾರತ ಮಟ್ಟದಲ್ಲಿ ರೈಲುಗಳ ವೇಳಾಪಟ್ಟಿ, ಪಿಎನ್ ‌ಆರ್ ಸಂಖ್ಯೆ ಪರಿಶೀಲನೆ, ಆನ್ ‌ಲೈನ್ ಮೂಲಕ ಟಿಕೆಟ್ ಬುಕಿಂಗ್, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣ ಮಧ್ಯದ ರೈಲುಗಳ ಮಾಹಿತಿ, ಸೀಟುಗಳ ಲಭ್ಯತೆ, ರೈಲುಗಳು ಬರುವ ಮತ್ತು ತೆರಳುವ ವೇಳಾಪಟ್ಟಿ ಮುಂತಾದ ಮಾಹಿತಿಯನ್ನು ವೀಕ್ಷಿಸಬಹುದು.

ರೈಲು ನಿಲ್ದಾಣದಲ್ಲಿ 14 ಟಿಕೆಟ್ ಕೌಂಟರ್‌ಗಳು, ಡಿಜಿಟಲ್ ರಿಜರ್ವೇಷನ್ ಚಾರ್ಟ್, ಮಾಹಿತಿ ಫಲಕಗಳು, ಎಟಿಎಂ ಸೌಲಭ್ಯ, ಟೆಲಿಫೋನ್ ಬೂತ್ ‌ಗಳು, ಶಿಶುಪಾಲನಾ ಕೇಂದ್ರ, ಡಾರ್ಮಿಟರಿ, ಡಿಜಿಟಲ್ ಪ್ರಯಾಣಿಕರ ಮಾರ್ಗದರ್ಶಿ ಮಾಹಿತಿ, ಹವಾನಿಯಂತ್ರಿತ ಕಾಯುವ ಕೊಠಡಿಗಳು, ಗ್ರಾಹಕ ಸೇವಾಕೇಂದ್ರ, ಪ್ರಯಾಣಿಕ ಸಹಾಯ ಕೇಂದ್ರ, ಮಾಹಿತಿ ಕಿಯೋಸ್ಕ್ ‌ಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸೂಕ್ತ ವ್ಯವಸ್ಥೆ ಇರುವ ಕಾಯುವ ಕೊಠಡಿಗಳು, ಪ್ರವಾಸಿ ಮಾಹಿತಿ ಕೇಂದ್ರ, ಫೆರಿ ಕಾರ್ಟ್, ಉಚಿತ ತುರ್ತು ವೈದ್ಯ ಕೇಂದ್ರ, ಲಗೇಜ್ ಟ್ರಾಲಿ, ಎಸ್ಕಲೇಟರ್ ಮುಂತಾದ ಸೌಲಭ್ಯಗಳು ನಿಲ್ದಾಣದ ಯಾವ ಯಾವ ಭಾಗದಲ್ಲಿದೆ ಮುಂತಾದ ಮಾಹಿತಿಗಳನ್ನೂ ಈ ವೆಬ್ ‌ಸೈಟ್ ನಲ್ಲಿ ಸಿಗುತ್ತಿದೆ.

ಸಹಾಯವಾಣಿ ಸಂಖ್ಯೆಗಳು: ನಿಲ್ದಾಣಗಳು: ಬೆಂಗಳೂರು ಸಿಟಿ (9900789789), ಯಶವಂತಪುರ (9902545012), ದಂಡು ನಿಲ್ದಾಣ (9686425934), ಯಲಹಂಕ (9686442594)

ಇದರ ಜತೆಗೆ ಕೇಟರಿಂಗ್ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಪ್ರೀಪೇಯ್ಡ್ ಆಟೋ ಮತ್ತು ಟ್ಯಾಕ್ಸಿ ಸೇವೆ, ಪಾರ್ಕಿಂಗ್ ಶುಲ್ಕ, ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಟಿ.ವಿ, ಲೋಹಶೋಧಕ ಯಂತ್ರಗಳ ಅಳವಡಿಕೆ, ರಕ್ಷಣಾ ಸಿಬ್ಬಂದಿ ನಿಯೋಜನೆ ಮುಂತಾದ ಮಾಹಿತಿ ಒದಗಿಸಲಾಗಿದೆ. ಅಲ್ಲದೆ, ಪ್ರಯಾಣಿಕರು ಸುಲಭವಾಗಿ ದೂರುಗಳನ್ನು ಸಲ್ಲಿಸಲು ಸಹಾಯವಾಣಿ ಸಂಖ್ಯೆಗಳನ್ನು ನೋಡಬಹುದು ಎಂದು ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣ ವೆಬ್ ತಾಣದ ಲಿಂಕ್ ಇಲ್ಲಿದೆ ನೋಡಿ

English summary
Welcome to Bangalore city Railway Station Website: This website gives all kind of information about Bangalore city Railway Station which passengers need to known. beside City trains schedule, PNR status, ticket booking it also gives Taxi and other transportation details useful to commuters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X