ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಪ್ರಧಾನಿಯಾಗಲಿ ಎಂಬುದು ನಮ್ಮಾಸೆ! ಹೊಸ ಗೂಗ್ಲಿ ಎಸೆದ ಎಚ್ಡಿಕೆ

|
Google Oneindia Kannada News

Recommended Video

ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕು ಎನ್ನುವ ಮೂಲಕ ಟ್ವಿಸ್ಟ್ ಕೊಟ್ಟ ಎಚ್ ಡಿ ಕೆ | Oneindia Kannada

ಬೆಂಗಳೂರು, ಜನವರಿ 24: "ರಾಹುಲ್ ಗಾಂಧಿ ಆವರನ್ನು ಪ್ರಧಾನಿಯನ್ನಾಗಿ ನೋಡಬೇಕು ಎಂಬುದೇ ನಮ್ಮಾಸೆ" ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಗೂಗ್ಲಿ ಎಸೆದಿದ್ದಾರೆ.

ಇತ್ತೀಚೆಗೆ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಯೂ ಇದೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದ ಕುಮಾರಸ್ವಾಮಿ ಇದೀಗ ವರಸೆ ಬದಲಿಸಿದ್ದಾರೆ.

"ದೇವರು" ಮುನಿಸಿಕೊಂಡರೆ ಎಂಬ ಕಾರಣಕ್ಕೋ, ಏನೋ ಗೊತ್ತಿಲ್ಲ. ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂಬುದು ನನ್ನಾಸೆ ಎಂದು ಎಚ್ಡಿಕೆ ಹೇಳಿಕೆ ನೀದುವ ಮೂಲಕ ಹೈಕಮಾಂಡಿನ 'ದೇವರಂಥ ಮನುಷ್ಯ' ರಾಹುಲ್ ಗಾಂಧಿ ಅವರ ಓಲೈಕೆಗೆ ಮುಂದಾಗಿದ್ದಾರೆ.

ದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿ

ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಸ್ತಿತ್ವದಲ್ಲಿದ್ದು, ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಂತರ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದ್ದ ಕುಮಾರಸ್ವಾಮಿ ಅವರನ್ನು ರಾಹುಲ್ ಗಾಂಧಿ ದೇವರಂಥ ಮನುಷ್ಯ ಎಂದು ಹಾಡಿ ಹೊಗಳಿದ್ದರು. ಇದೀಗ, ಅವರೇ ಪ್ರಧಾನಿಯಾಗಬೇಕು ಎಂಬುದು ನಮ್ಮಾಸೆ ಎಂದಿದ್ದಾರೆ.

ಮಮತಾ ದೀದಿಗೂ ಮತ ಹಾಕಿದ್ದ ಎಚ್ಡಿಕೆ!

ಮಮತಾ ದೀದಿಗೂ ಮತ ಹಾಕಿದ್ದ ಎಚ್ಡಿಕೆ!

ಜ.21 ರಂದು ಕೋಲ್ಕತ್ತಾದಲ್ಲಿ ನಡೆದ ವಿಪಕ್ಷಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ, "ಮಮತಾ ಬ್ಯಾನರ್ಜಿ ಅವರು ಸಮರ್ಥ ಆಡಳಿತಗಾರ್ತಿ. ದೇಶವನ್ನು ಮುನ್ನಡೆಸುವ ಶಕ್ತಿ ಅವರಿಗಿದೆ. ಸದ್ಯಕ್ಕೆ ನಾಯಕತ್ವದ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಆಲೋಚಿಸುವ ಹಾಗೂ ಗಮನ ಹರಿಸುವ ಸಮಯ ಇದು" ಎಂದಿದ್ದರು.

ಮುಸ್ಲಿಂ ಮತಗಳ ಮೇಲೆ ಹಾಕಲು ಲಗ್ಗೆ, ಮಮತಾ ನೆತ್ತಿಯ ಮೇಲೆ ಜೆಡಿಎಸ್ ಪುಗ್ಗೆ ಮುಸ್ಲಿಂ ಮತಗಳ ಮೇಲೆ ಹಾಕಲು ಲಗ್ಗೆ, ಮಮತಾ ನೆತ್ತಿಯ ಮೇಲೆ ಜೆಡಿಎಸ್ ಪುಗ್ಗೆ

ರಾಹುಲ್ ಪ್ರಧಾನಿಯಾಗಲಿ!

ರಾಹುಲ್ ಪ್ರಧಾನಿಯಾಗಲಿ!

ಒಂದೇ ವಾರದಲ್ಲಿ ವರಸೆ ಬದಲಿಸಿರುವ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಎಂದಿಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ನೋದಲು ಬಯಸುತ್ತದೆ. ಅದಕ್ಕಾಗಿ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ನಮ್ಮ ಈ ನಿರ್ಧಾರದಲ್ಲಿ ಬದಲಾವಣೆಯಾಗುವುದಿಲ್ಲ ಎಂದಿದ್ದಾರೆ.

ರೆಸಾರ್ಟ್ ಪಾಲಿಟಿಕ್ಸ್: ಬಿಜೆಪಿ ಕಾಲೆಳೆದ ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್ ಪಾಲಿಟಿಕ್ಸ್: ಬಿಜೆಪಿ ಕಾಲೆಳೆದ ಮುಖ್ಯಮಂತ್ರಿ ಕುಮಾರಸ್ವಾಮಿ

ಸಮಜಾಯಿಷಿ ನೀಡಿದ ಎಚ್ಡಿಕೆ

ಸಮಜಾಯಿಷಿ ನೀಡಿದ ಎಚ್ಡಿಕೆ

"ಅಂದು ಸಮಾವೇಶದಲ್ಲಿ ನಾನು ಆಡಿದ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ನಾನು ಹೇಳಿದ್ದು, ಪ್ರಾದೇಶಿಕ ಪಕ್ಷಗಳಲ್ಲಿ ಹಲವು ಸಮರ್ಥ ಮುಖಂಡರಿದ್ದಾರೆ. ಅವರೆಲ್ಲ ನಾಯಕರಾಗಲು ಯೋಗ್ಯರು. ಮಾಯಾವತಿ, ಮಮತಾ ಬ್ಯಾನರ್ಜಿಯವರೆಲ್ಲರೂ ಉತ್ತಮ ನಾಯಕರು ಎಂದು ನಾನು ಹೇಳಿದ್ದೆ. ಆದರೆ ನಮ್ಮ ಉದ್ದೇಶವೇನಿದ್ದರೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು" ಎಂದು ಕುಮಾರಸ್ವಾಮಿ ನಂತರ ಸಮಜಾಯಿಷಿ ನೀಡಿದ್ದಾರೆ.

ಪ್ರಧಾನಿ ಮೋದಿ ಕಾಗದದ ಹುಲಿ

ಪ್ರಧಾನಿ ಮೋದಿ ಕಾಗದದ ಹುಲಿ

ಪ್ರಧಾನಿ ನರೇಂದ್ರ ಮೊದಿ ಅವರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ರಾಹುಲ್ ಗಾಂಧಿಗಿದೆ. ನರೇಂದ್ರ ಮೋದಿ ಕೇವಲ ಕಾಗದದ ಹುಲಿ, ಆದರೆ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ರಾಜಕಾರಣಿ. ಮೋದಿ ಚೆನ್ನಾಗಿ ಮಾತನಾಡುತ್ತಾರೆ, ಉತ್ತಮ ವಾಗ್ಮಿ ಎಂಬುದು ನಿಜ, ಸಾಮಾಜಿಕ ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಅವರ ಸಾಧನೆ ಏನು? ಎಂದು ಎಚ್ಡಿಕೆ ಪ್ರಶ್ನಿಸಿದರು.

English summary
Karnataka chief minister HD Kumaraswamy told, 'My part's decision is we want to support Rahul Gandhi as prime ministerial candidate. This is our commitment and it remains so.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X