• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾರಾಂತ್ಯ ಕರ್ಫ್ಯೂ: ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಶೇ.30 ಕಡಿತ

|
Google Oneindia Kannada News

ಬೆಂಗಳೂರು, ಜೂನ್ 25: ನಗರದಲ್ಲಿ ವಾರಾಂತ್ಯ ಕರ್ಫ್ಯೂ ಇರುವ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದಾಗಿ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಶೇ.30ರಷ್ಟು ಕಡಿಮೆಗೊಳಿಸಲಾಗುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ, ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸುವುದು ಪ್ರಮುಖ ಧ್ಯೇಯವಾಗಿರುತ್ತದೆ. ಕೋವಿಡ್ 19 ನಿರ್ಬಂಧಗಳ ಸಡಿಲಿಕೆಯ ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಸಂಸ್ಥೆಯು ಬಸ್ಸುಗಳ ಕಾರ್ಯಾಚರಣೆಯನ್ನು ಜೂನ್ 21ರಿಂದ ಪ್ರಾರಂಭಿಸಲಾಗಿದೆ.

ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ!ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ!

ಇಂದು ಸಂಜೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ಆದ್ದರಿಂದ ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನ ಕಡಿಮೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ಅನಿವಾರ್ಯ ಕಾರಣಗಳಿಗಾಗಿ ಮನೆಯಿಂದ ಹೊರಗಡೆ ಹೋಗುವವರಿಗೆ ಅನುಕೂಲವಾಗಲಿದ್ದು, ಬಸ್‌ಗಳ ವ್ಯವಸ್ಥೆಯೂ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಿಲ್ಲ.

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜೂನ್ 26 ಹಾಗೂ 27 ರಂದು ಸಂಸ್ಥೆಯು ಪ್ರಸ್ತುತ ಕಾರ್ಯಾಚರಣೆಗೊಳಿಸುತ್ತಿರುವ 4000 ಸಾರಿಗೆಗಳಲ್ಲಿ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಚರಣೆಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಳಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ.

ಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರ; ಷರತ್ತು ಅನ್ವಯಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರ; ಷರತ್ತು ಅನ್ವಯ

   Emergency ಘೋಷಣೆಯಾಗಿ 46 ವರ್ಷ: ಭಾರತ ಇತಿಹಾಸದ ಕರಾಳ ದಿನಗಳು | Oneindia Kannada

   ರಾಜ್ಯ ಸರ್ಕಾರವು ಜೂನ್ 25 ಶುಕ್ರವಾರ ರಾತ್ರಿ 7 ರಿಂದ 28 ಸೋಮವಾರ ಬೆಳಗ್ಗೆ 05 ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಸದರಿ ಅವಧಿಯಲ್ಲಿ ದೈನಂದಿನ ವಸ್ತುಗಳಾದ ಹಾಲು, ತರಕಾರಿ, ದಿನಸಿ ಮತ್ತು ಔಷಧಾಲಯ ಇತ್ಯಾದಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ.

   English summary
   Because Of Weekend Curfew In Bengaluru, BMTC To Run 30Percent Buses During Saturday And Sunday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X